Advertisement

ಬಂದೂಕಿಗೆ ಸತ್ಯದ ಶಕ್ತಿಯ ಮೂಲಕ ಉತ್ತರ

10:00 AM Dec 26, 2019 | Team Udayavani |

ಗಯಾ(ಬಿಹಾರ): ಚೀನದ ಕಮ್ಯುನಿಸ್ಟ್‌ ಪಕ್ಷದ ವಿರುದ್ಧ ತಮ್ಮ ಹೋರಾಟ ಮುಂದುವರಿಯಲಿದೆ. ಅವರ ಬಂದೂಕಿನ ಶಕ್ತಿಯನ್ನು ನಮ್ಮ ಸತ್ಯದ ಶಕ್ತಿಯ ಮೂಲಕ ಎದುರಿಸಲಿದ್ದೇವೆ ಎಂದು ಟಿಬೆಟಿಯನ್‌ ಧರ್ಮಗುರು ದಲೈ ಲಾಮಾ ಬುಧವಾರ ಹೇಳಿದ್ದಾರೆ.

Advertisement

ವಾರ್ಷಿಕ ಯಾತ್ರೆಗಾಗಿ 15 ದಿನಗಳ ಮಟ್ಟಿಗೆ ಇಲ್ಲಿಯ ಬುದ್ಧಗಯಾದ ಮಹಾಬೋಧಿ ದೇವಸ್ಥಾನಕ್ಕೆ ಲಾಮಾ ಆಗಮಿಸಿದ್ದಾರೆ. ಟಿಬೆಟ್‌ನ ಬೌದ್ಧರು ನಂಬಿರುವ ‘ಸತ್ಯದ ಬಲ’ದ ವಿರುದ್ಧ ಚೀನದ ಕಮ್ಯುನಿಸ್ಟರು ‘ಬಂದೂಕಿನ ಬಲ’ವನ್ನು ಪ್ರಯೋಗಿಸುತ್ತಿದ್ದಾರೆ. ಆದರೆ ಮೂರು ವರ್ಷಗಳ ಕೆಳಗೆ ನಡೆಸಿದ ಸಮೀಕ್ಷೆ ಪ್ರಕಾರ, ಚೀನದಲ್ಲಿ ಬೌದ್ಧರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next