Advertisement

G- 20ಗೆ ಚೀನ ತಂದಿತ್ತು ನಿಗೂಢ ಸಾಧನ!

01:13 AM Sep 14, 2023 | Team Udayavani |

ಹೊಸದಿಲ್ಲಿ: ಕಳೆದ ವಾರ ಇಡೀ ಭಾರತದಲ್ಲಿ ಜಿ20 ಸಮಾವೇಶದ್ದೇ ಸುದ್ದಿ. ಎಲ್ಲ ಕಡೆ ಪ್ರಧಾನಿ ಮೋದಿಯ ನೇತೃತ್ವದಲ್ಲಿ ಭಾರತ ಯಶಸ್ವಿಯಾಗಿ ಶೃಂಗವನ್ನು ಮುಗಿಸಿದ್ದು ಗಮನ ಸೆಳೆದಿತ್ತು. ಇಷ್ಟರ ಮಧ್ಯೆ ನೆರೆಯ ಚೀನ ಪ್ರತಿನಿಧಿಗಳು ಅತ್ಯಂತ ನಿಗೂಢ ಸಾಧನವೊಂದನ್ನು ಭಾರತಕ್ಕೆ ತಂದು, ಅದರ ಮರ್ಮವನ್ನು ಎಲ್ಲೂ ಬಿಟ್ಟುಕೊಡದೇ ವಾಪಸ್‌ ಮರಳಿ ದ್ದಾರೆ. ಚೀನದ ಕುಕೃತ್ಯ ಈಗ ಬೆಳಕಿಗೆ ಬಂದಿದ್ದು, ಆ ನಿಗೂಢ ಸಾಧನ ಏನಿರ­ಬಹುದು ಎಂಬ ಪ್ರಶ್ನೆಗಳು ಆರಂಭವಾಗಿವೆ.

Advertisement

ಚೀನ ನಿಯೋಗ ಭಾರತಕ್ಕೆ ಬಂದಿಳಿ­ಯುತ್ತಿದ್ದಂತೇ ಅವರ ಬ್ಯಾಗ್‌ಗಳ ಸಂಖ್ಯೆ, ಅದರ ಅಸಹಜ ಗಾತ್ರ ಭಾರತದ ಭದ್ರತಾ ಸಿಬಂದಿಯ ಗಮನಕ್ಕೆ ಬಂದಿತ್ತು. ರಾಜ ತಾಂತ್ರಿಕ ಬ್ಯಾಗ್‌ಗಳು ಎಂಬ ಕಾರಣಕ್ಕೆ ಭದ್ರತಾ ಸಿಬಂದಿ ತಪಾಸಣೆ ಮಾಡದೇ ಹೊಟೇಲ್‌ನೊಳಕ್ಕೆ ಕಳುಹಿಸಿದ್ದರು. ಒಬ್ಬ ಸಿಬಂದಿ ಬ್ಯಾಗ್‌ ಅನುಮಾನಾಸ್ಪದವಾಗಿದೆ ಎಂದು ಗಮನಕ್ಕೆ ತಂದರು.

ನಕಾರ: ಭಾರತದ ಭದ್ರತಾ ಸಿಬಂದಿ, ಬ್ಯಾಗ್‌ನೊಳಗಿರುವ ಸಾಧನವನ್ನು ಸ್ಕ್ಯಾನ್‌ ಮಾಡಲು ಅವಕಾಶ ನೀಡಲೇಬೇಕು ಎಂದು ಹಠ ಹಿಡಿದರು. ಅದಕ್ಕೆ ಚೀನ ಅಧಿಕಾ ರಿಗಳು ಆಕ್ಷೇಪಿಸಿದರು. ಸತತ 12 ಗಂಟೆಗಳ ಕಾಲ ಮೂವರು ಭದ್ರತಾ ಸಿಬಂದಿ ಕೊಠಡಿಯ ಹೊರಗೆ ಕಾವಲು ನಿಂತರು. ಅಂತಿಮವಾಗಿ ಅದನ್ನು ಚೀನ ರಾಯಭಾರ ಕಚೇರಿಗೆ ಕಳುಹಿಸಲಾಗಿತ್ತು.

450 ಪೊಲೀಸರೊಂದಿಗೆ ಮೋದಿ ಔತಣಕೂಟ
ಜಿ20 ಸಮ್ಮೇಳನ ಯಶಸ್ವಿಯಾಗಲು ದಿಲ್ಲಿ ಪೊಲೀಸರ ಹಗಲೂರಾತ್ರಿ ಪರಿಶ್ರಮ ಅನಿವಾರ್ಯ. ಭದ್ರತೆಯಲ್ಲಿ ಕಿಂಚಿತ್ತೂ ಲೋಪವಾಗದಂತೆ ಕೆಲಸ ಮಾಡಿದ ಪೊಲೀಸರ ಶ್ರಮವನ್ನು ಗುರುತಿಸಿ, ಗೌರವಿಸಲು ಮೋದಿ ಆಯ್ದ 450 ಪೊಲೀಸರನ್ನು ಗುರುತಿಸಲು ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.ಇವರೊಂದಿಗೆ ಮೋದಿ ವಿಶೇಷ ಔತಣಕೂಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next