ಜ್ಯೂಕ್ವಾನ್ (ಚೀನಾ): ಬಾಹ್ಯಾಕಾಶ ನಿಲ್ದಾಣಕ್ಕೆ ಮೊಟ್ಟಮೊದಲ ಬಾರಿಗೆ ಬಾಹ್ಯಾಕಾಶ ಯಾನಿಗಳನ್ನು ಒಯ್ಯುತ್ತಿದ್ದ ಚೀನಾದ ರಾಕೆಟ್ ಉಡಾವಣೆಯಾಗಿದೆ. ಇದರಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ನೆಡಲು ಹೊರಟಿದ್ದ ಚೀನಾದ ಪ್ರಯತ್ನಕ್ಕೆ ಮುನ್ನಡೆ ಸಿಕ್ಕಿದೆ.
ಈ ರಾಕೆಟ್ ನಲ್ಲಿ ಮೂವರು ಯಾತ್ರಿಗಳು ಬಾಹ್ಯಾಕಾಶಕ್ಕೆ ನೆಗೆದಿದ್ದಾರೆ. ಈ ಮೂವರನ್ನು ಟಿಯಾಂಗಾಂಗ್ ಅಂತರಿಕ್ಷ ನಿಲ್ದಾಣಕ್ಕಾಗಿ ಲಾಂಗ್ ಮಾರ್ಚ್ -2 ಎಫ್ ರಾಕೆಟ್‌ನಲ್ಲಿ ಉಡಾವಣೆ ಮಾಡಲಾಗಿದ್ದು, ಅಲ್ಲಿ ಅವರು ಮೂರು ತಿಂಗಳು ಕಳೆಯಲಿದ್ದಾರೆ, ಬಹು ನಿರೀಕ್ಷಿತ ಈ ಉಡಾವಣಾಪ್ರಸಾರವನ್ನು ರಾಜ್ಯ ಟಿವಿಯಲ್ಲಿ ನೇರ ಪ್ರಸಾರ ಮಾಡಲಾಗಿದೆ.
ವಾಯುವ್ಯ ಚೀನಾದ ಗೋಬಿ ಮರುಭೂಮಿಯ ಜಿಯುಕ್ವಾನ್ ಉಡಾವಣಾ ಕೇಂದ್ರದಿಂದ ಸ್ಥಳೀಯ ಕಾಲಮಾನ ಬೆಳಿಗ್ಗೆ 9:22 ಕ್ಕೆ ಉಡಾವಣೆ ಮಾಡಲಾಗಿದೆ. ನೀಲಿ ಆಕಾಶದಲ್ಲಿ ಹೊಗೆಯ ಮೋಡಗಳ ನಡುವೆ ರಾಕೆಟ್ ನಭಕ್ಕೆ ಚಿಮ್ಮಿತ್ತು. ಸುಮಾರು 10 ನಿಮಿಷಗಳ ನಂತರ ಅದು ತನ್ನ ಕಕ್ಷೆಯನ್ನು ತಲುಪಿದೆ, ಬಾಹ್ಯಾಕಾಶ ನೌಕೆ ರಾಕೆಟ್‌ನಿಂದ ಬೇರ್ಪಟ್ಟಿದೆ.
ಇದನ್ನೂ ಓದಿ:“ಗಂಗೆಯ ಮಗಳು”: ಗಂಗಾ ನದಿಯಲ್ಲಿ ಮರದ ಡಬ್ಬದಲ್ಲಿ ತೇಲಿ ಬಂತು ಹೆಣ್ಣು ಮಗು
ರಾಜ್ಯ ಪ್ರಸಾರದ ಸಿ.ಸಿ.ಟಿ.ವಿ ಬಾಹ್ಯಾಕಾಶ ನೌಕೆಯ ಒಳಗಿನಿಂದ ನೇರ ವಿಡಿಯೋಗಳನ್ನು ಪ್ರಸಾರ ಮಾಡಿದೆ. ಮೂವರು ಗಗನಯಾತ್ರಿಗಳು ತಮ್ಮ ಹೆಲ್ಮೆಟ್ ಮುಖವಾಡಗಳನ್ನು ತೆಗಯುತ್ತಾ, ಕ್ಯಾಮರಾದತ್ತ ಕೈ ಬೀಸಿದರು. ನೌಕೆಯ ಹೊರ ಅಂಚಿನಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಇದು ಭೂಮಿಯ ಚಿತ್ರಗಳನ್ನು ತೆಗೆಯಲಿದೆ.
ಮಿಷನ್‌ನ ಕಮಾಂಡರ್ ನೀ ಹೈಶೆಂಗ್, ಪೀಪಲ್ಸ್ ಲಿಬರೇಶನ್ ಆರ್ಮಿ ವಾಯುಪಡೆಯ ಪೈಲಟ್ ಆಗಿದ್ದು, ಅವರು ಈಗಾಗಲೇ ಎರಡು ಬಾಹ್ಯಾಕಾಶ ಯಾನಗಳಲ್ಲಿ ಭಾಗವಹಿಸಿದ್ದಾರೆ.