Advertisement

ಭೂಮಿಗೆ ಸೌರಶಕ್ತಿ “ನೇರಪ್ರಸಾರ’! ಚೀನದ ಕ್ಷಿಡಿಯಾನ್‌ ವಿವಿಯ ಅತ್ಯಾಧುನಿಕ ತಂತ್ರಜ್ಞಾನ

10:20 AM Jun 19, 2022 | Team Udayavani |

ಬೀಜಿಂಗ್‌: ಜಗತ್ತಿನ ಹಲವು ದೇಶಗಳು ಸೌರಶಕ್ತಿಯನ್ನು ವಿದ್ಯುತ್‌ ರೂಪದಲ್ಲಿ ಬದಲಾಯಿಸಲು ಅತ್ಯಾಧುನಿಕ, ಅತ್ಯುತ್ತಮ ಮಾರ್ಗವೇನಾದರೂ ಇವೆಯಾ ಎಂದು ಹುಡುಕುತ್ತಲೇ ಇವೆ.

Advertisement

ಅಮೆರಿಕ, ಭಾರತ, ರಷ್ಯಾ, ಇಂಗ್ಲೆಂಡ್‌, ಫ್ರಾನ್ಸ್‌ಗಳು ಈ ಶೋಧ ಮಾಡುತ್ತಲೇ ಇವೆ. ಆದರೆ ಚೀನ ಇದರಲ್ಲಿ ಬಲವಾದ ಯಶಸ್ಸು ಕಂಡುಕೊಂಡಿದೆ.

ಒಂದು ವೇಳೆ ಇದು ಸಾಧ್ಯವಾದರೆ, ಮುಂದೊಂದು ದಿನ ಸೌರಶಕ್ತಿಯನ್ನು ವಿದ್ಯುತ್ತಾಗಿ ಪರಿವರ್ತಿಸಿ, ತಂತಿಗಳ ಸಹಾಯವಿಲ್ಲದೇ ನೇರವಾಗಿ ಬಲ್ಬ್ ಗಳಿಗೆ ರವಾನಿಸಬಹುದು!

ಹೀಗೊಂದು ವಿಶ್ವಾಸವನ್ನು ಚೀನದ ಶಾಂಕ್ಷಿ ಪ್ರಾಂತ್ಯದ ಕ್ಷಿಡಿಯಾನ್‌ ವಿಶ್ವವಿದ್ಯಾಲಯದ ಸಂಶೋಧಕರು ವ್ಯಕ್ತಪಡಿಸಿದ್ದಾರೆ.

ಹೊಸತೇನಿದೆ?: ಸೂರ್ಯನ ಕಿರಣಗಳಿಂದ ವಿದ್ಯುತ್‌ ಉತ್ಪಾದಿಸುವ ತಂತ್ರಜ್ಞಾನ ಈಗಾಗಲೇ ಇದೆ. ಆದರೆ ಈ ತಂತ್ರಜ್ಞಾನ ಸಾಕಷ್ಟು ಬೆಳೆಯಬೇಕಿದೆ. ವಿದ್ಯುತ್‌ಗಾಗಿ ಇದನ್ನು ಅವಲಂಬಿಸುವ ಪರಿಸ್ಥಿತಿ ಎಲ್ಲೂ ಇಲ್ಲ. ಕ್ಷಿಡಿಯಾನ್‌ ವಿವಿ ಸಂಶೋಧಕರ ವಿಶೇಷತೆಯಿರುವುದೇ ಇಲ್ಲಿ. ಅವರು ಜೂ.5ರಂದು ಈ ಕ್ಷೇತ್ರದ ಪರಿಣಿತರಿಗೆ ತಾವೇನು ಮಾಡಿದ್ದೇವೆಂದು ಪ್ರಾತ್ಯಕ್ಷಿಕೆ ತೋರಿಸಿ ಸೈ ಎನಿಸಿಕೊಂಡಿದ್ದಾರೆ.

Advertisement

ಸಂಶೋಧಕರು ಹೇಳಿಕೊಂಡ ಪ್ರಕಾರ, ಅವರು ಅಭಿವೃದ್ಧಿಪಡಿಸಿರುವ ತಂತ್ರಜ್ಞಾನದ ಮೂಲಕ ಭೂಮಿಯಿಂದ ಬಹಳ ಎತ್ತರದಲ್ಲೇ ಸೂರ್ಯನ ಬೆಳಕನ್ನು ಸಂಗ್ರಹಿಸಲಾಗುತ್ತದೆ. ಅದನ್ನು ಅತಿಸೂಕ್ಷ್ಮ ತರಂಗಗಳಾಗಿ ಬದಲಾಯಿಸಲಾಗುತ್ತದೆ. ಈ ತರಂಗಗಳು ಗಾಳಿಯ ಮೂಲಕ ನೇರವಾಗಿ ಭೂಮಿಯಲ್ಲಿನ ರಿಸೀವರ್‌ಗಳಿಗೆ ತಲುಪುತ್ತವೆ. ಅಲ್ಲಿ ತರಂಗಗಳು ವಿದ್ಯುತ್ತಾಗಿ ಬದಲಾಗುತ್ತವೆ!

ಇಲ್ಲೊಂದು ಅಡಚಣೆಯೆಂದರೆ ಪ್ರಸ್ತುತ ಕೇವಲ 55 ಮೀಟರ್‌ವರೆಗೆ ಮಾತ್ರ ಗಾಳಿಯಿಂದ ರಿಸೀವರ್‌ಗಳಿಗೆ ತರಂಗಗಳನ್ನು ಕಳುಹಿಸಬಹುದು. ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದರೆ, ಅಂತರಿಕ್ಷದಲ್ಲಿ ಸುತ್ತುವ ಸೌರಫ‌ಲಕಗಳ ಮೂಲಕ ನೇರವಾಗಿ ಭೂಮಿಗೆ ಶಕ್ತಿ ಇಳಿಯುತ್ತದೆ!

ಅಷ್ಟು ಮಾತ್ರವಲ್ಲ, ಕತ್ತಲಲ್ಲಿ ಈ ತಂತ್ರಜ್ಞಾನ ಕಾರ್ಯಾಚರಿಸುವುದಿಲ್ಲ ಎಂಬ ಕೊರತೆಯನ್ನು ಹೊಸ ತಂತ್ರಜ್ಞಾನ ನೀಗಲಿದೆ. ಕಾರಣ ವಿಜ್ಞಾನಿಗಳು ಅಂತರಿಕ್ಷದಲ್ಲಿ ಅಳವಡಿಸುವ ಫ‌ಲಕಗಳು, ಭೂಮಿ ಸುತ್ತುವಾಗ ಉಂಟಾಗುವ ನೆರಳನ್ನೂ ತಪ್ಪಿಸಿಕೊಳ್ಳುವಷ್ಟು ಎತ್ತರದಲ್ಲಿರುತ್ತವಂತೆ.

Advertisement

Udayavani is now on Telegram. Click here to join our channel and stay updated with the latest news.

Next