Advertisement

ಮಕ್ಕಳ ಜೀವ ಮುಖ್ಯ, ಶಾಲೆ ತೆರೆಯಲು ಅವಸರ ಬೇಡವೆಂದು ಏಮ್ಸ್ ಮುಖ್ಯಸ್ಥರಿಂದ ಸೂಚನೆ: ಸುಧಾಕರ್

12:54 PM Jun 28, 2021 | Team Udayavani |

ಬೆಂಗಳೂರು: ಶಾಲೆ ಆರಂಭ ವಿಚಾರವಾಗಿ ಇಲಾಖೆ ಅಧಿಕಾರಿಗಳ ಜೊತೆ ಇನ್ನೂ ಮಾತನಾಡಿಲ್ಲ. ನಮಗೆ ಮಕ್ಕಳ ಜೀವ ಮುಖ್ಯ ಎಂದು ಸದ್ಯ ಶಾಲಾರಂಭಕ್ಕೆ ಸಚಿವ ಡಾ. ಸುಧಾಕರ್‌ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 24,37,732 ಜನ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿದ್ದಾರೆ. ಇಂದಿನಿಂದ ಲಸಿಕೆ ನೀಡುತ್ತಿದ್ದೇವೆ. ಹತ್ತು ವರ್ಷದೊಳಗಿನ ಮಕ್ಕಳಿಗೂ ಲಸಿಕೆ ನೀಡಲು ಚಿಂತನೆ ನಡೆಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಲಸಿಕೆ ಪ್ರಮಾಣ ಕಡಿಮೆ ಇದೆ. ಇನ್ನೆರಡು ದಿನದಲ್ಲಿ ದೆಹಲಿಗೆ ಭೇಟಿ ನೀಡಲಿದ್ದೇನೆ. ಅಲ್ಲಿ ಲಸಿಕೆ ಪ್ರಮಾಣ ಹೆಚ್ಚಿಸುವಂತೆ ಮಾತನಾಡುತ್ತೇನೆ. ಲಸಿಕೆ ನೀಡಿದ ಬಳಿಕ ಕಾಲೇಜು ಆರಂಭಿಸುತ್ತೇವೆ ಎಂದರು.

ಶಾಲೆ ಆರಂಭಕ್ಕೆ ಬಹಳ ಎಚ್ಚರಿಕೆ ವಹಿಸಬೇಕು. ಏಮ್ಸ್ ಮುಖ್ಯಸ್ಥರು ಪತ್ರ ಬರೆದಿದ್ದಾರೆ. ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆ ಮಾಡಿ. ಶಾಲೆ ತೆರೆಯಲು ಅವಸರ ಬೇಡ ಎಂದು ಸೂಚಿಸಿದ್ದಾರೆ. ಅನ್ ಲಾಕ್ ಮಾಡಿರುವ ಅವಧಿ ಜುಲೈ 5 ರವರೆಗೂ ಇದೆ. ಮಹಾರಾಷ್ಟ್ರದಲ್ಲಿ ಬಹಳ ಹೆಚ್ಚು ಸೋಂಕಿದೆ. ಇದೆಲ್ಲವನ್ನೂ ಗಮನಿಸಬೇಕಿದೆ ಎಂದು ಆರೋಗ್ಯ ಸಚಿವರು ಹೇಳಿದರು.

ಇದನ್ನೂ ಓದಿ:ಗಂಡನಿಂದ ದೂರವಾಗಿ ರಸ್ತೆಬದಿ ಲಿಂಬೆ ಪಾನಕ ಮಾರುತ್ತಿದ್ದ ಯುವತಿ ಈಗ ಪೊಲೀಸ್ ಇನ್ಸ್ ಪೆಕ್ಟರ್

Advertisement

ಮದುವೆಗೆ ಚೌಟ್ರಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಜನರ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಕೆಲವೆಡೆ ನಿಯಮ ಮೀರಿ ಜನ ಸೇರುತ್ತಿದ್ದಾರೆ. ಅಂತಹ ಕಡೆಯಲ್ಲಿ ಜಿಲ್ಲಾಧಿಕಾರಿ ಮತ್ತು ಎಸ್ ಪಿ ಅವರೇ ಹೊಣೆಯಾಗಲಿದ್ದಾರೆ. ಇವರು ತಮ್ಮ ಜವಾಬ್ದಾರಿ ತೆಗೆದುಕೊಳ್ಳಬೇಕು. ನಾನು ಬಹಳ ಸ್ಪಷ್ಟವಾಗಿ ಹೇಳ್ತೇನೆ. ಡಿಸಿ, ಎಸ್ಪಿಗಳು ತಮ್ಮ ಕೆಲಸ ಮಾಡಬೇಕು. ಈ ಬಗ್ಗೆ ಗೃಹ ಸಚಿವರ ಜೊತೆ ಮಾತನಾಡುತ್ತೇನೆ. ಎಲ್ಲಿ 40 ಜನ ಮೀರಿ ಹೋಟೆಲ್, ರೆಸ್ಟೋರೆಂಟ್ ನಲ್ಲಿ ಜನ ಸೇರುತ್ತಾರೋ ಅಲ್ಲಿ ದುಪ್ಪಟ್ಟು ಪೆನಾಲ್ಟಿ ಹಾಕಲು ಸೂಚಿಸುತ್ತೇನೆ ಎಂದರು.

ಬ್ಲಾಕ್ ಫಂಗಸ್ ವಿಚಾರವಾಗಿ ಮಾತನಾಡಿದ ಅವರು, ಅದು ವಾಸಿಯಾಗಲು ಸಮಯ ಬೇಕು. ಕನಿಷ್ಠ ಮೂರು ತಿಂಗಳು ಅವಧಿ ಬೇಕಾಗಲಿದೆ. ಲಸಿಕೆ ಕೊರತೆ ಇಲ್ಲ. ಆದರೆ ಹಂತ ಹಂತವಾಗಿ ನೀಡುತ್ತಾ ಬರುತ್ತೇವೆ ಎಂದು ಸುಧಾಕರ್ ಹೇಳದರು.

Advertisement

Udayavani is now on Telegram. Click here to join our channel and stay updated with the latest news.

Next