Advertisement

ಚಿಂಚನಸೂರ-ಸಂಗೋಳಗಿ ರಸ್ತೆ ಕಳಪೆ: ಆರೋಪ

02:57 PM Jul 26, 2022 | Team Udayavani |

ಆಳಂದ: ಕಲಬುರಗಿ ಗ್ರಾಮೀಣ ಮತ ಕ್ಷೇತ್ರದ ತಾಲೂಕಿನ ಚಿಂಚನಸೂರನಿಂದ ಸಂಗೋಳಗಿ ಗ್ರಾಮದ ಪ್ರೌಢಶಾಲೆ ವರೆಗಿನ 4ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 2ಕಿ.ಮೀ ರಸ್ತೆ ಕಾಮಗಾರಿ ಕ್ರಿಯಾ ಯೋಜನೆಯಂತೆ ಆಗದೇ ಕಳಪೆಯಾಗುತ್ತಿದೆ ಎಂದು ದಲಿತ ಹಕ್ಕುಗಳ ಜಿಲ್ಲಾ ಸಮಿತಿ ಸಂಚಾಲಕ ಸುಧಾಮ ಧನ್ನಿ, ಸಹ ಸಂಚಾಲಕ ಪಾಂಡು ರಂಗ ಮಾವೀನಕರ್‌ ದೂರಿದ್ದಾರೆ.

Advertisement

ಈ ರಸ್ತೆ ಚಿಂಚನಸೂರನಿಂದ ನರೋಣಾ ಮಾರ್ಗದ ಐದು ಕಿ.ಮೀ ರಸ್ತೆಯಾಗಿದೆ. ಸದ್ಯ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದ ಅಡಿ ಚಿಂಚನಸೂರನಿಂದ ಸಂಗೋಳಗಿ ವರೆಗಿನ 2ಕಿ.ಮೀ ರಸ್ತೆ ಕಾಮಗಾರಿಗೆ 4ಕೋಟಿ ರೂ. ಅನುದಾನವಿದೆ. ಕೈಗೆತ್ತಿಕೊಂಡ ಈ ಕಾಮಗಾರಿ ಕ್ರಿಯಾ ಯೋಜನೆಯಂತೆ ನಡೆಯುತ್ತಿಲ್ಲ. ಮುರುಮ, ಕಂಕರ ಬಳಸದೇ ಅವೈಜ್ಞಾನಿಕವಾಗಿ ನಡೆಯುತ್ತಿದೆ. ಮುರುಮ ಬದಲು ಸತ್ವ ಕಳೆದುಕೊಂಡ ಮಣ್ಣು ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾಮಗಾರಿಯ ಕ್ರಿಯಾ ಯೋಜನೆಯಂತೆ ಒಂದುವರೆ ಮೀಟರ್‌ ಆಳವಾಗಿ ತಗ್ಗು ತೆಗೆದು ಮುರುಮ ಸೋಲಿಂಗ್‌, ಬಿಳಿ ಸಿಮೆಂಟ್‌ ಹಾಕಿ ತಳಪಾಯ ಮಾಡುವ ನಿಯಮವನ್ನು ಗಾಳಿಗೆ ತೂರಿದ್ದಾರೆ. ತರಾತುರಿಯಲ್ಲಿ ಕಳಪೆ ಕಾಮಗಾರಿ ಮಾಡಿ ಹಣ ಲೂಟಿ ಮಾಡುವ ಷಡ್ಯಂತ್ರ ನಡೆಸಿದ್ದಾರೆ. ಈ ಕುರಿತು ರಾಜ್ಯದ ಮುಖ್ಯ ಇಂಜಿನಿಯರ್‌ ಗೆ ದೂರು ನೀಡಲಾಗುವುದು. ಕೂಡಲೇ ಕಾಮಗಾರಿ ತಡೆಹಿಡಿದು ಸಂಬಂ ಧಿತ ಅ ಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next