Advertisement

ಹೊಸ ಸೋಂಕಿಗೆ ಚೀನವೇ ಹಾಟ್‌ ಸ್ಪಾಟ್‌?

12:42 PM Jun 03, 2021 | Team Udayavani |

ನ್ಯೂಯಾರ್ಕ್‌/ಹೊಸದಿಲ್ಲಿ: ಈಗಾಗಲೇ ಕೊರೊನಾ ವೈರಸ್‌ ಜಾಗತಿಕವಾಗಿ ವ್ಯಾಪಿಸಿ ಮನು ಕುಲವನ್ನು ಹೈರಾಣಾಗಿಸಿದೆ. ಹೀಗಿರುವಾಗ ಭವಿಷ್ಯದಲ್ಲಿ ಕಾಡಲಿರುವ ಕೊರೊನಾ ವೈರಾಣುವಿಗೆ ಚೀನ, ಜಪಾನ್‌, ಫಿಲಿ ಪ್ಪೀನ್ಸ್‌ ಮತ್ತು ಥಾಯ್ಲೆಂಡ್‌ಗಳೇ “ಹಾಟ್‌ ಸ್ಪಾಟ್‌’ ಗಳಾಗಬಹುದು ಎಂಬ
ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

Advertisement

ಈ ಕುರಿತ ಅಧ್ಯಯನ ವರದಿಯೊಂದು ನೇಚರ್‌ ಫಂಡ್ ಜರ್ನಲ್‌ ನಲ್ಲಿ ಪ್ರಕಟವಾಗಿದೆ. ಜಾಗ ತಿಕವಾಗಿ ಬದಲಾಗುತ್ತಿರುವ ಭೂಮಿಯ ಬಳಕೆ, ಅರಣ್ಯಗಳ ವಿಭಾಗೀಕರಣ, ಕೃಷಿ ವ್ಯಾಪ್ತಿ ವಿಸ್ತ ರಣೆ, ಜಾನುವಾರು ಕೇಂದ್ರಿತ ಉದ್ದಿಮೆಗಳು ಹೆಚ್ಚಿರುವ ಪ್ರದೇಶಗಳಲ್ಲಿ ಬಾವಲಿಯಂಥ ಸೋಂಕಿನ ವಾಹಕಗಳು ಯಥೇಚ್ಛವಾಗಿ ಸೃಷ್ಟಿಯಾಗುತ್ತಿವೆ. ಬಾವಲಿಗಳಿಂದಾಗಿ ವಿವಿಧ ರೀತಿಯ ಸೋಂಕು ಗಳು ಮಾನವನಿಗೆ ಹರಡುತ್ತವೆ ಎಂದು ವರದಿ ಹೇಳಿದೆ.

ಅದರಂತೆ, ಬಾವಲಿಗಳ ಸಂತಾನವೃದ್ಧಿಗೆ ಚೀನ, ಜಪಾನ್‌, ಫಿಲಿಪ್ಪೀನ್ಸ್‌, ಥಾಯ್ಲೆಂಡ್‌ ಗಳು ಹೇಳಿ ಮಾಡಿಸಿದಂತಿವೆ. ಇಲ್ಲಿ ಮಾಂಸದ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆಯಿರುವ ಕಾರಣ ಜಾನು ವಾರು ಉದ್ದಿಮೆ ವಿಸ್ತರಣೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಕೊರೊನಾದಂಥ ಹಲವು ಸಾಂಕ್ರಾ ಮಿಕಗಳಿಗೆ ಈ ನೆಲಗಳೇ ಮೂಲಗಳಾಗುವ ಸಾಧ್ಯತೆ ಹೆಚ್ಚಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.

ಪಾಸಿಟಿವಿಟಿ ಇಳಿಕೆ: ಈ ನಡುವೆ, ಭಾರತದಲ್ಲಿ ದೈನಂದಿನ ಸೋಂಕಿನ ಪಾಸಿಟಿವಿಟಿ ಪ್ರಮಾಣ ಶೇ.6.57ಕ್ಕೆ ಇಳಿಕೆಯಾಗಿದೆ. ಮಂಗಳವಾರದಿಂದ ಬುಧವಾರಕ್ಕೆ 1.32 ಲಕ್ಷ ಹೊಸ ಪ್ರಕರಣ ದೃಢಪಟ್ಟಿದ್ದರೆ, 3,207 ಮಂದಿ ಅಸುನೀಗಿದ್ದಾರೆ. ಚೇತರಿಕೆ ಪ್ರಮಾಣ ಶೇ.92.48ಕ್ಕೆ ಏರಿಕೆಯಾಗಿದೆ.

ಲಸಿಕೆ ವರದಿಗೆ ಕೇಂದ್ರ ಆಕ್ಷೇಪ: ಈ ತಿಂಗಳಲ್ಲಿ ರಾಜ್ಯಗಳಿಗೆ 120 ದಶ ಲಕ್ಷ ಡೋಸ್‌ ಲಸಿಕೆ ನೀಡಲಾಗುತ್ತದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ. ಮೇನಲ್ಲಿ ಲಭ್ಯವಿದ್ದ 79 ದಶ ಲಕ್ಷ ಡೋಸ್‌ ಪೈಕಿ 58 ದಶ ಲಕ್ಷ ಡೋಸ್‌ ಲಸಿಕೆ ನೀಡಲಾಗಿದೆ. ಜೂ.1 ಬೆಳಗ್ಗೆ 7 ಗಂಟೆವರೆಗಿನ ಮಾಹಿತಿಯಂತೆ ಮೇ 1-31ರ ಅವಧಿಯಲ್ಲಿ ರಾಜ್ಯಗಳಲ್ಲಿ 61.06 ದಶಲಕ್ಷ ಡೋಸ್‌ ಲಸಿಕೆ ನೀಡಲಾಗಿದೆ. 16.12 ದಶಲಕ್ಷ ಡೋಸ್‌ಗಳು ಬಳಕೆಗೆ ಬಾಕಿ ಉಳಿದಿವೆ’ ಎಂದು ಆರೋಗ್ಯ ಇಲಾಖೆ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next