Advertisement
ಸೇನೆ ನಿಯಂತ್ರಣ ಪಿಎಪಿ ವ್ಯಾಪ್ತಿಗೆ: ಭಾರತದ ಜತೆಗೆ ಹೊಂದಿಕೊಂಡಿರುವ ಗಡಿ ಸೇರಿದಂತೆ ಎಲ್ಲಾ ಅಂತಾರಾಷ್ಟ್ರೀಯ ಗಡಿಗಳಲ್ಲಿ ನಿಯೋಜಿತವಾಗಿದ್ದ ನಾಗರಿಕರೇ ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರಾಂತೀಯ ಸೇನಾ ಸಿಬಂದಿಯನ್ನು ಪೀಪಲ್ಸ್ ಆರ್ಮ್ಸ್ ಪೊಲೀಸ್ ವ್ಯಾಪ್ತಿಗೆ ತರಲಾಗಿದೆ. ಈ ಮೂಲಕ ಆಡಳಿತ ಪಕ್ಷ ಕಮ್ಯೂನಿಸ್ಟ್ ಪಾರ್ಟಿ ಆಫ್ ಚೀನದ ನೇರ ನಿಯಂತ್ರಣದಲ್ಲಿ ಸೇನಾ ಪಡೆ ಇರುವಂತೆ ಮಾಡಲಾಗಿದೆ.
ರಾಜಸ್ಥಾನದ ಪೋಖ್ರಾನ್ ನಲ್ಲಿ ಗುರುವಾರ ಬೆಳಗ್ಗೆ 8:42ಕ್ಕೆ ನಡೆಸಲಾದ ‘ಬ್ರಹ್ಮೋಸ್’ ಕ್ಷಿಪಣಿ ಪರೀಕ್ಷೆಯು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ‘ಗುರುವಾರ ಬೆಳಗ್ಗೆ ನಡೆಸಲಾದ ಫ್ಲೈಟ್ ಟೆಸ್ಟ್‌ನಲ್ಲಿ ಕ್ಷಿಪಣಿ ತನ್ನ ಗುರಿಯನ್ನು ಕರಾರುವಾಕ್ ಆಗಿ ಮುಟ್ಟಿತು. ಕ್ಷಿಪಣಿಯ ಈ ಕಾರ್ಯಕ್ಷಮತೆ, ರಾಷ್ಟ್ರೀಯ ಭದ್ರತೆಯನ್ನು ಬಲವಾಗಿಸಿದೆ” ಎಂದು ತಿಳಿಸಿದ್ದಾರೆ. ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ರಷ್ಯಾದ ಎನ್‌ಪಿಒ ಮ್ಯಾಶಿನೋಸ್ಟ್ರೋಯೇನಿಯಾ (ಎನ್‌ಪಿಒಎಂ) ಸಹಭಾಗಿತ್ವದಲ್ಲಿ ನಿರ್ಮಿಸಲಾಗಿರುವ ಬ್ರಹ್ಮೋಸ್ ಕ್ಷಿಪಣಿಯು ಕಳೆದ ವರ್ಷ ನಿರೀಕ್ಷೆ ಯಂತೆ 400 ಕಿ.ಮೀ. ದೂರವನ್ನು ಮುಟ್ಟಿತ್ತು. ಆ ಮೂಲಕ, ಭಾರತವು ಮಿಸೈಲ್ ಟೆಕ್ನಾಲಜಿ ಕಂಟ್ರೋಲ್ ರೆಜಿಮ್ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಂತಾಗಿತ್ತು. ಭಾರತಕ್ಕೆ ಈ ಅವಕಾಶ ತಂದುಕೊಟ್ಟ ಹೆಗ್ಗಳಿಕೆ ‘ಬ್ರಹ್ಮೋಸ್’ ನದ್ದು.