Advertisement

ಕೃತಕ ಚಂದ್ರನ ಸೃಷ್ಟಿಸಿದ ಚೀನ !

01:07 PM Jan 18, 2022 | Team Udayavani |

ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ತಾನು ಕೈಗೊಂಡಿರುವ ವೈಜ್ಞಾನಿಕ ಸಂಶೋಧನೆಗಳ ಪರೀಕ್ಷೆಗಾಗ ಚೀನಾ, ಪುಟಾಣಿ ಕೃತಕ ಚಂದ್ರನನ್ನು ಸೃಷ್ಟಿಸಿದೆ. ಇತ್ತೀಚೆಗೆ, ಕೃತಕ ಸೂರ್ಯನನ್ನು ಪ್ರಯೋಗಗಳಿಗಾಗಿ ಸೃಷ್ಟಿಸಿದ್ದ ಅದು, ವಿಶ್ವದಲ್ಲೇ ಪ್ರಪ್ರಥಮ ಎನ್ನುವಂಥ ಮತ್ತೂಂದು ಪ್ರಯತ್ನಕ್ಕೆ ಕೈ ಹಾಕಿದೆ.

Advertisement

ಎಲ್ಲಿದೆ?
– ಚೀನಾದ ಕ್ಸುಝೌ ನಗರದ ಹೊರವಲಯದಲ್ಲಿ.

ಹೇಗಿದೆ?
– ಎರಡು ಅಡಿ ಅಗಲದ ವ್ಯಾಸವುಳ್ಳ ಪುಟ್ಟ ವ್ಯವಸ್ಥೆಯಿದು.
– ಭೂಮಿಯ ಗುರುತ್ವಾಕರ್ಷಣದ ಆರನೇ ಒಂದು ಭಾಗದಷ್ಟು ಗುರುತ್ವಾಕರ್ಷಣ ಶಕ್ತಿ ಹೊಂದಿದೆ.

ಏನಿದೆ ಕೃತಕ ಚಂದ್ರನಲ್ಲಿ?
– ಅಲ್ಪ ಗುರುತ್ವಾಕರ್ಷಣ ಶಕ್ತಿಯುಳ್ಳ ವಲಯ
– ಚಂದ್ರನಂತೆಯೇ ಬೆಳಕು, ತಾಪಮಾನ
– ಚಂದ್ರನ ಮೇಲ್ಮೆ„ನಂತೆಯೇ ಈ ವಲಯದಲ್ಲೂ ಪರಿಸರ ನಿರ್ಮಾಣ

ಉಪಯೋಗಗಳೇನು?
– ಶೂನ್ಯ ಗುರುತ್ವಾಕರ್ಷಣಾ ಶಕ್ತಿ ವಲಯಗಳಲ್ಲಿ (ಝೀರೋ ಗ್ರಾವಿಟಿ) ವಿವಿಧ ಪ್ರಯೋಗಗಳನ್ನು ಕೈಗೊಳ್ಳಲು ಚೀನಾ ಈವರೆಗೆ ಅನ್ಯ ರಾಷ್ಟ್ರಗಳ ಮೊರೆ ಹೋಗಬೇಕಿತ್ತು. ಈಗ ತನ್ನಲ್ಲೇ ಅಂಥದ್ದೊಂದು ವ್ಯವಸ್ಥೆಯನ್ನು ರೂಪಿಸಿಕೊಂಡಿರುವುದರಿಂದ ತನ್ನಲ್ಲೇ ಅಂಥ ಪ್ರಯೋಗಗಳನ್ನು ನಿರಾತಂಕವಾಗಿ ಮುಂದುವರಿಸಬಹುದಾಗಿದೆ.
– ಚಂದ್ರನ ಕುರಿತಂತೆ ಅಧ್ಯಯನ ನಡೆಸಲು ಚೀನಾ ಚಾಂಗ್‌’ ಎ-6, ಚಾಂಗ್‌’ ಎ-7, ಚಾಂಗ್‌’ ಎ-9 ಎಂಬ ಯೋಜನೆಗಳನ್ನು ಸಿದ್ಧಪಡಿಸಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next