ಬೀಜಿಂಗ್:ಈಗ ಚೀನ ಜಗತ್ತಿನ ಅತಿದೊಡ್ಡ 3ಡಿ ಪ್ರಿಂಟೆಡ್ ಯೋಜನೆಯೊಂದರ ಹಿಂದೆ ಬಿದ್ದಿದೆ. ಕೇವಲ 2 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 590 ಅಡಿ ಎತ್ತರದ ಅಣೆಕಟ್ಟೊಂದನ್ನು ನಿರ್ಮಾಣ ಮಾಡಲು ಮುಂದಾಗಿದೆ.
ಇದರಲ್ಲಿ ವಿಶೇಷವೇನು ಎಂದು ಯೋಚಿಸುತ್ತಿದ್ದೀರಾ? ಇದು ಸಂಪೂರ್ಣವಾಗಿ ಮಾನವರಹಿತ ನಿರ್ಮಾಣ!
ಹೌದು. ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿ ಯಾಂಗ್‌ಖು ಜಲವಿದ್ಯುತ್ ಸ್ಥಾವರ ಸ್ಥಾಪನೆಯ ಉದ್ದೇಶದಿಂದ ಈ ಡ್ಯಾಂ ನಿರ್ಮಾಣ ಮಾಡಲಾಗುತ್ತಿದ್ದು, ಒಬ್ಬನೇ ಒಬ್ಬ ಮನುಷ್ಯನ ಸಹಾಯವೂ ಇಲ್ಲದೆ ಈ ಅಣೆಕಟ್ಟು ತಲೆಎತ್ತಲಿದೆ. ಸಂಪೂರ್ಣವಾಗಿ ರೊಬೋಟ್‌ಗಳೇ ಇದನ್ನು ನಿರ್ಮಿಸಲಿವೆ.
ಹೇಗೆ ನಡೆಯುತ್ತೆ ಕಾಮಗಾರಿ?
ಇಡೀ ಕಾಮಗಾರಿ ಸಂಪೂರ್ಣವಾಗಿ ರೊಬೋಟಿಕ್ ತಂತ್ರಜ್ಞಾನದಲ್ಲಿ ನಡೆಯುತ್ತದೆ. ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ನಿಖರವಾಗಿ ನಿರ್ಮಾಣ ಸಾಮಗ್ರಿಗಳು ರೊಬೋಟ್‌ಗಳ ಮೂಲಕ ಸಾಗಣೆಯಾಗುತ್ತವೆ. ಮಾನವರಹಿತ ಬುಲ್ಡೋಜರ್‌ಗಳು, ಪೇವರ್‌ಗಳು ಮತ್ತು ರೋಲರ್‌ಗಳೇ ಹಂತ ಹಂತವಾಗಿ ಅಣೆಕಟ್ಟು ನಿರ್ಮಾಣ ಕಾರ್ಯ ಮಾಡುತ್ತವೆ.
ರೋಲರ್‌ಗಳಲ್ಲಿ ಅಳವಡಿಸಲಾಗಿರುವ ಸೆನ್ಸರ್‌ಗಳು ಪ್ರತಿಯೊಂದು 3ಡಿ ಪ್ರಿಂಟೆಡ್ ಪದರಗಳ ದೃಢತೆ ಮತ್ತು ಸ್ಥಿರತೆಯ ಕುರಿತು ಕೃತಕ ಬುದ್ಧಿಮತ್ತೆ ವ್ಯವಸ್ಥೆಗೆ ಮಾಹಿತಿ ರವಾನಿಸುತ್ತಿರುತ್ತದೆ. ಅಣೆಕಟ್ಟು ನಿರ್ಮಾಣವು 590 ಅಡಿ ಎತ್ತರಕ್ಕೆ ತಲುಪುವವರೆಗೂ ಈ ಪ್ರಕ್ರಿಯೆ ನಡೆಯುತ್ತಿರುತ್ತದೆ.
Related Articles
ಈ ವಿಶಿಷ್ಟ ಯೋಜನೆಯ ಸಿದ್ಧತೆಗಾಗಿಯೇ ಎರಡು ವರ್ಷ ಬೇಕಾಗುತ್ತದೆ ಎಂದು ತಜ್ಞರು ತಿಳಿಸಿದ್ದು, ಸಿದ್ಧತೆ ಪೂರ್ಣಗೊಂಡ ನಂತರ ಅಣೆಕಟ್ಟು ನಿರ್ಮಾಣ ಶುರುವಾಗಲಿದೆಯಂತೆ.
590 ಅಡಿ-ಅಣೆಕಟ್ಟಿನ ಎತ್ತರ
5 ಶತಕೋಟಿ ಕಿಲೋ ವ್ಯಾಟ್ ಹವರ್ಸ್-ವಾರ್ಷಿಕ ವಿದ್ಯುತ್ ಉತ್ಪಾದನೆ ಸಾಮರ್ಥ್ಯ
20 ಅಡಿ-ಪ್ರಸ್ತುತ ಜಗತ್ತಿನ 3ಡಿ ಪ್ರಿಂಟೆಡ್ ಕಟ್ಟಡಗಳ ಗರಿಷ್ಠ ಎತ್ತರ
2-ಎಷ್ಟು ವರ್ಷಗಳಲ್ಲಿ ಡ್ಯಾಂ ನಿರ್ಮಾಣಕ್ಕೆ ಚಾಲನೆ