Advertisement

ಚೀನ: ಮುಚ್ಚುವ ಭೀತಿಯಲ್ಲಿ ಸಿನೆಮಾ ಮಾಲ್‌ಗ‌ಳು

01:48 PM Jun 05, 2020 | mahesh |

ಬೀಜಿಂಗ್‌: ಕೋವಿಡ್‌ ಹಾವಳಿಯಿಂದಾಗಿ ಚೀನದಲ್ಲಿ ಸಿನೆಮಾ ಮಂದಿರಗಳು ಮುಚ್ಚಿದ ಬಳಿಕ ಈಗ ಮತ್ತೆ ತೆರೆದುಕೊಂಡರೂ ಜನರು ಬರದೇ ಇರುವುದರಿಂದ ಶಾಶ್ವತವಾಗಿ ಮುಚ್ಚುವ ಭೀತಿಯಲ್ಲಿವೆ. ಕೋಟ್ಯಂತರ ಮಂದಿ ಆನ್‌ಲೈನ್‌ನಲ್ಲೇ ಸಿನೆಮಾ ವೀಕ್ಷಿಸುತ್ತಿದ್ದು, ಹಲವು ಆನ್‌ಲೈನ್‌ ತಾಣಗಳು ಸಿನೆಮಾ ಪ್ರದರ್ಶನ ನೀಡುತ್ತಿವೆ.

Advertisement

ಇದರಿಂದಾಗಿ ಸಾವಿರಕ್ಕೂ ಹೆಚ್ಚು ಸಿನೆಮಾ ಮಂದಿರಗಳು ಮುಚ್ಚಲಿವೆ ಎಂದು ಚೀನದ ತಜ್ಞರು ಹೇಳಿದ್ದಾರೆ. ಇದೀಗ ಅಲ್ಲಿ 12 ಸಾವಿರಕ್ಕೂ ಹೆಚ್ಚು ಸಿನೆಮಾ ಮಂದಿರಗಳಿವೆ. ಕಳೆದೊಂದು ದಶಕದಲ್ಲಿ ಇದರ ಸಂಖ್ಯೆ ದುಪ್ಟಟ್ಟಾಗಿತ್ತು ಎಂದು ಮಾರುಕಟ್ಟೆಗಳ ಕುರಿತ ಸಮೀಕ್ಷೆ ನಡೆಸುವ ಐಬಿಎಸ್‌ಐ ವರ್ಲ್x ಹೇಳಿದೆ. ಒಂದು ಅಂದಾಜಿನ ಪ್ರಕಾರ ಪ್ರತಿ 10ರಲ್ಲಿ ನಾಲ್ಕು ಸಿನೆಮಾ ಮಂದಿರಗಳು ಮುಚ್ಚಲಿವೆ ಎಂದು ಚೀನ ಫಿಲಂ ಅಸೋಸಿಯೇಷನ್‌ ಹೇಳಿದೆ. ಅಂದರೆ ಸುಮಾರು 5 ಸಾವಿರದಷ್ಟು ಸಿನೆಮಾ ಮಂದಿರಗಳು ಮುಚ್ಚಲಿವೆ ಎಂದು ಅಂದಾಜಿಸಲಾಗಿದೆ. ಚೀನದಲ್ಲಿ ಲಾಕ್‌ಡೌನ್‌ ತೆರವಿನ ಆದೇಶ ಕೊನೆಯದಾಗಿ ಸಿನೆಮಾ ಮಂದಿರಕ್ಕೆ ಅನ್ವಯವಾಗಲಿದೆ. ಈ ಕಾರಣದಿಂದಲೂ ಬುಕ್ಕಿಂಗ್‌ ಕಡಿಮೆ ಇರಬಹುದು ಎಂದು ಊಹಿಸಲಾಗಿದೆ.

ಆದಾಯಕ್ಕೆ ಬಿತ್ತು ಪೆಟ್ಟು!
ಇಳಿಯತೊಡಗಿತ್ತು. 500ಕ್ಕೂ ಕಡಿಮೆ ಸೀಟುಗಳಿರುವ ಸಿನೆಮಾ ಮಂದಿರದ ಗಳಿಕೆ ತೀವ್ರವಾಗಿ ಕಡಿಮೆಯಾಗಿತ್ತು. ಆದಾಯ ಕಳೆದ ವರ್ಷದ ಆದಾಯದ ಶೇ.10ರಷ್ಟು ಮಾತ್ರ ಆಗಿತ್ತು. ಒಂದು ವೇಳೆ ಅಕ್ಟೋಬರ್‌ವರೆಗೂ ಸಿನೆಮಾ ಮಂದಿರಗಳು ತೆರೆಯುವುದಿಲ್ಲ ಎಂದಾದರೆ, ಇಡೀ ಬೋರ್ಡ್‌ನ ವಾರ್ಷಿಕ ಗಳಿಕೆ ಶೇ.31ರಷ್ಟು ಇಳಿಕೆ ಕಾಣಲಿದೆ ಎಂದು ಹೇಳಲಾಗಿದೆ. ಚೀನದ ಸಿನೆಮಾ ರಂಗದ ಒಟ್ಟು ವಾರ್ಷಿಕ ಗಳಿಕೆ 53280 ಕೋಟಿ ರೂ. ಆಗಿದ್ದು, ಈ ವರ್ಷ ಅಕ್ಟೋಬರ್‌ವರೆಗೆ ಸಿನೆಮಾ ಮಂದಿರ ತೆರೆದಿಲ್ಲ ಎಂದಾದರೆ ಈ ವರ್ಷ ಸಮಾರು ಶೇ.91ರಷ್ಟು ಆದಾಯ ಖೋತಾ ಆಗಲಿದೆ ಎಂದು ಹೇಳಲಾಗಿದೆ.

ಆನ್‌ಲೈನ್‌ ಸುಗ್ಗಿ
ಸದ್ಯ ಚೀನದಲ್ಲಿ ಆನ್‌ಲೈನ್‌ ಸಿನೆಮಾಗಳಿಗೆ ಸುಗ್ಗಿ. ಯೂಕೋವ್‌, ಟೆನ್ಸೆಂಟ್‌ ವೀಡಿಯೋ, ಇಕ್ವಿ ಇತ್ಯಾದಿ ತಾಣಗಳು ಪ್ರಸಿದ್ಧವಾಗಿವೆ. ಆದರೆ ಇವುಗಳಲ್ಲಿ ಭಾರೀ ಪೈಪೋಟಿ ಇದೆ. ಇದು ಪ್ರಮುಖ ಸವಾಲು ಎಂದು ಚೀನಾದ ಮಾರುಕಟ್ಟೆ ಸಂಶೋಧನೆ ಕುರಿತ ಗುಂಪೊಂದರ ಸ್ಥಾಪಕ ಶುವಾನ್‌ ರೈನ್‌ ಹೇಳುತ್ತಾರೆ. ಆನ್‌ಲೈನ್‌ ತಾಣಗಳ ಚಂದಾದಾರರಾಗಲು ಆಗಲು ಮಾಸಿಕ 140 ರೂ.ಗಳನ್ನು ಪಾವತಿಸಿದರೆ ಸಾಕಾಗುತ್ತದೆ. ಆದರೆ ಸಿನೆಮಾ ಟಿಕೆಟ್‌ಗಳಿಗೆ 1,480 ರೂ. ತೆರಬೇಕಾಗುತ್ತದೆ.

ಚೀನಾದ ಅತಿ ದೊಡ್ಡ ಇಂಟರ್ನೆಟ್‌ ದೈತ್ಯ ಕಂಪೆನಿಗಳು ಈ ಸಿನೆಮಾ ಆನ್‌ಲೈನ್‌ ತಾಣಗಳ ಮಾಲಕತ್ವವನ್ನು ಹೊಂದಿರುವುದರಿಂದ ಅವುಗಳ ಚಂದಾದಾರಿಕೆ ಕಡಿಮೆ ಖರ್ಚಿನದ್ದಾಗಿದೆ ಎಂದು ಅವರು ಹೇಳುತ್ತಾರೆ. ಇನ್ನು ಆನ್‌ಲೈನ್‌ನಲ್ಲಿ ಚಿತ್ರ ತೆರೆಗೆ ಬರುವ ದಿನವೇ ನೋಡಬಹುದು. ಇದಕ್ಕೆ ತೆರಬೇಕಾದ ಹಣವೂ ಸಿನೆಮಾ ಮಂದಿರಕ್ಕೆ ಕೊಡುವ ಟಿಕೆಟ್‌ಗಿಂತಲೂ ಕಡಿಮೆ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಸಿನೆಮಾ ಮಂದಿರದ ಹಲವರು ಮುಚ್ಚಬೇಕಾದ ಪ್ರಮೇಯ ಇದೆ ಎಂದು ಹೇಳುತ್ತಾರೆ.

Advertisement

ಹೊಸ ಚಿತ್ರಗಳಿಲ್ಲದೆ ಸಮಸ್ಯೆ
ಸದ್ಯ ಶೂಟಿಂಗ್‌ಗಳು ನಡೆಯುತ್ತಿಲ್ಲ. ಸಂಚಾರಕ್ಕೂ ನಿರ್ಬಂಧವಿದೆ. ಇದರಿಂದ ಹೊಸ ಚಿತ್ರಗಳ ಬಿಡುಗಡೆ ವಿಳಂಬವಾಗಿದೆ. ಸದ್ಯ ಶೇ.20ರಷ್ಟು ಚಿತ್ರ ನಿರ್ಮಾಣ ಪ್ರಾರಂಭವಾದರೂ ಉಳಿದವು ಹಣವಿಲ್ಲದ್ದರಿಂದ ಸಂಕಷ್ಟದಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next