ಬೀಜಿಂಗ್: ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಯಿಂದ ಕೆಂಡಮಂಡಲವಾದ ಚೀನಾ 27 ಯುದ್ಧ ವಿಮಾನಗಳನ್ನು ತೈವಾನ್ ನ ವಾಯುಗಡಿಯೊಳಕ್ಕೆ ರವಾನಿಸಿದ್ದ ಬೆನ್ನಲ್ಲೇ ಮತ್ತೊಂದೆಡೆ ಚೀನಾದ ರಿಸರ್ಚ್ ಆ್ಯಂಡ್ ಸರ್ವೇ ಹಡಗು ಶ್ರೀಲಂಕಾದ ದಕ್ಷಿಣ ಭಾಗದಲ್ಲಿರುವ ಚೀನಾ ನಿಯಂತ್ರಿತ ಹಂಬಂಟೋಟ ಬಂದರಿನಲ್ಲಿ ಆಗಸ್ಟ್ 11ರಂದು ಲಂಗರು ಹಾಕಲಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಪಿಟ್ರಾನ್ ಫೋರ್ಸ್ ಎಕ್ಸ್ 10E: ಅಗ್ಗದ ದರದ ಉತ್ತಮ ಸ್ಮಾರ್ಟ್ ವಾಚ್
ಚೀನಾದ ಹಡಗು ದ್ವೀಪರಾಷ್ಟ್ರಕ್ಕೆ ಆಗಮಿಸುತ್ತಿರುವ ಮಾಹಿತಿಯ ನಂತರ ಭಾರತ ಅಲ್ಲಿನ ಸನ್ನಿವೇಶವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿರುವುದಾಗಿ ತಿಳಿಸಿದೆ.
ಆಗಸ್ಟ್ 11ರಂದು ಆಗಮಿಸಲಿರುವ ಚೀನಾದ ರಿಸರ್ಚ್ ಆ್ಯಂಡ್ ಸರ್ವೇ ಹಡಗಿನ ಕುರಿತು ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿದ್ದು, ಬಂದರು ಪ್ರದೇಶದಲ್ಲಿ ಲಂಗರು ಹಾಕಲು ಅನುಮತಿ ನೀಡಲಾಗುವುದು ಎಂದು ಶ್ರೀಲಂಕಾ ಸರ್ಕಾರದ ವಕ್ತಾರ ಬಂಡುಲಾ ಗುಣವರ್ಧನಾ ತಿಳಿಸಿದ್ದಾರೆ.
ನಾವು (ಶ್ರೀಲಂಕಾ) ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಕಠಿಣ ಸಂದರ್ಭದಲ್ಲಿ ಚೀನಾ ಮತ್ತು ಭಾರತ ಸೇರಿದಂತೆ ಎರಡೂ ದೇಶಗಳು ನೆರವು ನೀಡುತ್ತಿದೆ ಎಂದು ಗುಣವರ್ಧನಾ ತಿಳಿಸಿರುವುದಾಗಿ ವರದಿಯಾಗಿದೆ.