Advertisement

“ಉಗ್ರ’ಬೆಂಬಲಕ್ಕೆ ಚೀನಾ ಸಮರ್ಥನೆ

06:00 AM Sep 30, 2018 | |

ವಾಷಿಂಗ್ಟನ್‌: ಪಾಕಿಸ್ತಾನ ಮೂಲದ ಜೈಶ್‌-ಎ- ಮೊಹಮ್ಮದ್‌ ಉಗ್ರ ಮಸೂದ್‌ ಅಜರ್‌ನನ್ನು “ಜಾಗತಿಕ ಭಯೋತ್ಪಾದಕರ ಪಟ್ಟಿ’ಗೆ ಸೇರ್ಪಡೆ ಗೊಳಿಸುವ ಭಾರತದ ಯತ್ನಕ್ಕೆ ಪದೇ ಪದೆ ಅಡ್ಡಿ ಪಡಿಸುತ್ತಾ ಬಂದಿರುವ ಚೀನಾ, ತನ್ನ “ಉಗ್ರ ಬೆಂಬಲ’ದ ನಡೆಯನ್ನು ಸಮರ್ಥಿಸಿಕೊಂಡಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳಲ್ಲೇ ಈ ವಿಚಾರದಲ್ಲಿ ಒಮ್ಮತ ಏರ್ಪಟ್ಟಿಲ್ಲ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ನೆಪ ಹೇಳಿದ್ದಾರೆ. 

Advertisement

ಉಗ್ರ ಮಸೂದ್‌ ಅಜರ್‌ ವಿಚಾರದಲ್ಲಿ ಎಲ್ಲ ಸದಸ್ಯ ರಾಷ್ಟ್ರಗಳ ಬೆಂಬಲ ಸಿಕ್ಕರೂ, ಪ್ರತಿ ಬಾರಿ ತಾನೇ ಅಡ್ಡಗಾಲು ಹಾಕುತ್ತಿರುವ ಚೀನಾ, “ಎಲ್ಲ ಸದಸ್ಯ ರಾಷ್ಟ್ರಗಳೂ ಒಮ್ಮತಕ್ಕೆ ಬಂದರೆ, ನಾವೂ ಬೆಂಬಲ ನೀಡುತ್ತೇವೆ. ಆದರೆ, ಅಂಥ ಒಮ್ಮತ ಕಾಣುತ್ತಿಲ್ಲ’ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next