ಚಿಂಚೋಳಿ : ಕಳೆದ ಒಂದು ವಾರದಿಂದ ಚಂದಾಪುರ ಪಟ್ಟಣದ ಪಟೇಲ್ ಕಾಲೊನಿಯ ಜನರ ನಿದ್ದೆಗೆಡಿಸಿದ್ದ ಕಾಡು ಬೆಕ್ಕನ್ನು ಇಂದು (ಶನಿವಾರ) ರಾತ್ರಿ ಹತ್ತೂವರೆ ಗಂಟೆ ಸುಮಾರಿಗೆ ಅರಣ್ಯ ಸಿಬ್ಬಂದಿಗಳು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಲಯ ಅರಣ್ಯಾಧಿಕಾರಿ ಸಂಜೀವ ಚವಾಣ್ ತಿಳಿಸಿದ್ದಾರೆ.
ಚಂದಾಪುರ್ ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ಶಾಲೆಯ ಪಕ್ಕದಲ್ಲಿರುವ ಕಾಲೇಜು ಕಟ್ಟಡದಲ್ಲಿ ರಾತ್ರಿ ಒಂಬತ್ತೂವರೆ ಗಂಟೆಯ ಹೊತ್ತಿಗೆ ಓಡಿ ಹೋಗುತ್ತಿದ್ದ ಕಾಡುಬೆಕ್ಕನ್ನು ನೋಡಿದ ಅಲ್ಲಿನ ಕಾವಲುಗಾರ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ. ಅರಣ್ಯ ಸಿಬ್ಬಂದಿಗಳಾದ ಗಜಾನಂದ, ಸಿದ್ಧಾರೂಢ, ನಟರಾಜ್, ಅಮೀರ್, ಹಾಲೇಶ್, ಕೋರವಾರ ತುಕಾರಾಮ್, ದೇವಪ್ಪ ಪ್ರಭು ಮುಂತಾದವರು ಕಾಲೇಜು ಸುತ್ತ ಬಲೆ ಬೀಸಿ ಚಿರತೆ ಮರಿಯಂತೆ ಹೋಲುವ ಕಾಡು ಬೆಕ್ಕನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಅಹಮದ್ ಪಟೇಲ್ ಕಾಲೊನಿಯಲ್ಲಿ ರಾತ್ರಿ ಹಗಲು ಓಡಾಡು ತಿರುಗುವುದರಿಂದ ಜನರು ಮತ್ತು ಚಿಕ್ಕ ಮಕ್ಕಳು ಭೀತಿಗೊಂಡಿದ್ದರು. ಕಾಡುಬೆಕ್ಕು ಹಿಡಿಯುವ ಸಂದರ್ಭದಲ್ಲಿ ಹಾಲೇಶ್ ಇವರ ಕೈಗೆ ಬೆಕ್ಕು ಪರಚಿ ಗಾಯಗೊಳಿಸಿದೆ.
2 ವರ್ಷದ ಗಂಡು ಚಿರತೆ ಮರಿಯಂತೆ ಓಡಾಡುತ್ತಿದ್ದ ಕಾಡುಬೆಕ್ಕನ್ನು ಸೆರೆಹಿಡಿದ ಅರಣ್ಯ ಇಲಾಖೆ ಸಿಬ್ಬಂದಿಗಳ ಕಾರ್ಯಕ್ಕೆ ಪಟೇಲ್ ಕಾಲೊನಿಯ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Related Articles
ಇದನ್ನೂ ಓದಿ : ಸಿದ್ದು ಸಿಎಂ ಆಗುವ ಕನಸು ನನಸಾಗದು: ಸದಾನಂದ ಗೌಡ