Advertisement

ಕೊರೊನಾವೈರಸ್‌ಗೆ ಬೆಚ್ಚಿಬಿದ್ದ ಚೀನ ಸ್ತಬ್ಧ ; 13 ನಗರಗಳು ಸಂಪೂರ್ಣ ಲಾಕ್‌ಡೌನ್‌

06:30 PM Mar 20, 2020 | Hari Prasad |

ಬೀಜಿಂಗ್‌/ಹೊಸದಿಲ್ಲಿ: ಚೀನಗೆ ವಕ್ಕರಿಸಿಕೊಂಡಿರುವ ಡೆಡ್ಲಿ ಕೊರೊನಾವೈರಸ್‌ ದಿನಕಳೆದಂತೆ ಭೀತಿ ಹೆಚ್ಚಿಸುತ್ತಿದ್ದು, ಇಲ್ಲಿನ 13 ನಗರಗಳು ಅಕ್ಷರಶಃ ಲಾಕ್‌ ಡೌನ್‌ ಆಗಿವೆ. ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮತ್ತೆ 4 ನಗರಗಳಲ್ಲಿ ಸಂಚಾರ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿದೆ. ಹೀಗಾಗಿ 4.10 ಕೋ. ಮಂದಿಯ ಜೀವನ ಅಸ್ತವ್ಯಸ್ತವಾಗಿದೆ.

Advertisement

ಸಂಚಾರ ನಿರ್ಬಂಧ ಹೇರಿರುವ ಕಾರಣ ಜನರು ಮನೆಗಳಿಂದ ಹೊರಬರುತ್ತಿಲ್ಲ. ಔಷಧ ಅಂಗಡಿಗಳು ಹೊರತುಪಡಿಸಿ ಬೇರೆ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆದಿಲ್ಲ. ಸಾರ್ವಜನಿಕ ಸಮಾರಂಭಗಳು, ಕೌಟುಂಬಿಕ ಕಾರ್ಯಕ್ರಮಗಳನ್ನೂ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ.

ಚೀನದ ಮಹಾಗೋಡೆಯ ಒಂದು ಭಾಗದ ವೀಕ್ಷಣೆಗೆ ಅವಕಾಶ ನಿರಾಕರಿಸಲಾಗಿದ್ದು, ಪ್ರವಾಸಿ ಗರ ಆಗಮನಕ್ಕೆ ಕಡಿವಾಣ ಹಾಕಲಾಗಿದೆ. ಚೀನದಲ್ಲಿ ಈ ವೈರಸ್‌ಗೆ ಬಲಿಯಾದವರ ಸಂಖ್ಯೆ ಶುಕ್ರವಾರ 26ಕ್ಕೇರಿಕೆಯಾಗಿದೆ. ಒಟ್ಟಾರೆ 830 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇನ್ನೂ 1,072 ಮಂದಿಗೆ ರೋಗ ಲಕ್ಷಣ ಕಂಡುಬಂದಿದೆ.

ಕಾರ್ಯಕ್ರಮ ರದ್ದು: ವೈರಸ್‌ ಭೀತಿ ಹಿನ್ನೆಲೆಯಲ್ಲಿ ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಗಣರಾಜ್ಯ ದಿನದ ಕಾರ್ಯಕ್ರಮವನ್ನು ರದ್ದು ಮಾಡಿದೆ.

ಮುಂಬಯಿನಲ್ಲಿ ಇಬ್ಬರ ಮೇಲೆ ನಿಗಾ: ಇದೇ ವೇಳೆ, ಚೀನದಿಂದ ಮುಂಬಯಿಗೆ ಆಗಮಿಸಿರುವ ಇಬ್ಬರನ್ನು ಮುಂಜಾಗ್ರತಾ ಕ್ರಮವಾಗಿ ಕಸ್ತೂರ್‌ ಬಾ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿಟ್ಟು ಅವರ ಮೇಲೆ ನಿಗಾ ವಹಿಸಲಾಗಿದೆ. ಭಾರತದಲ್ಲಿ ಈವರೆಗೆ ಯಾವುದೇ ಕೊರೊನಾವೈರಸ್‌ ಪ್ರಕರಣ ಪತ್ತೆಯಾಗಿಲ್ಲ. ದಿಲ್ಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ ಸಿದ್ಧಪಡಿಸಿ ಇಟ್ಟು ಕೊಳ್ಳಲಾಗಿದೆ.

Advertisement

ಜಾಗತಿಕ ತುರ್ತು ಪರಿಸ್ಥಿತಿ ಇಲ್ಲ: ಕೆಲವು ದೇಶಗಳಲ್ಲಿ ಈ ಸೋಂಕು ಪತ್ತೆಯಾಗಿದ್ದರೂ, ಚೀನ ಕೈಗೊಂಡ ಕ್ರಮಗಳಿಂದಾಗಿ ಸೋಂಕು ತೀವ್ರಗತಿಯಲ್ಲಿ ವ್ಯಾಪಿಸುತ್ತಿಲ್ಲ. ಹೀಗಾಗಿ, ಸದ್ಯಕ್ಕೆ ಜಾಗತಿಕ ತುರ್ತು ಪರಿಸ್ಥಿತಿ ಘೋಷಿ ಸಬೇಕಾದ ಅಗತ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ತಿಳಿಸಿದೆ.

ಕೇರಳ ನರ್ಸ್‌ಗೆ ತಗುಲಿಲ್ಲ ಸೋಂಕು
ಸೌದಿ ಅರೇಬಿಯಾದ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕೇರಳದ ನರ್ಸ್‌ ಗೆ ಕೊರೊನಾವೈರಸ್‌ ಸೋಂಕು ತಗುಲಿಲ್ಲ ಎಂದು ಜೆಡ್ಡಾದಲ್ಲಿರುವ ಭಾರತೀಯ ಕಾನ್ಸುಲೇಟ್‌ ಜನರಲ್‌ ಸ್ಪಷ್ಟಪಡಿಸಿದ್ದಾರೆ.

ಅವರಲ್ಲಿ ಕಂಡುಬಂದಿರುವುದು ಕೊರೊನಾವೈರಸ್‌ ಸೋಂಕು ಅಲ್ಲ. ಈ ಬಗ್ಗೆ ಸುಳ್ಳು ಮಾಹಿತಿ ಹರಡದಿರಿ ಎಂದು ವೈಜ್ಞಾನಿಕ ಪ್ರಾದೇಶಿಕ ಸೋಂಕು ನಿಯಂತ್ರಣ ಸಮಿತಿ ಮುಖ್ಯಸ್ಥ ಡಾ| ತಾರಿಕ್‌ ಅಜ್ರಾಕಿ ಹೇಳಿದ್ದಾರೆ. ಗುರು ವಾರವಷ್ಟೇ ನರ್ಸ್‌ಗೆ ಸೋಂಕಿರುವುದು ದೃಢಪಟ್ಟಿದೆ ಎಂದು ಸುದ್ದಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next