Advertisement

ಗಡಿ ಸಮೀಪದಲ್ಲಿ ಚೀನ ಅಣೆಕಟ್ಟು ನಿರ್ಮಾಣ !

08:58 PM Jan 17, 2023 | Team Udayavani |

ನವದೆಹಲಿ: ಗಡಿ ಪ್ರದೇಶಗಳಲ್ಲಿ ಚೀನದಿಂದ ಒಂದಿಲ್ಲೊಂದು ಉಪಟಳ ಎದುರಾಗುತ್ತಲೇ ಇದ್ದು, ಇದೀಗ ಅರುಣಾಚಲ ಪ್ರದೇಶದ ಗಡಿಗೆ ಸಮೀಪದಲ್ಲಿರುವ ಮೆಡಾಗ್‌ ಗಡಿಯಲ್ಲಿ ಚೀನಾ 60 ಸಾವಿರ ಮೆಗಾವ್ಯಾಟ್‌ ಸಾಮರ್ಥ್ಯದ ಅಣೆಕಟ್ಟು ನಿರ್ಮಿಸುತ್ತಿದೆ. ಈ ಬಗ್ಗೆ ಭಾರತ ಆತಂಕ ವ್ಯಕ್ತಪಡಿಸಿದೆ .

Advertisement

ಯಾರ್ಲುಂಗ್‌ ತ್ಸಾಂಗೊ ನದಿಯಲ್ಲಿ ಚೀನಾ ಅಣೆಕಟ್ಟು ನಿರ್ಮಿಸುತ್ತಿದ್ದು, ಈ ಮೂಲಕ ಬ್ರಹ್ಮಪುತ್ರ ನದಿ ನೀರನ್ನು ತಿರುಗಿಸುವ ಸಾಧ್ಯತೆಗಳಿದೆ. ಅಲ್ಲದೇ, ಅಣೆಕಟ್ಟು ನಿರ್ಮಾಣದಿಂದ ಅರುಣಾಚಲ ಪ್ರದೇಶಕ್ಕೆ ಬರಪರಿಸ್ಥಿತಿ ಅಥವಾ ಪ್ರವಾಹ ಪರಿಸ್ಥಿತಿಗಳು ಎದುರಾಗುವ ಸಾಧ್ಯತೆಯೂ ಇದೆ ಎಂದು ಕೇಂದ್ರ ಇಂಧನ ಸಚಿವಾಲಯದ ಮೂಲಗಳು ತಿಳಿಸಿವೆ.

ಭಾರತ ಮಾತ್ರವಲ್ಲದೇ, ಬಾಂಗ್ಲಾದೇಶಕ್ಕೂ ಚೀನದ ಈ ಅಣೆಕಟ್ಟು ನಿರ್ಮಾಣ ಕಂಟಕವೇ ಆಗಿದ್ದು, ಈಗಾಗಲೇ ಭಾರತ ಈ ಬಗ್ಗೆ ಎಚ್ಚೆತ್ತುಕೊಂಡು, ಅರುಣಾಚಲ ಪ್ರದೇಶದಲ್ಲಿ ಉತ್ತಮ ಸಂಗ್ರಹ ಸಾಮರ್ಥ್ಯವಿರುವ ಅಣೆಕಟ್ಟುಗಳ ನಿರ್ಮಾಣಕ್ಕೆ ಮುಂದಾಗಿದೆ ಎನ್ನಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next