Advertisement

ಭಾರತದ ವಿರುದ್ಧ ಪಿತೂರಿ; ಪಾಕಿಸ್ಥಾನ ನೌಕಾಪಡೆಗಾಗಿ ಚೀನದಿಂದ ಮತ್ತೊಂದು ಯುದ್ಧ ನೌಕೆ!

08:52 PM Jan 30, 2021 | Team Udayavani |

ಹೊಸದಿಲ್ಲಿ: ಎರಡು ನೆರೆಯ ರಾಷ್ಟ್ರಗಳಾದ ಚೀನ ಮತ್ತು ಪಾಕಿಸ್ಥಾನ ಮತ್ತೆ ಭಾರತದ ವಿರುದ್ಧ ಸಂಚು ಹೂಡುತ್ತಿವೆ. ಲಡಾಖ್‌ನಲ್ಲಿ ಭಾರತೀಯ ಸೇನೆಯಿಂದ ಮುಜುಗರಕ್ಕೀಡಾದ ಚೀನ ತನ್ನ ವಿಶೇಷ ಸ್ನೇಹಿತ ಪಾಕಿಸ್ಥಾನಕ್ಕಾಗಿ ಎರಡನೇ ನೌಕಾಯುದ್ಧ ಹಡಗು (ಫ್ರಿಗೇಟ್‌) ಸಿದ್ಧಪಡಿಸಿದೆ.

Advertisement

ಗ್ಲೋಬಲ್‌ ಟೈಮ್ಸ್‌ ವರದಿ ಮಾಡಿದಂತೆ ಚೀನದ ಈ 054ಎ ಫ್ರಿಗೇಟ್‌, ಸುಧಾರಿತ ರಾಡಾರ್‌ ವ್ಯವಸ್ಥೆಗಳು ಮತ್ತು ದೀರ್ಘ‌-ಶ್ರೇಣಿಯ ಕ್ಷಿಪಣಿಗಳನ್ನು ಹೊಂದಿದೆ. ಮಾಧ್ಯಮ ವರದಿಗಳ ಪ್ರಕಾರ ಇದು ಪಾಕಿಸ್ಥಾನದ ರಕ್ಷಣ ಸಾಮರ್ಥ್ಯಕ್ಕೆ ಹೊಸ ಶಕ್ತಿಯನ್ನು ತುಂಬಿದೆ.

2017ರಲ್ಲಿ ಗುತ್ತಿಗೆ
054 ಎ/ಪಿ ಮಾದರಿಯ 4 ಯುದ್ಧನೌಕೆಗಳ ನಿರ್ಮಾಣಕ್ಕಾಗಿ ಪಾಕಿಸ್ಥಾನ ನೌಕಾಪಡೆ 2017ರಲ್ಲಿ ಚೀನದಿಂದ ಒಪ್ಪಂದ ಮಾಡಿಕೊಂಡಿತು. ಮೊದಲ ಫ್ರಿಗೇಟ್‌ ಅನ್ನು ಆಗಸ್ಟ್‌ 2020ರಲ್ಲಿ ಉತ್ಪಾದಿಸಲಾಗಿತ್ತು. ಪಾಕಿಸ್ಥಾನದ ಎರಡನೇ ಯುದ್ಧ ನೌಕೆಯನ್ನು ಶುಕ್ರವಾರ   ಹಸ್ತಾಂತರಿಸಲಾಯಿತು.

ಚೀನದ ಅತ್ಯಾಧುನಿಕ ಯುದ್ಧ ನೌಕೆ
ಈ ಹಡಗು ಚೀನೀ ಪೀಪಲ್ಸ್‌ ಲಿಬರೇಶನ್‌ ಆರ್ಮಿ (ಪಿಎಲ್‌ಎ) ನೌಕಾಪಡೆಯ ಮುಖ್ಯ ಅಸ್ತ್ರವಾಗಿದೆ. ಪಿಎಲ್‌ಎ ಅಂತಹ 30 ಹಡಗುಗಳನ್ನು ಹೊಂದಿದೆ. ನೇವಲ್‌ ಮಿಲಿಟರಿ ಸ್ಟಡೀಸ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಹಿರಿಯ ಸಂಶೋಧನ ಸಹವರ್ತಿ ಜಾಂಗ್‌ ಅವರ ಪ್ರಕಾರ ಹೊಸ ಫ್ರಿಗೇಟ್‌ ಟೈಪ್‌ 054 ಎ ಅನ್ನು ಆಧರಿಸಿದೆ. ಇದು ಚೀನದ ಅತ್ಯಾಧುನಿಕ ಫ್ರಿಗೇಟ್‌ರೂ ಹೌದು.

ಚೀನದಿಂದ 8 ಜಲಾಂತರ್ಗಾಮಿ ನೌಕೆ
ಗ್ಲೋಬಲ್‌ ಟೈಮ್ಸ್‌ ವರದಿ ಮಾಡಿದ ಪ್ರಕಾರ ಪಾಕಿಸ್ಥಾನ ನೌಕಾಪಡೆಯು ಚೀನದಿಂದ 8 ಜಲಾಂತರ್ಗಾಮಿ ನೌಕೆಗಳನ್ನು ಖರೀದಿಸಿದೆ. ಈ ಜಲಾಂತರ್ಗಾಮಿ ಟೈಪ್‌ 039 ಬಿ ಯುವಾನ್‌ ವರ್ಗಕ್ಕೆ ಸೇರಿದ್ದಾಗಿದೆ. ಇದು ಡೀಸೆಲ್‌ ವಿದ್ಯುತ್‌ ಜಲಾಂತರ್ಗಾಮಿ. ಇದು anti-ship cruise missiles‌ ಅನ್ನು ಒಯ್ಯುತ್ತದೆ. air independent ಪ್ರೊಪಲ್ಷನ್‌ ಸಿಸ್ಟಮ್‌ನಿಂದಾಗಿ ಇದು ಕಡಿಮೆ ಶಬ್ದವನ್ನು ಹೊಂದಿರುತ್ತದೆ. ಇದರಿಂದಾಗಿ ನೀರಿನ ಅಡಿಯಲ್ಲಿ ಕಂಡುಹಿಡಿಯುವುದು ತುಂಬಾ ಕಷ್ಟ.

Advertisement

ಜೆಎಫ್-17
ಪಾಕಿಸ್ಥಾನಕ್ಕೆ ಚೀನ ಈಗಾಗಲೇ ಅತ್ಯಾಧುನಿಕ ಜೆಎಫ್-17 ಯುದ್ಧ ವಿಮಾನವನ್ನು ಹಸ್ತಾಂತರಿಸಿದೆ. ಜೆಎಫ್ 17 ಜಗತ್ತಿನ ಅತ್ಯಾಧುನಿಕ ಯುದ್ಧ ವಿಮಾನಗಳ ಸಾಲಿನಲ್ಲಿ ಸೇರುತ್ತದೆ. ಇದಕ್ಕೆ ಸ್ಪರ್ಧೆಯೊಡ್ಡಲು ಅಮೆರಿಕ ಈಗಾಗಲೇ ಎಫ್ -16 ಅನ್ನು ಹೊಂದಿದೆ. ಭಾರತ ಅತ್ಯಾಧುನಿಕ ರಫೆಲ್‌ ಹೊಂದಿದ್ದು, ಜೆಎಫ್ 17ಗಿಂತ ಬಲಿಷ್ಠವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next