Advertisement

ಸಿಎಂ ಭೇಟಿಗೆ ಮಕ್ಕಳ ಪಾದಯಾತ್ರೆ ತಯಾರಿ

03:06 PM Sep 15, 2022 | Team Udayavani |

ಅಫಜಲಪುರ: ಸೋರುವ ಮೇಲ್ಛಾವಣಿ, ಕುಸಿದು ಬೀಳುವಂತಿರುವ ಗೋಡೆ, ಮೈದಾನವೇ ಇಲ್ಲದ ಶಾಲೆ, ಕಲುಷಿತ ವಾತಾವರಣದಲ್ಲೇ ನಿತ್ಯ ಪಾಠ ಇದನ್ನು ಸರಿಪಡಿಸುವಂತೆ ಸಂಬಂಧಪಟ್ಟವರಿಗೆ ಸಾಕಷ್ಟು ಸಾರಿ ಹೇಳಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಕಲಬುರಗಿಗೆ ಬರುವ ದಿನ ಪಾದಯಾತ್ರೆ ಮೂಲಕ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಹೊರಟಿದ್ದೇವೆ ಎಂದು ಘತ್ತರಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು, ಪಾಲಕರು, ಜನಪ್ರತಿನಿಧಿಗಳು ತಿಳಿಸಿದ್ದಾರೆ. ಈ ಕುರಿತಂತೆ ನಡೆದ ಪೂರ್ವಭಾವಿ ಸಭೆಯಲ್ಲಿ ಪಾದಯಾತ್ರೆ ಕುರಿತು ನಿರ್ಧಾರ ಕೈಗೊಳ್ಳಲಾಯಿತು.

Advertisement

ಸಭೆಯಲ್ಲಿ ಈ ಶಾಲೆ ಮುಜರಾಯಿ ಇಲಾಖೆ ಜಾಗದಲ್ಲಿದೆ. ಹೀಗಾಗಿ ಇಲ್ಲಿ ಯಾವುದೇ ಅಭಿವೃದ್ದಿ ಕೆಲಸ ಮಾಡಲು ಶಿಕ್ಷಣ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಮುಜರಾಯಿ ಇಲಾಖೆ ಶಾಲೆಗೆ ತಾತ್ಕಾಲಿಕವಾಗಿ ಜಾಗ ಕೊಟ್ಟಿದೆಯೇ ಹೊರತು, ಶಾಶ್ವತವಾಗಿ ಬಿಟ್ಟು ಕೊಡಲು ಒಪ್ಪುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ನಿತ್ಯ ನರಕ ದರ್ಶನವಾಗುತ್ತಿದೆ. ಮಳೆ ಬಂದರೆ ಶಾಲೆಯ ಎಲ್ಲ ಕೊಣೆಗಳು ಸೋರುತ್ತವೆ. ಈ ಕುರಿತಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಹಶೀಲ್ದಾರ್‌, ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿ, ಶಿಕ್ಷಣ ಇಲಾಖೆ ಸೇರಿದಂತೆ ಉನ್ನತ ಅಧಿಕಾರಿಗಳಿಗೆಲ್ಲ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಕಲಬುರಗಿಗೆ ಪಾದಯಾತ್ರೆ ಮುಖಾಂತರ ತೆರಳಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.

ಪ್ರಮುಖರಾದ ವಿಠ್ಠಲ ಇಸ್ಪೂರ್‌, ಸಾವಿತ್ರಿ ಭಟ್ಟರಕಿ, ಸುನಂದಾ ಪರಮೇಶ್ವರ, ಜಯಶ್ರೀ ದೊಡ್ಮನಿ, ನೀಲಮ್ಮ ಪಾಟೀಲ, ಸಕ್ಕುಬಾಯಿ, ಎಸ್‌ಡಿಎಂಸಿ ಅದ್ಯಕ್ಷ ಪರಶುರಾಮ ಭಜಂತ್ರಿ, ಬಾಬು ಪಟೇಲ ಹಾಗೂ ಇನ್ನಿತರರು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next