Advertisement
ಒಪ್ಪ ಓರಣದ 4,389 ಕೋಟಿ ರೂ. ವಂಚನೆಮೂಲತಃ ಚೀನದ ಗ್ವಾಂಗ್ ಡಾಂಗ್ ಪ್ರಾಂತದಲ್ಲಿ ಕಾರ್ಯವೆಸಗುವ ಗ್ವಾಂಗ್‌ಡಾಂಗ್ ಒಪ್ಪೋ ಮೊಬೈಲ್ ಟೆಲೆಕಮ್ಯುನಿಕೇಶನ್ಸ್ ಕಾರ್ಪೊರೇಶನಲ್ ಲಿಮಿಟೆಡ್‌ನ ಸಹವರ್ತಿ ಸಂಸ್ಥೆ ಒಪ್ಪೋ ಇಂಡಿಯಾವೇ ಈಗ 4,390 ಕೋಟಿ ರೂ. ವಂಚನೆ ಮಾಡಿದ ಆರೋಪಕ್ಕೆ ಗುರಿಯಾಗಿದೆ. ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಕಂಪೆನಿಯ ವಿರುದ್ಧ 4,389 ಕೋಟಿ ರೂ. ಕಸ್ಟಮ್ಸ್ ಸುಂಕ ವಂಚನೆ ಮಾಡಿದ ಆರೋಪಕ್ಕೆ ಸಂಬಂ ಧಿಸಿದಂತೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ವಿವೋ ಕಮ್ಯುನಿಕೇಶನ್ ಟೆಕ್ನಾಲಜಿ ಕೊ. ಲಿ. ಎನ್ನುವುದು ಚೀನದ ಗ್ವಾಂಗ್‌ಡಾಂಗ್ ಪ್ರಾಂತದ ಡಾಗುವ್ಗನ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕಂಪೆನಿ. ದೇಶಕ್ಕೆ ಸಂಬಂಧಿಸಿದಂತೆ ಅದರ ಪ್ರಧಾನ ಕಚೇರಿ ಇರುವುದು ಗುರುಗ್ರಾಮದಲ್ಲಿ ಮತ್ತು ವಿವೋ ಮೊಬೈಲ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಎಂಬ ಹೆಸರಿನಲ್ಲಿ ವಿವಿಧ ಮಾದರಿಗಳ ಮೊಬೈಲ್‌ಗಳನ್ನು ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.
Related Articles
Advertisement
ಇನ್ನೊಂದು ಮಹತ್ವದ ಅಂಶವೆಂದರೆ ವಿವೋ 23 ಇತರ ಕಂಪೆನಿಗಳನ್ನೂ ಸ್ಥಾಪಿಸಿತ್ತು ಮತ್ತು ಅವುಗಳ ಮೂಲಕವೇ 62,476 ಕೋಟಿ ರೂ. ಮೊತ್ತವನ್ನು ವರ್ಗಾಯಿಸಿತ್ತು. ಜತೆಗೆ ಕಂಪೆನಿಯ ಬ್ಯಾಂಕ್ ಖಾತೆಯನ್ನು ಸ್ತಂಭನಗೊಳಿಸಲಾಗಿತ್ತು. ದಿಲ್ಲಿ ಹೈಕೋರ್ಟ್ ನಲ್ಲಿ ನಡೆದಿದ್ದ ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯಕ್ಕೆ 950 ಕೋಟಿ ರೂ. ಖಾತರಿ ಮೊತ್ತ ನೀಡಿ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿತ್ತು.
ಶಿಯೋಮಿ ಇಂಡಿಯಾಶಿಯೋಮಿ ಟೆಕ್ನಾಲಜಿ ಇಂಡಿಯಾ ಪ್ರೈ. ಲಿ ವಿರುದ್ಧ ಈ ವರ್ಷದ ಜನವರಿಯಲ್ಲಿ ತೆರಿಗೆ ವಂಚನೆ ಆರೋಪಗಳು ಕೇಳಿ ಬಂದಿದ್ದವು. 653 ಕೋಟಿ ರೂ. ಕಸ್ಟಮ್ಸ್ ಸುಂಕ ಪಾವತಿ ಮಾಡಿಲ್ಲ ಎಂದು ಅದರ ವಿರುದ್ಧ ಆರೋಪ ಹೊರಿಸಲಾಗಿತ್ತು. ಮೊಬೈಲ್ ಮತ್ತು ಅದರ ಬಿಡಿ ಭಾಗಗಳನ್ನು ದೇಶಕ್ಕೆ ತರಿಸಿಕೊಳ್ಳುವ ಸಂದರ್ಭದಲ್ಲಿ ರಾಯಧನ ಮತ್ತು ಪರವಾನಿಗೆ ಶುಲ್ಕ ಪಾವತಿ ಮಾಡುವುದನ್ನು ತಪ್ಪಿಸಿಕೊಂಡಿತ್ತು ಎನ್ನುವುದು ಆರೋಪ. 2017 ಎಪ್ರಿಲ್‌ನಿಂದ 2020 ಜೂನ್‌ವರೆಗಿನ ಅವಧಿಯಲ್ಲಿ ಮೂರು ಬಾರಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ಇತರ ಕಂಪೆನಿಗಳು
ಜೆಡ್‌ಟಿಇ: ಚೀನದ ಗ್ವಾಂಗ್ ಡಾಂಗ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಈ ಕಂಪೆನಿ ದೂರಸಂಪರ್ಕ ಕಂಪೆನಿಗಳಿಗೆ ಬೇಕಾಗಿರುವ ಬಿಡಿಭಾಗಗಳನ್ನು ಪೂರೈಕೆ ಮಾಡುತ್ತದೆ. 2021ರ ಆಗಸ್ಟ್‌ನಲ್ಲಿ ಆದಾಯ ತೆರಿಗೆ ಇಲಾಖೆ ಗುರುಗ್ರಾಮದಲ್ಲಿರುವ ಕಂಪೆನಿಯ ಕಚೇರಿ, ದೇಶದಲ್ಲಿರುವ ಸಂಸ್ಥೆಯ ಹಿರಿಯ ಶ್ರೇಣಿಯ ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಿತ್ತು. ವಾವೆ (Huawei): ಈ ವರ್ಷದ ಫೆಬ್ರವರಿಯಲ್ಲಿ ಬೆಂಗಳೂರು, ಹೊಸದಿಲ್ಲಿ ಮತ್ತು ಗುರುಗ್ರಾಮದಲ್ಲಿರುವ ಕಂಪೆನಿ ಕಚೇರಿ ಮತ್ತು ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು. ಕಂಪೆನಿ ಹೊಂದಿರುವ ಬ್ಯಾಂಕ್ ಖಾತೆಗಳು, ಹಣಕಾಸು ವಿಚಾರಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಒನ್ ಪ್ಲಸ್: ಈ ಮೊಬೈಲ್ ಕಂಪೆನಿ ವಿರುದ್ಧವೂ 2021ರ ಡಿಸೆಂಬರ್‌ನಲ್ಲಿ ತೆರಿಗೆ ವಂಚನೆಯ ಆರೋಪಗಳು ಕೇಳಿ ಬಂದಿದ್ದವು. ಬೆಂಗಳೂರು, ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್), ಮುಂಬಯಿ, ಕೋಲ್ಕತಾ, ಚೆನ್ನೈ ಮತ್ತು ಹೈದರಾಬಾದ್‌ಗಳಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿತ್ತು. ಆದಾಯ ತೆರಿಗೆ ಇಲಾಖೆ ಮಾತ್ರವಲ್ಲದೆ, ಕಂದಾಯ ಗುಪ್ತಚರ ನಿರ್ದೇಶನಾಲಯ, ಜಾರಿ ನಿರ್ದೇಶನಾಲಯಗಳು ಕೂಡ ಹಲವು ನಿಯಮಗಳನ್ನು ಮೇಲ್ಗಂಡ ಮೊಬೈಲ್ ಕಂಪೆನಿಗಳು ಉಲ್ಲಂಘಿಸಿವೆ ಎಂದು ಆರೋ ಪಿಸಿವೆ. ಜತೆಗೆ ತನಿಖೆಯನ್ನು ಈಗಾಗಲೇ ಕೈಗೊಂಡಿವೆ. ಆ್ಯಪ್ ಎಂಬ ಸಾಲದ ಶೂಲ
ಲೈಫ್ ವ್ಯಾಲೆಟ್, ಬಾಕ್ಸ್ ಕ್ಯಾಶ್, ದತ್ತಾ ರುಪೀ, ಮಾಲೂ ವ್ಯಾಲೆಟ್… ಇದೆಲ್ಲ ಸುಲಭದಲ್ಲಿ ಸಾಲ ನೀಡುತ್ತೇವೆ ಎಂದು ನಂಬಿಸಿ ಜೀವಕ್ಕೇ ಎರವಾಗುವ ಚೀನ ಸಾಲದ ಆ್ಯಪ್ ಗಳು . 2 ದಿನಗಳ ಹಿಂದಷ್ಟೇ ತೆಲಂಗಾಣದ ಮಹಿಳೆ ಈ ಜಾಲಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಜು. 13ರಂದು ಮುಂಬಯಿಯ ಮಿಡ್ ಡೇ ಪತ್ರಿಕೆ ವರದಿ ಪ್ರಕಾರ ಕರ್ನಾಟಕ ಸೇರಿದಂತೆ 11 ರಾಜ್ಯಗಳಲ್ಲಿ ಚೀನದ ಸಾಲದ ಆ್ಯಪ್ ಜಾಲ ಕಾರ್ಯವೆಸಗುತ್ತಿದೆ. ಇಂಥ ಆ್ಯಪ್ ಗಳ ಐಪಿ ವಿಳಾಸದ ಮೂಲ ಪತ್ತೆ ಮಾಡಿದಾಗ ಚೀನ ಮೂಲವನ್ನೇ ತೋರಿಸುತ್ತಿತ್ತು. ಅದರ ಕಿಂಗ್‌ಪಿನ್‌ಗಳು ನೇಪಾಲ ಮತ್ತು ಬಾಂಗ್ಲಾದೇಶದಲ್ಲಿ ಇರುವ ಬ್ರಾಂಡ್‌ಬ್ಯಾಂಡ್ ಇಂಟರ್‌ನೆಟ್ ಸಂಪರ್ಕ ಬಳಕೆ ಮಾಡಿ, ವಾಟ್ಸ್‌ಆ್ಯಪ್ ನಂಬರ್‌ಗಳ ಮೂಲಕ ಸಾಲ ಪಡೆದವರಿಗೆ ಕಿರುಕುಳ ಕೊಡುತ್ತಿದ್ದುದು ಪತ್ತೆಯಾಗಿದೆ. ಜತೆಗೆ ಕರ್ನಾಟಕದಿಂದ ಯುಪಿಐ ಮೂಲಕ ಮೊತ್ತವೂ ಪಾವತಿಯಾಗಿತ್ತು. ಮೂಲ: ವಿವಿಧ ಆಂಗ್ಲ ವೆಬ್‌ಸೈಟ್‌ಗಳು