ಬೀಜಿಂಗ್: ದೇಶಿಯವಾಗಿ ನಿರ್ಮಿಸಲಾದ ಚೀನಾದ ಪ್ರಯಾಣಿಕ ವಿಮಾನ ಸಿ919 ತನ್ನ ಮೊದಲ ವಾಣಿಜ್ಯ ಹಾರಾಟವನ್ನು ಭಾನುವಾರ ಯಶಸ್ವಿಯಾಗಿ ಪೂರ್ಣಗೊಳಿಸಿತು. ಈ ಮೂಲಕ ಬೋಯಿಂಗ್ ಮತ್ತು ಏರ್ಬಸ್ನಂತಹ ಪಾಶ್ಚತ್ಯ ಕಂಪನಿಗಳಿಗೆ ಸ್ಪರ್ಧೆ ಒಡ್ಡಲು ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಅಧಿಕೃತವಾಗಿ ಚೀನಾ ಪ್ರವೇಶ ಪಡೆದಿದೆ. ಚೀನಾದ ಮೊದಲ ವಾಣಿಜ್ಯ ಪ್ರಯಾಣಿಕ ವಿಮಾನ ಸಿ919 ಶಾಂಘೈನಿಂದ ಬೀಜಿಂಗ್ಗೆ ಮೊದಲ ಪ್ರಯಾಣ ಕೈಗೊಂಡಿತು. ಚೀನಾದ ಸರ್ಕಾರಿ ಸ್ವಾಮ್ಯದ ಚೀನಾ ಈಸ್ಟರ್ನ್ ಏರ್ಲೈನ್ಸ್ಗೆ ಈ ವಿಮಾನ ಸೇರಿದ್ದಾಗಿದೆ. ಅವಳಿ ಎಂಜಿನ್ ಹೊಂದಿರುವ ಈ ವಿಮಾನ, 164 ಸೀಟುಗಳ ಸಾಮರ್ಥ್ಯ ಹೊಂದಿದೆ.
Advertisement