Advertisement

1949ರ ಬಳಿಕ ಚೀನದಲ್ಲಿ ಜನನ ಪ್ರಮಾಣ ಕನಿಷ್ಠ ಮಟ್ಟದಲ್ಲಿ

10:08 AM Jan 18, 2020 | Hari Prasad |

ಬೀಜಿಂಗ್‌: 1949ರಲ್ಲಿ ಕಮ್ಯುನಿಸ್ಟ್‌ ದೇಶವಾಗಿ ಬದಲಾದಾಗಿನಿಂದ ಚೀನದ ಜನನ ಪ್ರಮಾಣವು ಕಳೆದ ವರ್ಷ ಕನಿಷ್ಠ ಮಟ್ಟಕ್ಕೆ ಇಳಿದಿದೆ. ದೇಶದಲ್ಲಿ ವಯಸ್ಕರ ಪ್ರಮಾಣ ಇಳಿಕೆಯಾಗುತ್ತಿದೆ. ಇದು ಆ ದೇಶಕ್ಕೆ ಮುಂಬರುವ ದಿನಗಳಲ್ಲಿ ಸಮಸ್ಯೆಯನ್ನುಂಟು ಮಾಡಲಿದೆ. ಕೆಲಸ ಮಾಡುವ ಕೈಗಳು ಕಡಿಮೆಯಾದರೆ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಆತಂಕವನ್ನು ಈ ಬೆಳವಣಿಗೆ ಹೆಚ್ಚಿಸಿದೆ.

Advertisement

ಸಂಭಾವ್ಯ ಜನಸಂಖ್ಯಾ ಬಿಕ್ಕಟ್ಟನ್ನು ತಪ್ಪಿಸಲು, ಸರಕಾರವು ಎರಡು ಮಕ್ಕಳನ್ನು ಹೊಂದಲು 2016ರಲ್ಲಿ ತನ್ನ ಒಂದು-ಮಕ್ಕಳ ನೀತಿಯನ್ನು ಸಡಿಲಗೊಳಿಸಿತ್ತು. ಆದರೆ ಈ ಬದಲಾವಣೆಯು ಗರ್ಭಧಾರಣೆಯ ಹೆಚ್ಚಳಕ್ಕೆ ಕಾರಣವಾಗಿಲ್ಲ. ಶುಕ್ರವಾರ ಬಿಡುಗಡೆಯಾದ ನ್ಯಾಷನಲ್‌ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್‌ (ಎನ್‌ಬಿಎಸ್‌) ಅಂಕಿ ಅಂಶಗಳ ಪ್ರಕಾರ, 2019ರಲ್ಲಿ ಜನನ ಪ್ರಮಾಣವು 1,000 ಜನರಿಗೆ 10.48ರಷ್ಟಿತ್ತು. ಇದು ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದೆ.

ಸತತ ಮೂರು ವರ್ಷಗಳಿಂದ ಜನನಗಳ ಸಂಖೆಯಲ್ಲಿ ಕುಸಿತ ಕಂಡುಬರುತ್ತಿದೆ. 2019ರಲ್ಲಿ 14.65 ದಶಲಕ್ಷ ಶಿಶುಗಳು ಜನಿಸಿವೆ. 1961ರ ಬಳಿಕ ದಾಖಲಾದ ಕನಿಷ್ಠ ಜನನ ಇದಾಗಿದೆ. ಕಳೆದ ವರ್ಷ ಕ್ಷಾಮದ ಪರಿಣಾಮ ಸುಮಾರು 10 ಮಿಲಿಯನ್‌ ಮರಣಗಳು ಸಂಭವಿಸಿದ್ದವು. ಆ ವರ್ಷ ಸುಮಾರು 11.8 ಮಿಲಿಯನ್‌ ಜನನಗಳು ದಾಖಲಾಗಿವೆ.

ಚೀನ ತನ್ನ ಒಂದು – ಮಗುವಿನ ನೀತಿಯನ್ನು ರದ್ದುಗೊಳಿಸಿದ್ದರೂ ಸಹ, ಜನರ ಮನಸ್ಸಿನಲ್ಲಿ ಬದಲಾವಣೆಯಾಗಿಲ್ಲ. ಅವರೀಗ ದೊಡ್ಡ ಕುಟುಂಬದಿಂದ ಸಣ್ಣ ಕುಟುಂಬಗಳಿಗೆ ಸೀಮಿತರಾಗುತ್ತಿದ್ದಾರೆ. ಸರಕಾರದ ಕಾನೂನಿಂತೆ ತಮ್ಮ ಕುಟುಂಬದ ಗಾತ್ರ ವಿಸ್ತರಿಸುತ್ತಿಲ್ಲ ಎಂದು ಅಂತಾರಾಷ್ಟ್ರೀಯ ಅಧ್ಯಯನಗಳು ತಿಳಿಸಿವೆ. ಚೀನದಲ್ಲಿ 2018ರ ಬಳಿಕ ಜನನ ಸಂಖ್ಯೆಯಲ್ಲಿ ಇಳಿಕೆಯಾಗ ತೊಡಗಿದೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ, 2019ರ ಅಂತ್ಯದ ವೇಳೆಗೆ ಚೀನಾದ ಜನಸಂಖ್ಯೆಯು 1.4 ಬಿಲಿಯನ್‌ ಆಗಿದೆ.

ಈ ಹಿಂದೆ ನಿಗದಿಪಡಿಸಲಾಗಿದ್ದ ಒಂದು ಮಗು ನೀತಿಯನ್ನು ಈಗ ತೆಗೆದುಹಾಕಲಾಗಿದ್ದರೂ ಜನರು ಮಾತ್ರ ಒಂದೇ ಮಗುವಿನಂತ ಆಸಕ್ತಿಹೊಂದಿದ್ದಾರೆ. ಆದರೆ ವಿಚಿತ್ರ ಎಂದರೆ ಕಾನೂನು ಇದ್ದ ಸಂದರ್ಭ 2 ಮತ್ತು ಹೆಚ್ಚು ಮಕ್ಕಳನ್ನು ಹೊಂದಿದ ಪೋಷಕರಿಗೆ ಈಗಲೂ ಶಿಕ್ಷೆಯಾಗುತ್ತಿವೆ.

Advertisement

ಕಳೆದ ವರ್ಷ ದೇಶದ ಉದ್ಯೋಗಿಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ಇದು ಭವಿಷ್ಯದಲ್ಲಿ ಆರ್ಥಿಕತೆಗೆ ತೊಂದರೆಯಾಗಬಹುದು ಎಂದು ಚೀನ ತನ್ನ ನೀತಿಯನ್ನು ಸಡಿಲಿಸಿತ್ತು. ಚೀನದಲ್ಲಿ 16ರಿಂದ 59 ವರ್ಷದೊಳಗಿನ 896.4 ಮಿಲಿಯನ್‌ ಜನರಿದ್ದಾರೆ ಎಂದು ವರದಿ ಹೇಳಿದೆ. 2050ರ ವೇಳೆಗೆ ಉದ್ಯೋಗಿಗಳ ಸಂಖ್ಯೆ/ವರ್ಕಿಂಗ್‌ ಕ್ಲಾಸ್‌ ಶೇ. 23ರಷ್ಟು ಕುಸಿಯುವ ಸಾಧ್ಯತೆ ಇದೆ. ಚೀನದ ಆರ್ಥಿಕತೆಯು 2019ರಲ್ಲಿ ಶೇ. 6.1ರಷ್ಟು ಏರಿಕೆಯಾಗಿದೆ. ಇದು 1990ರಿಂದ ಬಳಿಕ ನಿಧಾನಗತಿಯಿಂದ ಕೂಡಿದೆ. ಇದೇ ಪ್ರವೃತ್ತಿ ಮುಂದುವರಿದರೆ, ಅದು ಆರ್ಥಿಕ ಬೆಳವಣಿಗೆಯ ಮೇಲೆ ಭಾರಿ ಪರಿಣಾಮ ಬೀರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next