Advertisement

China: ಹೆಚ್ಚು ಮಕ್ಕಳ ಪಡೆದರೆ ತೆರಿಗೆ ವಿನಾಯಿತಿ!

10:51 PM Oct 29, 2024 | Team Udayavani |

ಬೀಜಿಂಗ್‌: ದೇಶದಲ್ಲಿ ಕುಸಿಯುತ್ತಿರುವ ಯುವಕರ ಜನಸಂಖ್ಯೆಯನ್ನು ಹೆಚ್ಚಳ ಮಾಡುವುದಕ್ಕಾಗಿ ಹೆಚ್ಚು ಮಕ್ಕಳನ್ನು ಹೊಂದುವ ದಂಪತಿಗಳಿಗೆ ತೆರಿಗೆ ಕಡಿತ, ಸಹಾಯಧನ ನೀಡುವ ಯೋಜನೆಯನ್ನು ಚೀನಾ ಘೋಷಣೆ ಮಾಡಿದೆ.

Advertisement

ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕಾಗಿ 13 ಕ್ರಮಗಳನ್ನು ಜಾರಿ ಮಾಡಿರುವ ಚೀನಾ, ಈ ಮೊದಲೇ ಮಕ್ಕಳ ಆರೈಕೆ ಕೇಂದ್ರಗಳ ಅಭಿವೃದ್ಧಿ, ಶಿಕ್ಷಣ ಗುಣಮಟ್ಟ ಹೆಚ್ಚಳ, ಮನೆ ಹಾಗೂ ಉದ್ಯೋಗ ಕೊಡುವುದಾಗಿಯೂ ಘೋಷಿಸಿತ್ತು. ಆದರೆ ಈ ಬಗ್ಗೆ ಚೀನಾ ಜನರಿಂದ ಹೆಚ್ಚಿನ ಪ್ರೋತ್ಸಾಹದಾಯಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಚೀನಾದಲ್ಲಿ ಸತತ 3ನೇ ವರ್ಷವೂ ಜನಸಂಖ್ಯೆ ಕುಸಿತದ ಹಾದಿಯಲ್ಲಿದ್ದು, 2023ರೊಂದರಲ್ಲೇ 14,808 ಶಿಶುವಿಹಾರ ಗಳು, 5,645 ಪ್ರಾಥಮಿಕ ಶಾಲೆಗಳು ಮುಚ್ಚಿದ್ದವು. ಹೀಗಾಗಿ ಚೀನಾ ಮಕ್ಕಳ ಜನನ ಪ್ರಮಾಣ ಏರಿಕೆ ಮಾಡುವ ಕ್ರಮಕ್ಕೆ ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next