Advertisement

ಒಬಿಒಆರ್‌: ಭಾರತದ ಕಳವಳ ತಳ್ಳಿಹಾಕಿದ ಚೀನಾ

03:45 AM May 16, 2017 | Team Udayavani |

ಬೀಜಿಂಗ್‌: ಒನ್‌ ರೋಡ್‌ ಒನ್‌ ಬೆಲ್ಟ್ (ಒಬಿಒಆರ್‌) ಯೋಜನೆ ಮೂಲಕ ಚೀನಾ ಸಾರ್ವಭೌಮತೆಯನ್ನು ಉಲ್ಲಂಘಿಸುತ್ತಿದೆ ಎಂಬ ಭಾರತದ ವಾದವನ್ನು ಚೀನಾ ತಳ್ಳಿ ಹಾಕಿದೆ. ಈ ಬಗ್ಗೆ ಅದು ಒಬಿಒಆರ್‌ ಶೃಂಗದ ವೇಳೆ ಹೇಳಿಕೆ ನೀಡಿದ್ದು, ಪಾಕ್‌-ಚೀನಾದ ಸಿಪೆಕ್‌ ಕಾರಿಡಾರ್‌ ಯೋಜನೆಯಿಂದ ಕಾಶ್ಮೀರ ವಿಚಾರದಲ್ಲಿ ಬೀಜಿಂಗ್‌ ನಿಲುವಿನ ಮೇಲೆ ಪರಿಣಾಮ ಬೀರಲ್ಲ ಎಂದು ಹೇಳಿದೆ. 

Advertisement

ಒಬಿಒಆರ್‌ ಮೂಲಕ ಚೀನಾ ತನ್ನ ಅಧಿಪತ್ಯ ವಿಸ್ತರಿಸಲು ಯತ್ನಿಸುತ್ತಿದೆ ಎಂಬ ಭಾರತದ ಕಳವಳಗಳ ಬೆನ್ನಲ್ಲೇ ಚೀನಾ ಹೇಳಿಕೆ ನೀಡಿದ್ದು, ಯೋಜನೆಯೊಂದಿಗೆ 100 ದೇಶಗಳು ಮತ್ತು ವಿವಿಧ ಸಂಸ್ಥೆಗಳು ಕೈಜೋಡಿಸಿವೆ ಎಂದು ಹೇಳಿದೆ.

2013ರಲ್ಲೇ ಈ ಯೋಜನೆ ಪ್ರಸ್ತಾವಿಸಿದ್ದು, ವಿವಿಧ ದೇಶಗಳು ಬೆಂಬಲ ವ್ಯಕ್ತಪಡಿಸಿವೆ ಎಂದು ಚೀನಾ ಹೇಳಿದೆ. 

ಸಿಪೆಕ್‌ ಯೋಜನೆಯಲ್ಲಿ ಭಾರತದ ಸಾರ್ವಭೌಮತೆ ಯನ್ನು ಚೀನಾ ಉಲ್ಲಂಘಿಸಿದೆ ಎಂದು ವಿದೇಶಾಂಗ ಖಾತೆ ವಕ್ತಾರ ಗೋಪಾಲ್‌ ಬಗ್ಲೆ ಹೇಳಿದ ಬೆನ್ನಲ್ಲೇ ಚೀನಾದಿಂದ ಈ ಸ್ಪಷ್ಟನೆ ಹೊರಬಿದ್ದಿದೆ. ಶೃಂಗವನ್ನು ಭಾರತ ಕ್ಕರಿಸಿದ್ದು, ಈ ಬಗ್ಗೆ ಚೀನಾ ಯಾವುದೇ ಹೇಳಿಕೆ ನೀಡಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next