Advertisement

ಮಾರಣಾಂತಿಕ ಕರೋನಾ ವೈರಸ್ ಗೆ ತತ್ತರಿಸಿದ ಚೀನಾ; ವಿಶ್ವಾದ್ಯಂತ ಆತಂಕ

06:32 PM Mar 20, 2020 | Nagendra Trasi |

ಬೀಜಿಂಗ್: ಮಾರಣಾಂತಿಕ ಹೊಸ ಕರೋನಾ ವೈರಸ್ ಗೆ ಚೀನಾ ತತ್ತರಿಸಿ ಹೋಗಿದ್ದು, ಈಗಾಗಲೇ 19 ಮಂದಿ ಸಾವನ್ನಪ್ಪಿದ್ದಾರೆ. ಅಂದಾಜು 600 ಜನರು ವೈರಸ್ ಗೆ ತುತ್ತಾಗಿದ್ದು, ಈ ಹಿನ್ನಲೆಯಲ್ಲಿ ಜಾಗತಿಕವಾಗಿ ಹರಡುತ್ತಿರುವ ವೈರಸ್ ತಡೆಗಟ್ಟಲು ಅಧಿಕಾರಿಗಳು ಮುಂಜಾಗ್ರತಾ ಕ್ರಮ ಅನುಸರಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ಚೀನಾದಲ್ಲಿ ಶನಿವಾರದಿಂದ ಆರಂಭಗೊಳ್ಳಲಿರುವ ಹೊಸ ವರ್ಷದ ಸಂಭ್ರಮಕ್ಕಾಗಿ ವಿದೇಶಗಳಲ್ಲಿ ಇರುವ ಲಕ್ಷಾಂತರ ಚೀನಾ ಪ್ರಜೆಗಳು ರಜೆ ಮೇಲೆ ಆಗಮಿಸುತ್ತಿರುವುದು ಆರೋಗ್ಯ ಅಧಿಕಾರಿಗಳಲ್ಲಿ ಹೆಚ್ಚಿನ ಭಯ ಉಂಟು ಮಾಡಿದೆ ಎಂದು ವರದಿ ವಿವರಿಸಿದೆ.

ಕಳೆದ ವರ್ಷ ಚೀನಾದ ಯುಹಾನ್ ನಗರದಲ್ಲಿ ಅಕ್ರಮ ವನ್ಯ ಜೀವಿಗಳ ವ್ಯಾಪಾರದಿಂದ ಹಬ್ಬಿದ್ದ ಅನಾಮಿಕ ವೈರಸ್ ನಿಂದ ತೊಂದರೆಗೆ ಒಳಗಾಗುವಂತೆ ಆಗಿತ್ತು ಎಂದು ವರದಿ ತಿಳಿಸಿದೆ. ಯುಹಾನ್ ನಗರದಲ್ಲಿದ್ದ 11 ಲಕ್ಷ ಜನರಿಗೆ ನಗರ ಬಿಟ್ಟು ತೆರಳದಂತೆ ಅಧಿಕಾರಿಗಳು ಕಟ್ಟಪ್ಪಣೆ ವಿಧಿಸಿದ್ದಾರೆ. ಅಲ್ಲದೇ ಹುಯಾನ್ ಗ್ಗಾಂಗ್ ನಗರದ ಆರು ಲಕ್ಷ ಮಂದಿಗೂ ಹೊರ ಹೋಗದಂತೆ ನಿರ್ಬಂಧ ವಿಧಿಸಲಾಗಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next