Advertisement

ಹಿಂದೂ ಮಹಾ ಸಾಗರಕ್ಕೆ ಅಪ್ಪಳಿಸಿದ ಚೀನಾದ ಅತೀ ದೊಡ್ಡ ರಾಕೆಟ್

10:01 AM May 09, 2021 | Team Udayavani |

ಬೀಜಿಂಗ್: ಚೀನಾದ ಅತೀ ದೊಡ್ಡ ರಾಕೆಟ್ ಇಂದು ಹಿಂದೂ ಮಹಾ ಸಾಗರಕ್ಕೆ ಬಂದು ಅಪ್ಪಳಿಸಿದೆ. ಇದರಿಂದ ಕೆಲವು ದಿನಗಳ ಕುತೂಹಲ- ಆತಂಕಕ್ಕೆ  ತೆರೆ ಬಿದ್ದಿದೆ.

Advertisement

ಚೀನಾದ ರಾಕೆಟ್ 5ಬಿ ಭೂಮಿಯ ಪದರಕ್ಕೆ ಪ್ರವೇಶಿಸುತ್ತಿದ್ದಂತೆ ಅದರ ಕೆಲವು ಭಾಗಗಳು ನಾಶವಾಗಿದೆ. ಉಳಿದ ಅವಶೇಷಗಳು ಮಾಲ್ಡೀವ್ಸ್ ಬಳಿ ಹಿಂದೂ ಮಹಾ ಸಾಗರಕ್ಕೆ ರವಿವಾರ ಮುಂಜಾನೆ ಬಂದು ಬಿದ್ದಿದೆ.

ಇದನ್ನೂ ಓದಿ:ಕೋವಿಡ್ ನಿಯಂತ್ರಣಕ್ಕೆ ಹೀಗೆ ಮಾಡಿ: ಸರ್ಕಾರಕ್ಕೆ ಹಲವು ಸಲಹೆ ನೀಡಿದ ಸಿದ್ದರಾಮಯ್ಯ

ಕಳೆದ ವರ್ಷ ಉಡಾವಣೆಯಾಗಿದ್ದ 5ಬಿ ಯ ಮೊದಲ ರಾಕೆಟ್ ನ ಭಾಗಗಳು ಐವರಿಕೋಸ್ಟ್ ನ ಭೂ ಭಾಗದಲ್ಲಿ ಬಿದ್ದಿತ್ತು. ಹೀಗಾಗಿ ಈ ಬಾರಿ ರಾಕೆಟ್ ಎಲ್ಲಿ ಬಂದು ಬೀಳಬಹುದು ಎಂಬ ಕುತೂಹಲ ಮೂಡಿತ್ತು. ಹಲವು ದೇಶಗಳ ಆತಂಕಕ್ಕೂ ಕಾರಣವಾಗಿತ್ತು.

Advertisement

ಆದರೆ ಇದೀಗ ಹಿಂದೂ ಮಹಾ ಸಾಗರಕ್ಕೆ ಈ ರಾಕೆಟ್ ನ ಅವಶೇಷಗಳು ಬಂದು ಅಪ್ಪಳಿಸಿದ ಕಾರಣ, ಅನಾಹುತಗಳು ತಪ್ಪಿದೆ.

ಇದನ್ನೂ ಓದಿ: ಶಾಲೆಯ ಎದುರು ಕಾರ್ ಬಾಂಬ್ ಸ್ಪೋಟ: 55ಕ್ಕೇರಿದ ಸಾವಿನ ಸಂಖ್ಯೆ, 150ಕ್ಕೂ ಹೆಚ್ಚು ಮಂದಿಗೆ ಗಾಯ

Advertisement

Udayavani is now on Telegram. Click here to join our channel and stay updated with the latest news.

Next