Advertisement

ಅಧ್ಯಕ್ಷ ಕ್ಸಿ ಕುಟುಂಬದ ಬಗ್ಗೆ ವರದಿ; ವಾಲ್ ಸ್ಟ್ರೀಟ್ ಪತ್ರಕರ್ತನಿಗೆ ಚೀನಾದಿಂದ ಗೇಟ್ ಪಾಸ್!

09:45 AM Sep 01, 2019 | Nagendra Trasi |

ಬೀಜಿಂಗ್: ಚೀನಾ ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್ ಸಂಬಂಧಿಯ ಕುರಿತು ತನಿಖಾ ವರದಿ ಪ್ರಕಟಿಸಿದ ದ ವಾಲ್ ಸ್ಟ್ರೀಟ್ ಜರ್ನಲ್ಸ್ ನ ಪತ್ರಕರ್ತನನ್ನು ದೇಶದಿಂದ ಹೊರಹಾಕಿದೆ ಎಂದು ವರದಿ ತಿಳಿಸಿದೆ.

Advertisement

ಕಳೆದ ತಿಂಗಳು ದ ವಾಲ್ ಸ್ಟ್ರೀಟ್ ಜರ್ನಲ್ಸ್ ನ ಚೀನಾ ವರದಿಗಾರ ಸಿದ್ಧಪಡಿಸಿದ್ದ ತನಿಖಾ ವರದಿಯನ್ನು ಪ್ರಕಟಿಸಿತ್ತು. ಚೀನಾ ಅಧ್ಯಕ್ಷ ಜಿಂಗ್ ಪಿಂಗ್ ಸಂಬಂಧಿ ಆಸ್ಟ್ರೇಲಿಯಾದಲ್ಲಿ ಶಾಮೀಲಾಗಿದ್ದ ಜೂಜು ಮತ್ತು ಹಣಕಾಸಿನ ಅವ್ಯವಹಾರದ ಕುರಿತು ವಿಸ್ತೃತ ವರದಿ ಪ್ರಕಟವಾಗಿತ್ತು.

ಈ ಹಿನ್ನೆಲೆಯಲ್ಲಿ ದ ವಾಲ್ ಸ್ಟ್ರೀಟ್ ಜರ್ನಲ್ಸ್ ನ ಸಿಂಗಾಪೂರ್ ಪ್ರಜೆ ಚುನ್ ಹಾನ್ ವಾಂಗ್ ಪತ್ರಕರ್ತನ ಮಾನ್ಯತೆಯನ್ನು ನವೀಕರಿಸುವುದಿಲ್ಲ ಎಂದು ಚೀನಾ ಅಧಿಕಾರಿಗಳು ವಾಲ್ ಸ್ಟ್ರೀಟ್ ಗೆ ತಿಳಿಸಿದ್ದಾರೆ. ವಾಂಗ್ 2014ರಿಂದ ಬೀಜಿಂಗ್ ನಲ್ಲಿರುವ ವಾಲ್ ಸ್ಟ್ರೀಟ್ ಜರ್ನಲ್ಸ್ ಬ್ಯೂರೋದಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ವಾಂಗ್ ಅವರ ಪ್ರೆಸ್ ಕ್ರೆಡೆನ್ಶಿಯಲ್ಸ್ ಶುಕ್ರವಾರಕ್ಕೆ ಕೊನೆಗೊಂಡಿತ್ತು.

“ನಮ್ಮ ಆಡಳಿತದ ವಿರುದ್ಧ ವಿದೇಶಿ ಪತ್ರಕರ್ತರು ದ್ವೇಷದ ವರದಿಗಳನ್ನು ಪ್ರಕಟಿಸುವುದನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದು ಚೀನಾ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ. ಚೀನಾದಲ್ಲಿ ವಿದೇಶಿ ಪತ್ರಕರ್ತರು ಸುದ್ದಿ ಸಂಗ್ರಹಿಸಲು ಮತ್ತು ಪ್ರಕಟಿಸಲು ಕಾನೂನು ಮತ್ತು ನಿಬಂಧನೆಗಳನ್ನು ಸರಳಗೊಳಿಸಿದ್ದೇವೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next