Advertisement

ಮಕ್ಕಳಿಗೆ ಉರಗ ಪಾಠ

03:49 PM May 19, 2018 | |

ಬೆಂಗಳೂರಿನಲ್ಲಿ ಅನೇಕ ಮಕ್ಕಳು ಸರೀಸೃಪಗಳನ್ನು ಕಣ್ಣಾರೆ ನೋಡಿಯೇ ಇರುವುದಿಲ್ಲ. ಉದ್ದಾನುದ್ದ ಕಟ್ಟಡ, ಕಾಂಕ್ರೀಟನ್ನೇ ಮೈತುಂಬಾ ಮೆತ್ತಿಕೊಂಡ ಈ ಮಹಾನಗರಿಯಲ್ಲಿ ಆಮೆ, ಹಾವು, ಹಾವುರಾಣಿ, ಹಲ್ಲಿ ಎನ್ನುವ ಜೀವಿಗಳೂ ಬಹಳ ಅಪರೂಪವೇ. ಹಾಗಾಗಿ, ಇಲ್ಲಿನವರು ಯೂಟ್ಯೂಬ್‌ನಲ್ಲೋ, ಡಿಸ್ಕವರಿ ಚಾನೆಲ್‌ನಲ್ಲೋ ಸರೀಸೃಪಗಳನ್ನು ನೋಡಿ, “ವ್ಹಾವ್‌, ಅಮೇಜಿಂಗ್‌’ ಎಂದಿರುತ್ತಾರೆ. ಅಕಸ್ಮಾತ್‌ ಇದೇ ಮಕ್ಕಳು ರಜೆಯಲ್ಲಿ ಯಾವುದಾದರೂ ಹಳ್ಳಿಗೆ ಹೋದಾಗ, ಅಲ್ಲೇನಾದರೂ ಸರೀಸೃಪ ಕಂಡರೆ ಅವುಗಳ ಜತೆ ಹೇಗೆ ವರ್ತಿಸುತ್ತಾರೆ? ಕೆಲವರು ಹೆದರಿ ಸುಮ್ಮನೆ ಕೂರಬಹುದು, ಮತ್ತೆ ಕೆಲವರು ಡಿಸ್ಕವರಿಯಲ್ಲಿ ತೋರಿಸುವ ಹಾಗೆ ಅವುಗಳ ಜತೆಗೆ ಆಟಕ್ಕೆ ಇಳಿಯಬಹುದು.

Advertisement

ರಾಜಧಾನಿಯ ಮಕ್ಕಳ ಈ ಕುತೂಹಲವನ್ನೇ ಕೇಂದ್ರವಾಗಿಟ್ಟುಕೊಂಡು ಉರಗ ತಜ್ಞ ಗೌರಿಶಂಕರ್‌ ಸರೀಸೃಪಗಳ ಕುರಿತು ಅರಿವು ಕಾರ್ಯಾಗಾರ ಹಮ್ಮಿಕೊಂಡಿದ್ದಾರೆ. ಕಾಳಿಂಗ ಸೆಂಟರ್‌ ಫಾರ್‌ ರೇನ್‌ ಫಾರೆಸ್ಟ್‌ ಎಕಾಲಜಿ ವತಿಯಿಂದ ಸರೀಸೃಪಗಳ ವೈಜ್ಞಾನಿಕ ನಿರ್ವಹಣೆ ಮತ್ತು ತರಬೇತಿ ಕಾರ್ಯ ಕ್ರಮವನ್ನು ಏರ್ಪಡಿಸಲಾಗಿದೆ. ಅಂದಹಾಗೆ, ಈ ಕಾರ್ಯಕ್ರಮದ ಹೆಸರು “ಸ್ಟಾರ್ಮ್ ಜ್ಯೂನಿಯರ್‌’. ಇಷ್ಟು ವರ್ಷ ಚೆನ್ನೈನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ, ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜನೆಗೊಂಡಿದೆ. 

ಯಾರಿಗೆ ಅವಕಾಶ?: 10- 17 ವರ್ಷದಮಕ್ಕಳಿಗೆ ಮಾತ್ರ
ಎಲ್ಲಿ?: ಪ್ರಾಣಿ ಪೆಟ್‌ ಸ್ಯಾಂಕುcರಿ, ಸೋಮನಹಳ್ಳಿ,ಸುಂಕದಕಟ್ಟೆ ಸಮೀಪ
ಯಾವಾಗ?: ಮೇ 22, ಮಂಗಳವಾರ
 ಸಂಪರ್ಕ: 09480877670

Advertisement

Udayavani is now on Telegram. Click here to join our channel and stay updated with the latest news.

Next