ಬೀಜಿಂಗ್: ನೆರೆ ರಾಷ್ಟ್ರಗಳ ಕಬಳಿಕೆಗೆ ಕಾದು ಕುಳಿತಿರುವ ಚೀನ, ಸತತ 8ನೇ ವರ್ಷವೂ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಘೋಷಿಸಿದೆ. ಪ್ರಸಕ್ತ ವರ್ಷ 225 ಶತಕೋಟಿ ಡಾಲರ್ ಮೊತ್ತವನ್ನು ರಕ್ಷಣಾ ಉದ್ದೇಶಕ್ಕಾಗಿ ಬಳಕೆ ಮಾಡಲು ಉದ್ದೇಶಿಸಿದೆ.
ಶೇಕಡವಾರು ಲೆಕ್ಕಾಚಾರದಲ್ಲಿ ಶೇ.7.2. ಕೊರೊನಾ ಹೊರತಾಗಿಯೂ ಕೂಡ ದೇಶದ ಸೇನೆ ಪ್ರಮುಖ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ ಎಂದು ಹೇಳುವ ಮೂಲಕ 2020ರ ಮೇ ನಲ್ಲಿ ಪೂರ್ವ ಲಡಾಖ್‌ನಲ್ಲಿ ಭಾರತದ ವಿರುದ್ಧ ದಂಡೆತ್ತಿ ಬಂದ ಅಂಶವನ್ನು ಪರೋಕ್ಷವಾಗಿ ಉಲ್ಲೇಖೀಸಲಾಗಿದೆ. ಗಡಿ ತಂಟೆ ಬಗೆಹರಿಸುವ ವಿಚಾರದಲ್ಲಿ 17 ಬಾರಿ ಮಾತುಕತೆ ನಡೆಸಿದ್ದರೂ, ಫಲಪ್ರದವಾಗಿಲ್ಲ. ಇದೇ ವೇಳೆ, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಮೂರನೇ ಬಾರಿಯ 5 ವರ್ಷದ ಅವಧಿ ಪ್ರಸಕ್ತ ವರ್ಷದಿಂದಲೇ ಶುರುವಾಗಲಿದೆ. ಈ ಅವಧಿಯಲ್ಲಿ ಶೇ.5ರಷ್ಟು ಆರ್ಥಿಕಾಭಿವೃದ್ಧಿ ಸಾಧಿಸಲೂ ಗುರಿ ಹಾಕಿಕೊಳ್ಳಲಾಗಿದೆ.