Advertisement

ನ್ಯಾನ್ಸಿ ಪೆಲೋಸಿ ಭೇಟಿಗೆ ಆಕ್ರೋಶ: ತೈವಾನ್ ಮೇಲೆ ವ್ಯಾಪಾರ ನಿರ್ಬಂಧ ಹೇರಿದ ಚೀನಾ

01:50 PM Aug 03, 2022 | Team Udayavani |

ಬೀಜಿಂಗ್: ಅಮೆರಿಕದ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ ಗೆ ಭೇಟಿ ನೀಡಿರುವುದಕ್ಕೆ ಚೀನಾ ತೀವ್ರ ಆಕ್ರೋಶವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಚೀನಾ ತೈವಾನ್ ನಿಂದ ಹಣ್ಣು ಮತ್ತು ಮೀನುಗಳ ಆಮದಿಗೆ ಬುಧವಾರ (ಆಗಸ್ಟ್ 03) ನಿರ್ಬಂಧ ಹೇರಿದೆ.

Advertisement

ಇದನ್ನೂ ಓದಿ:ಕಾಪು: ಸಾವಿನಲ್ಲೂ ಒಂದಾದರು ಐದು ದಶಕಗಳ ಕಾಲ ಜೊತೆಯಾಗಿ ಬಾಳಿ ಬದುಕಿದ ದಂಪತಿ

ನ್ಯಾನ್ಸಿ ಅವರೇನಾದರು ತೈವಾನ್ ಗೆ ಕಾಲಿಟ್ಟಿದ್ದೇ ಆದರೆ ಅದಕ್ಕೆ ಸೂಕ್ತ ಬೆಲೆ ಅಮೆರಿಕ ತೆರಬೇಕಾಗುತ್ತದೆ. ಅಷ್ಟೇ ಅಲ್ಲ ಮುಂದಾಗುವ ಘೋರ ಪರಿಣಾಮಗಳಿಗೆ ಅಮೆರಿಕವೇ ಹೊಣೆ ಹೊರಬೇಕಾಗುತ್ತದೆ ಎಂದು ಚೀನಾ ಎಚ್ಚರಿಕೆ ನೀಡಿತ್ತು.

ಆದರೆ ಚೀನಾದ ವಿರೋಧವನ್ನು ಲೆಕ್ಕಿಸದೇ ನ್ಯಾನ್ಸಿ ಪೆಲೋಸಿ ತೈವಾನ್ ಗೆ ಭೇಟಿ ನೀಡಿದ್ದಾರೆ. ಇದರೊಂದಿಗೆ ಅಮೆರಿಕದ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿ ತೈವಾನ್ ಗೆ ಭೇಟಿ ನೀಡುತ್ತಿರುವುದು 25 ವರ್ಷಗಳಲ್ಲಿ ಇದೇ ಮೊದಲು.

ಪ್ರತ್ಯೇಕ ಪ್ರಕಟಣೆ ನೀಡಿರುವ ಚೀನಾದ ವಾಣಿಜ್ಯ ಸಚಿವಾಲಯ, ತೈವಾನ್ ಗೆ ನೈಸರ್ಗಿಕ ಮರಳನ್ನು ರಫ್ತು ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದೆ. ಆದರೆ ಇದಕ್ಕೆ ಯಾವುದೇ ಕಾರಣವನ್ನು ನೀಡಿಲ್ಲ ಎಂದು ವರದಿ ಹೇಳಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next