ವಾಷಿಂಗ್ಟನ್: ವಿಶ್ವದ ಅತಿ ಶ್ರೀಮಂತ ರಾಷ್ಟ್ರವೆಂಬ ಹೆಗ್ಗಳಿಕೆ ಪಡೆದಿದ್ದ ಅಮೆರಿಕದ ಕಿರೀಟ ಈಗ ನೆಲಕ್ಕುರುಳಿದ್ದು, ಈಗ ಚೀನಾ ವಿಶ್ವದ ಸಿರಿವಂತ ರಾಷ್ಟ್ರವೆಂಬ ಹಿರಿಮೆಗೆ ಪಾತ್ರವಾಗಿದೆ ಎಂದು ಷಿಕಾಗೋದ ಮೆಕೆನ್ಸಿ ಆ್ಯಂಡ್ ಕೋ ಎಂಬ ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ.
ಇಡೀ ವಿಶ್ವದ ಒಟ್ಟಾರೆ ಆದಾಯದಲ್ಲಿ ಶೇ. 60ರಷ್ಟು ಆದಾಯವನ್ನು ವಾರ್ಷಿಕ ಲೆಕ್ಕಾಚಾರದಲ್ಲಿ ಪಡೆಯುತ್ತಿರುವ ಜಗತ್ತಿನ 10 ರಾಷ್ಟ್ರಗಳ ಆಯ-ವ್ಯಯವನ್ನು ಪರಿಶೀಲನೆ ನಡೆಸಿರುವ ಮೆಕಿನ್ಸಿ ಆ್ಯಂಡ್ ಕೋ ಸಂಸ್ಥೆಯ ತಜ್ಞರು, ಈ ನಿರ್ಧಾರಕ್ಕೆ ಬಂದಿದ್ದಾರೆ.
2020ರಲ್ಲಿ ಇಡೀ ವಿಶ್ವದ ಒಟ್ಟಾರೆ ಆದಾಯ, 156 ಟ್ರಿಲಿಯನ್ ಡಾಲರ್‌ನಿಂದ 514 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಇದರ ಮೂರನೇ ಒಂದರಷ್ಟು ಆದಾಯ (ಅಂದಾಜು 171 ಟ್ರಿಲಿಯನ್ ಡಾಲರ್) ಚೀನಾಕ್ಕಿದೆ.
ಇದನ್ನೂ ಓದಿ:ಉತ್ತರ ಪ್ರದೇಶದ ಹೆಮ್ಮೆ “ಪೂರ್ವಾಂಚಲ ಎಕ್ಸ್‌ಪ್ರೆಸ್ ವೇ’
ಚೀನಾದ ಒಟ್ಟಾರೆ ಆಸ್ತಿ ಮೌಲ್ಯವು 7 ಟ್ರಿಲಿಯನ್‌ನಿಂದ 120 ಟ್ರಿಲಿಯನ್‌ಗೆ ಹೆಚ್ಚಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.