ಹಾಂಕಾಂಗ್: ಚೀನ ಅಣ್ವಸ್ತ್ರಸಜ್ಜಿತ ಸಬ್‌ಮರಿನ್ ಒಂದನ್ನು ಸಿದ್ಧಪಡಿಸಿದೆಯಾ?
ಹೀಗೊಂದು ವಿಶ್ಲೇಷಣೆಗಳು ಶುರುವಾಗಿವೆ. ಇದಕ್ಕೆ ಕಾರಣ ಪ್ಲಾನೆಟ್ ಲ್ಯಾಬ್ಸ್ ಎಂಬ ಸಂಸ್ಥೆಗೆ ಸಿಕ್ಕಿದ ಉಪಗ್ರಹಾಧಾರಿತ ಚಿತ್ರ.
ಕಳೆದ ವರ್ಷ ನವೆಂಬರ್‌ನಲ್ಲೇ ಅಮೆರಿಕದ ಪೆಂಟಗಾನ್, ಖಂಡಾಂತರ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವುಳ್ಳ ಸಬ್‌ಮರಿನ್‌ಗಳನ್ನು ಚೀನ ಇನ್ನು ಕೆಲವು ವರ್ಷಗಳಲ್ಲೇ ತಯಾರಿಸುವ ಸಾಧ್ಯತೆಯಿದೆ ಎಂದು ವರದಿ ಮಾಡಿತ್ತು.
ಅದರ ಬೆನ್ನಲ್ಲೇ ಚೀನದ ಲಯನಿಂಗ್ ಪ್ರಾಂತ್ಯದ ಹುಲುದಾವೊ ಬಂದರಿನಲ್ಲಿ ಕಂಡ ಸಬ್‌ಮರಿನ್ ಚಿತ್ರ ಪ್ರಕಟವಾಗಿದೆ. ಅದರ ರಚನೆಗಳು, ಅದರಲ್ಲಿನ ಕೊಳವೆಗಳನ್ನು ನೋಡಿದಾಗ ಅದು ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ ಎಂಬುದಕ್ಕೆ ಪುಷ್ಟಿ ನೀಡಿದೆ.