ಚಿಂಚೋಳಿ : ತಾಲ್ಲೂಕಿನ ಧರ್ಮ ಸಾಗರ ತಾಂಡಾದಲ್ಲಿ ಸುರಿದ ಭಾರಿ ಮಳೆಯಿಂದಾಗಿ ವಿದ್ಯುತ್ ಕಂಬದ ಬಳಿ ಮೇಯಲು ಹೋದ ಗ್ರಾಮದೇವತೆಯ ಗೂಳಿಯೊಂದು ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.
ಧರ್ಮಸಾಗರ ತಾಂಡಾದಲ್ಲಿ ಭಾರಿ ಮಳೆಯಾಗುತ್ತಿದ್ದು ಈ ವೇಳೆ ವಿದ್ಯುತ್ ಟಿಸಿ ಬಳಿ ಹುಲ್ಲು ಮೇಯಲು ಹೋದ ವೇಳೆ ವಿದ್ಯುತ್ ಸ್ಪರ್ಶ ಉಂಟಾಗಿ ಗ್ರಾಮದೇವತೆಯ ಹೆಸರಿನ ಮೇಲೆ ಬಿಡಲಾದ ಗೂಳಿ ಮೃತಪಟ್ಟಿದೆ, ಸುದ್ದಿ ತಿಳಿದು ಸ್ಥಳಕ್ಕೆ ಬಂದ ತಾಂಡಾದ ಜನರು ಗೋಳಿ ಸಾವನ್ನಪಿರುವುದನ್ನು ಕಂಡು ಮರುಗಿದ್ದಾರೆ.
ವಿದ್ಯುತ್ ಪರಿವರ್ತಕ ಬಳಿ ತಂತಿಗಳು ನೆಲಕ್ಕೆ ಬಾಗಿಕೊಂಡಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ತಾಂಡದ ಶ್ರೀಕಾಂತ ರಾಠೋಡ ತಿಳಿಸಿದ್ದಾರೆ.
ಇದನ್ನೂ ಓದಿ : ವಿದೇಶ ಪ್ರಯಾಣ ಮಾಡಿದವರಿಗೇ ಕೋವಿಡ್ ಸೋಂಕು ಪತ್ತೆ: ಮಾಸ್ಕ್ ಕಡ್ಡಾಯ!