ಲಂಡನ್: ಪಶ್ಚಿಮ ರಾಷ್ಟ್ರಗಳ ಹಿಡಿತಕ್ಕೆ ಪರ್ಯಾಯವಾಗಿ ಅದರ ಜಾಗತಿಕ ಯೋಜನೆಗಳ ಭಾಗವಾಗಿ ಮಧ್ಯ ಏಷ್ಯಾದಲ್ಲಿ ತನ್ನ ಹಿಡಿತವನ್ನು ಬಲಪಡಿಸುವ ನಿಟ್ಟಿನಲ್ಲಿ ಚೀನಾ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಮೆರಿಕ ನೇತೃತ್ವದ ಉದಾರವಾದಿ ಕ್ರಮಕ್ಕೆ ಪರ್ಯಾಯವಾಗಿ ಪ್ರಶ್ನಾತೀತವಾಗಿ ಚೀನಾ ಪ್ರಾಬಲ್ಯ ಹೊಂದಲು ಮಧ್ಯ ಏಷ್ಯಾ ನಿರ್ಣಾಯಕವಾಗಿದೆ. ಇದರಲ್ಲಿ ರಷ್ಯಾ ಕಿರಿಯ ಪಾಲುದಾರನಾಗಲಿದೆ.
ಇತ್ತೀಚೆಗೆ ಮಧ್ಯ ಏಷ್ಯಾ ರಾಷ್ಟ್ರಗಳಾದ ಚೀನಾ, ಕಝಕಿಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ರಾಷ್ಟ್ರಗಳ ನಾಯಕರು ಭಾಗವಹಿಸಿದ್ದ ಶೃಂಗದಲ್ಲಿ ಮಾತನಾಡಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, “ಪರಸ್ಪರ ಸಹಾಯ, ಸಾಮಾನ್ಯ ಅಭಿವೃದ್ಧಿ, ಸಾರ್ವತ್ರಿಕ ಭದ್ರತೆ ಮತ್ತು ಶಾಶ್ವತ ಸ್ನೇಹದ ಆಧಾರದಲ್ಲಿ ಮಧ್ಯ ಏಷ್ಯಾ ರಾಷ್ಟ್ರಗಳ ಭವಿಷ್ಯ ಅಡಗಿದೆ ಎಂಬುದು ಚೀನಾದ ದೃಷ್ಟಿಯಾಗಿದೆ’ ಎಂದು ಹೇಳಿದ್ದಾರೆ. ಮಧ್ಯ ಏಷ್ಯಾದಲ್ಲಿ ತನ್ನ ಬಲವನ್ನು ಅಧಿಕಗೊಳಿಸಲು ಚೀನಾ ಮೊದಲಿನಿಂದಲೂ ಪ್ರಯತ್ನಿಸುತ್ತಿದೆ.