Advertisement

ದಕ್ಷಿಣ ಚೀನಾ ಸಮುದ್ರದಲ್ಲಿ ಏಕಸ್ವಾಮ್ಯತೆ ಬಯಸಲ್ಲ: ಚೀನಾ

06:50 PM Nov 22, 2021 | Team Udayavani |

ಬೀಜಿಂಗ್‌/ಮನಿಲಾ: ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯಲ್ಲಿ ಚೀನಾ ಯಾವುದೇ ರೀತಿಯಲ್ಲಿ ಪ್ರಾಬಲ್ಯ ಅಥವಾ ಏಕಸ್ವಾಮ್ಯತೆ ಹೊಂದಲು ಬಯಸುವುದಿಲ್ಲವೆಂದು ಚೀನಾ ಅಧ್ಯಕ್ಷ ಕ್ಸಿಜಿನ್‌ಪಿಂಗ್‌ ಹೇಳಿದ್ದಾರೆ.

Advertisement

ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ಆಸಿಯಾನ್‌) ದ ಸಮ್ಮೇಳನದಲ್ಲಿ ಮಾತನಾಡಿದ ಕ್ಸಿ ಜಿನ್‌ಪಿಂಗ್‌ ನೆರೆಯ ಸಣ್ಣ ದೇಶಗಳ ಮೇಲೆ ಚೀನಾ ಪ್ರಾಬಲ್ಯ ತೋರುವುದಿಲ್ಲ ಎಂದಿದ್ದಾರೆ.

ದೇಶಗಳು ಹೊಂದಿರುವ ಭೌಗೋಳಿಕ ಗಾತ್ರವನ್ನು ಅನುಸರಿಸಿ, ಅವುಗಳ ವಿರುದ್ಧ ಪ್ರಾಬಲ್ಯ ಹೊಂದಲು ಬಯಸುವುದಿಲ್ಲ ಎಂದಿದ್ದಾರೆ.

ಬೋಟ್‌ಗಳ ನಿಯೋಜನೆ:
ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯಲ್ಲಿ ಫಿಲಿಪ್ಪೀನ್ಸ್‌ ಮತ್ತೆ ತನ್ನ ಎರಡು ಯುದ್ಧ ನೌಕೆಗಳನ್ನು ನಿಯೋಜಿಸಿದೆ. ಕಳೆದ ವಾರ ಚೀನಾ ಸೈನಿಕರು ತನ್ನ ಯೋಧರನ್ನು ಬಲವಂತವಾಗಿ ಹಿಮ್ಮೆಟ್ಟಿಸಿದ್ದಕ್ಕೆ ಪ್ರತಿಯಾಗಿ ಈ ಕ್ರಮ ಕೈಗೊಂಡಿದೆ.

ಇದನ್ನೂ ಓದಿ:ತೀವ್ರ ವಿರೋಧಕ್ಕೆ ಮಣಿದ ಆಂಧ್ರಪ್ರದೇಶ ಸಿಎಂ; ವಿವಾದಿತ 3 ರಾಜಧಾನಿಗಳ ಮಸೂದೆ ವಾಪಸ್

Advertisement

ಮನಿಲಾದಲ್ಲಿ ಮಾತನಾಡಿದ ರಕ್ಷಣಾ ಸಚಿವ ಡೆಲ್ಫಿನ್‌ ಲೆರೆನಾlನಾ ಚೀನಾ ಕೃತ್ಯದಿಂದಾಗಿ ಇಬ್ಬರು ನಾಗರಿಕರು ಗಾಯಗೊಂಡಿದ್ದರು. ಹೀಗಾಗಿ, ಮತ್ತೆ ನೌಕೆಗಳನ್ನು ನಿಯೋಜಿಸಲಾಗುತ್ತದೆ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next