Advertisement

ಚೀನದಿಂದ ವಿಶ್ವದ ಪ್ರಥಮ Artificial intelligence news anchor

04:38 PM Nov 09, 2018 | udayavani editorial |

ಬೀಜಿಂಗ್‌ : ವಿಶ್ವದ ಮೊತ್ತ ಮೊದಲ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (ಕೃತಕ ಬುದ್ಧಿಮತ್ತೆ) ನ್ಯೂಸ್‌ ಆ್ಯಂಕರ್‌ ಅನ್ನು ಚೀನ ಅನಾವರಣಗೊಳಿಸಿದೆ.

Advertisement

ಮೊನ್ನೆ ಬುಧವಾರ ವೂಝೆನ್‌ ನಲ್ಲಿ ನಡೆದಿದ್ದ ವಿಶ್ವ ಅಂತರ್‌ಜಾಲ ಸಮಾವೇಶದಲ್ಲಿ ಕ್ಸಿನ್‌ಹುವಾ ಸುದ್ದಿ ಸಂಸ್ಥೆ ಈ ಕೃತಕ ಬುದ್ಧಿಮತ್ತೆಯ ನ್ಯೂಸ್‌ ಆ್ಯಂಕರನ್ನು ವಿಶ್ವಕ್ಕೆ ಪರಿಚಯಿಸಿದೆ.

ಕೃತಕ ಬುದ್ಧಿಮತ್ತೆ (ಎಐ) ಯ ಈ ನ್ಯೂಸ್‌ ಆ್ಯಂಕರನ್ನು ಚೀನದ ಕ್ಸಿನ್‌ಹುವಾ ಮತ್ತು ಸರ್ಚ್‌ ಇಂಜಿನ್‌ ಕಂಪೆನಿ ಸೊಗೋವ್‌ ಜತೆಗೂಡಿ ಅಭಿವೃದ್ಧಿ ಪಡಿಸಿವೆ. 

ಇಂಗ್ಲಿಷ್‌ ಮಾತನಾಡುವ ಈ ಕೃತಕ ಬುದ್ಧಿ ಮತ್ತೆಯ ನ್ಯೂಸ್‌ ಆ್ಯಂಕರ್‌ ತನ್ನ ಮುಂದಿದ್ದ  ಕ್ಯಾಮೆರಾದಲ್ಲಿ ಕಂಡು ಬಂದ ಪಠ್ಯವನ್ನು ಓದುವ ಮೂಲಕ ತನ್ನನ್ನು ಪರಿಚಯಿಸಿಕೊಂಡಿದ್ದಾನೆ.

ಕ್ಸಿನ್‌ ಹುವಾ ಸುದ್ದಿ ಸಂಸ್ಥೆಯ ನಿಜ ನ್ಯೂಸ್‌ ಆ್ಯಂಕರ್‌ ಆಗಿರುವ ಝಾಂಗ್‌ ಝಾವೋ ಅವರನ್ನು ಹೋಲುವ ರೀತಿಯಲ್ಲಿ ಈ ಕೃತಕ ಬುದ್ಧಿಮತ್ತೆ ನ್ಯೂಸ್‌ ಆ್ಯಂಕರನ್ನು ವಿನ್ಯಾಸಗೊಳಿಸಲಾಗಿದೆ. 

Advertisement

ಈ ಕೃತಕ ಬುದ್ಧಿ ಮತ್ತೆಯ ನ್ಯೂಸ್‌ ಆ್ಯಂಕರ್‌ (ರೋಬೋಟ್‌) ತನ್ನನ್ನು ಇಂಗ್ಲಿಷ್‌ನಲ್ಲಿ ಪರಿಚಯಿಸಿಕೊಂಡ ರೀತಿ ಹೀಗಿದೆ : 

“Hello everyone, I am an English Artificial Intelligence anchor. This is my very first day in Xinhua News agency. My voice and appearance are modelled on Zhang Zhao, a real anchor with Xinhua,” 

ಮುಂದುವರಿದು ಈ ಮಾಡೆಲ್‌ ನ್ಯೂಸ್‌ ಆ್ಯಂಕರ್‌ ಇಂಗ್ಲಿಷಿನಲ್ಲಿ  ಹೇಳಿದ್ದು ಹೀಗೆ : 

ಮಾಧ್ಯಮ ರಂಗದ ಅಭಿವೃದ್ಧಿಯು ನಿರಂತರ ಹೊಸ ಹೊಸ ಅನ್ವೇಷಣೆಗಳನ್ನು ಅಪೇಕ್ಷಿಸುತ್ತಿದೆ; ಅಂತೆಯೇ ಅತ್ಯಾಧುನಿಕ ಅಂತಾರಾಷ್ಟ್ರೀಯ ತಂತ್ರಜ್ಞಾನದೊಂದಿಗೆ ಸಮ್ಮಿಳಿತವಾಗುತ್ತಿದೆ. ಅಂತೆಯೇ ನನ್ನೊಳಗಿನ ಕಂಪ್ಯೂಟರ್‌ ವ್ಯವಸ್ಥೆಗೆ ಉಣಿಸಿರುವಂತಹ ಸಂಗತಿಗಳನ್ನು ನಾನು ನಿಮಗೆ ತಿಳಿಸಲು ನಾನು ಅವಿರತವಾಗಿ ಕೆಲಸ ಮಾಡುತ್ತಿರುತ್ತೇನೆ’

“ನಿಮಗೆ ನಿರಂತರ ಹೊಚ್ಚ ಹೊಸ ಸುದ್ದಿಯ ಅನುಭವವನ್ನು ನೀಡುವುದನ್ನು ನಾನು ಎದುರು ನೋಡುತ್ತಿದ್ದೇನೆ’. 

Advertisement

Udayavani is now on Telegram. Click here to join our channel and stay updated with the latest news.

Next