Advertisement

ಚಿಂಚೋಳಿ: ವಿದ್ಯುತ್‌ ತಂತಿ ತಗುಲಿ ತಾಯಿ ಮಕ್ಕಳು ಸೇರಿ ಮೂವರ ದುರ್ಮರಣ

12:45 PM Mar 19, 2023 | Team Udayavani |

ಚಿಂಚೋಳಿ: ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ವಿದ್ಯುತ್‌ ಸರ್ವಿಸ್‌ ವಯರ್‌ ತುಂಡಾಗಿ ನೀರಿನಲ್ಲಿ ಬಿದ್ದಿದ್ದು, ಇದರಿಂದ ವಿದ್ಯುತ್‌ ತಗುಲಿ 2 ಮಕ್ಕಳು ಹಾಗೂ ತಾಯಿ ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ನಡೆದಿದೆ.

Advertisement

ಪಟ್ಟಣದ ಝರಣಮ್ಮ (45), ಮಹೇಶ (18), ಸುರೇಶ (16) ಮೃತಪಟ್ಟವರು.

ರಾತ್ರಿ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ವಿದ್ಯುತ್ ತಂತಿ ಕಡಿದು ನೆಲಕ್ಕೆ ಬಿದ್ದಿತ್ತು. ರಾತ್ರಿ 1 ಗಂಟೆಗೆ ಮಕ್ಕಳು ದನಗಳಿಗೆ ಹಾಕುವ ಹೊಟ್ಟು ಮುಚ್ಚುಲು ಹೋದಾಗ ವಿದ್ಯುತ್‌ ಪ್ರವಹಿಸಿ ಈ ಘಟನೆ ನಡೆದಿದೆ. ಮಕ್ಕಳನ್ನು ಹಿಂಬಾಲಿಸಿ ಬಂದ ತಾಯಿಗೂ ವಿದ್ಯುತ್‌ ತಗುಲಿ ಮೂವರೂ ಮೃತಪಟ್ಟಿದ್ದಾರೆ.

ಎಲ್ಲರ ಮೃತದೇಹಗಳನ್ನು ಸರಕಾರಿ ಆಸ್ಪತ್ರೆ ಸೇರಿಸಲಾಗಿದೆ. ಘಟನೆಯ ಸ್ಥಳಕ್ಕೆ ಚಿಂಚೋಳಿ ಪೋಲಿಸರು ಭೇಟಿ ನೀಡಿದ್ದಾರೆ.

ಮೃತರ‌ ಕುಟುಂಬಕ್ಕೆ ಪ್ರತಿಯೊಬ್ಬರಿಗೆ 25 ಲಕ್ಷ ರೂ‌. ಪರಿಹಾರ ನೀಡುವಂತೆ ‌ಒತ್ತಾಯಿಸಿ ಸ್ಥಳೀಯರು ಜೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next