Advertisement
ಈ ಎಲ್ಲ ಹಡಗುಗಳನ್ನು “ಚೀನ ಸ್ಟೇಟ್ ಶಿಪ್‌ಬಿಲ್ಡಿಂಗ್ ಕಾರ್ಪೊರೇಶನ್’ (ಸಿಎಸ್‌ಎಸ್‌ಸಿ) ಸಂಸ್ಥೆ ನಿರ್ಮಿಸಿದೆ. ಶಾಂಘೈನಲ್ಲಿ ಇತ್ತೀಚೆಗೆ ನಡೆದಿದ್ದ ಸರಳ ಸಮಾರಂಭವೊಂದರಲ್ಲಿ ಪಾಕಿಸ್ಥಾನ ನೌಕಾ ಪಡೆಯ ಮುಖ್ಯಸ್ಥರಿಗೆ ಚೀನ ನೌಕಾಪಡೆಯ ಮುಖ್ಯಸ್ಥರು ಈ ಹಡಗುಗಳನ್ನು ಔಪಚಾರಿಕವಾಗಿ ಹಸ್ತಾಂತರಿಸಿದ್ದಾರೆ. ಹೀಗೆ, ಹಸ್ತಾಂತರಗೊಂಡಿರುವ “ಟೈಪ್ 054ಎ/ಪಿ’ ಎಂಬ ಮಾದರಿಯ ಈ ಹಡಗುಗಳನ್ನು “ಪಿಎನ್‌ಎಸ್ ತುಘ್ರಿಲ್’ ಎಂದು ಮರುನಾಮಕರಣ ಮಾಡಲಾಗಿದೆ ಎಂದು “ಗ್ಲೋಬಲ್ ಟೈಮ್ಸ್’ ವರದಿ ಮಾಡಿದೆ.
Related Articles
Advertisement
“ಬುಧವಾರಕ್ಕೆ ಅನೇಕ ಕಾರ್ಯಕ್ರಮಗಳು ನಿಗದಿಯಾಗಿರುವ ಹಿನ್ನೆಲೆಯಲ್ಲಿ ಸಭೆಗೆ ಹಾಜ ರಾಗಲು ಸಾಧ್ಯವಾಗುತ್ತಿಲ್ಲ. ಆದರೆ ದ್ವಿಪಕ್ಷೀಯ ಮಾರ್ಗದೊಂದಿಗೆ ಭಾರತದೊಂದಿಗೆ ಮಾತುಕತೆ ಯಲ್ಲಿರುತ್ತೇವೆ’ ಎಂದು ಚೀನ ಕಾರಣ ನೀಡಿದೆ.
ದಿಲ್ಲಿಯಲ್ಲಿ ನ. 10ರಂದು ಈ ಸಮ್ಮೇಳನ ನಡೆಯಲಿದ್ದು, ಅದರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಇರಾನ್, ರಷ್ಯಾ, ಕಜಕಿಸ್ಥಾನ, ಕಿರ್ಗಿಸ್ಥಾನ, ತಜಿಕಿಸ್ಥಾನ, ತುರ್ಕ್ ಮೆನಿಸ್ಥಾನ ಮತ್ತು ಉಜ್ಬೇಕಿಸ್ಥಾನದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.