Advertisement

ಕೋವಿಡ್: ಚೀನದ ಹಲವೆಡೆ ಮತ್ತೆ ಲಾಕ್‌ಡೌನ್‌; ಪ್ರಯಾಣದ ಮೇಲೆ ನಿರ್ಬಂಧ

07:13 PM Oct 10, 2022 | Team Udayavani |

ಬೀಜಿಂಗ್‌: ಕೋವಿಡ್ ಸೋಂಕಿನ ಉಗಮ ಸ್ಥಾನವಾದ ಚೀನದ ಕೆಲ ನಗರಗಳಲ್ಲಿ ಈಗಲೂ ಸೋಂಕು ಕಾಣಿಸಿಕೊಳ್ಳುತ್ತಿದೆ.

Advertisement

ಕಳೆದ ವಾರ ಚೀನದಲ್ಲಿ ಸಾಲು ಸಾಲು ರಜೆಗಳಿದ್ದ ಹಿನ್ನೆಲೆ ಶಾಂಕ್ಸಿ ಪ್ರಾಂತ್ಯದ ಫೆನ್ಯಂಗ್‌ ನಗರದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದೆ.

12 ದಿನಗಳಲ್ಲಿ 2,000ಕ್ಕೂ ಅಧಿಕ ಪ್ರಕರಣಗಳು ದೃಢವಾಗಿದ್ದರಿಂದಾಗಿ ಸೋಮವಾರದಿಂದ ನಗರದಲ್ಲಿ ಲಾಕ್‌ಡೌನ್‌ ಹೇರಲಾಗಿದೆ.

ಬೇರೆ ನಗರಗಳ ವಾಹನಗಳ ಪ್ರವೇಶ ಮತ್ತು ಹಾಗೂ ಫೆನ್ಯಂಗ್‌ನಿಂದ ಬೇರೆ ನಗರಕ್ಕೆ ಪ್ರವಾಸಕ್ಕೂ ನಿರ್ಬಂಧ ಹೇರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next