Advertisement

IVF ಮೂಲಕ ಮಗು ಹೊಂದಲು ವಿಚ್ಛೇದಿತ ಏಕಾಂಗಿ ಮಹಿಳೆಗೆ ಚೀನಾ ಅವಕಾಶ

09:19 PM Apr 29, 2023 | Team Udayavani |

ಬೀಜಿಂಗ್‌: ದೇಶದಲ್ಲಿ ಯುವಕರ ಸಂಖ್ಯೆ, ಮಕ್ಕಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಚೀನಾ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ.

Advertisement

ಈ ಹಿಂದೆ, ವಿವಾಹಿತ ಮಹಿಳೆಯರಿಗೆ ಹೆರಿಗೆಗಾಗಿ ವೇತನ ಸಹಿತ ರಜೆಯ ಜತೆಗೆ ಮಗು ಭತ್ಯೆಯನ್ನು ನೀಡಲಾಗುತ್ತಿತ್ತು. ಫೆಬ್ರವರಿಯಿಂದ ಅವಿವಾಹಿತ ಮಹಿಳೆಯರಿಗೂ ಹೆರಿಗೆಗಾಗಿ ವೇತನ ಸಹಿತ ರಜೆ ಮತ್ತು ಭತ್ಯೆಗಳನ್ನು ನೀಡುತ್ತಿದೆ. ಪ್ರಸ್ತುತ ಈ ಕ್ರಮವನ್ನು ಸಿಚುವಾನ್‌ ಪ್ರಾಂತ್ಯದಲ್ಲಿ ಜಾರಿಗೊಳಿಸಿದ್ದು, ದೇಶದಲ್ಲೆಡೆ ಇದರ ಅನುಷ್ಠಾನಕ್ಕೆ ಚೀನಾ ಯೋಜಿಸುತ್ತಿದೆ.

ಇದೀಗ ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ಚೀನಾ ಸರ್ಕಾರ, ವಿಚ್ಛೇದನ ಪಡೆದ ಏಕಾಂಗಿ ಮಹಿಳೆಯು ಇನ್‌-ವಿಟ್ರೋ ಫ‌ಲವತ್ತತೆ(ಐವಿಎಫ್) ಚಿಕಿತ್ಸೆ ಮೂಲಕ ಮಗು ಹೊಂದಲು ಅವಕಾಶ ಕಲ್ಪಿಸಿದೆ.

ಚೆನ್‌ ಲುಯೋಜಿನ್‌ ಎಂಬ 33 ವರ್ಷದ ಮಹಿಳೆಯು ಪತಿಯಿಂದ ವಿಚ್ಛೇದನ ಪಡೆದಿದ್ದಾಳೆ. ಏಕಾಂಗಿಯಾಗಿ ನೆಲೆಸಿರುವ ಈಕೆಗೆ ಮಗು ಹೊಂದುವ ಬಯಕೆ. ಹಾಗಾಗಿ ಈಕೆ ಐವಿಎಫ್ ಚಿಕಿತ್ಸೆ ಮೂಲಕ ಗರ್ಭ ಧರಿಸಿದ್ದು, ಸದ್ಯ 10 ತಿಂಗಳ ಗರ್ಭಿಣಿಯಾಗಿದ್ದಾರೆ. ಲಾಜಿಸ್ಟಿಕ್ಸ್‌ ಕಂಪನಿಯಲ್ಲಿ ಕೆಲಸ ಮಾಡುವ ಈಕೆ, ಸದ್ಯ ಮಗು ಹೊಂದುವ ಖುಷಿಯಲ್ಲಿದ್ದಾರೆ.

ಇದೇ ರೀತಿ ಶಿಶು ಫ‌ಲವತ್ತತೆ ಪ್ರಮಾಣ ಏರಿಕೆ ಮಾಡಲು ಚೀನಾ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next