ಪದ್ಧತಿ ಹಳೆಯದಾಯಿತು. ಇಲ್ಲಿರೋದು ಯಾವ್ಯಾವ ತಿಂಗಳಲ್ಲಿ ಹುಟ್ಟಿದ ಮಗುವಿನ ವರ್ತನೆ
ಹೇಗಿರುತ್ತೆ ಎಂಬ ವಿವರಣೆ. ನಿಮ್ಮ ಮಗು ಕೂಡ ಇಲ್ಲಿರುವ ವಿವರಣೆಯ ಗುಣ ಹೊಂದಿರಬಹುದು;
ಸುಮ್ನೆ ಗಮನಿಸಿ
Advertisement
ಸೆಪ್ಟೆಂಬರ್ಸೆಪ್ಟೆಂಬರ್ನಲ್ಲಿ ಹುಟ್ಟಿದ ಮಕ್ಕಳಿಗೆ ಭಂಡ ಧೈರ್ಯ ಜಾಸ್ತಿ. ಭಯ ಆಗ್ತಿರುತ್ತೆ. ಆದ್ರೆ ತೋರಿಸಿಕೊಳ್ಳಲ್ಲ. ಪ್ರೈವೇಸಿ ಈ ಮಕ್ಕಳಿಗಿಷ್ಟ. ತಮ್ಮ ಪಾಡಿಗೆ ತಾವು ಓದ್ತಾ, ಹೋಂವರ್ಕ್ ಮಾಡ್ತಾ ಇ¨ªಾಗ ಅಪ್ಪನೋ ಅಮ್ಮನೋ ಮಧ್ಯೆ ಪ್ರವೇಶಿಸಿದರೆ ಕೂತಲ್ಲೇ ಸಿಡಿಸಿಡಿ ಅಂದುಬಿಡ್ತವೆ. ಅನಿಸಿದ್ದನ್ನು ಮುಖಕ್ಕೆ ಹೊಡೆದಂತೆ ಹೇಳಿಬಿಡುವುದು; ಇನ್ನೊಬ್ಬರ ತಪ್ಪನ್ನು ಎತ್ತಿ ತೋರಿಸುವುದು ಈ ತಿಂಗಳಲ್ಲಿ ಹುಟ್ಟಿದ ಮಕ್ಕಳ ಗುಣ ವಿಶೇಷ. ತುಂಬ ಪ್ರಾಮಾಣಿಕವಾಗಿರ್ತವೆ. ಅದನ್ನೇ ಉಳಿದವರಿಂದ ಕೂಡ ಬಯಸುತ್ತವೆ. ಈ ಕಾರಣದಿಂದಲೇ ಜತೆಗಿದ್ದವರೊಂದಿಗೆ ಮೇಲಿಂದ ಮೇಲೆ ಜಗಳ ಆಡ್ತಾ ಇರ್ತವೆ. ಆದರೆ, ಈ ಮಕ್ಕಳ ಉದಾರಮನೋಭಾವ, ಪ್ರಾಮಾಣಿಕತೆಯೇ ಅವರನ್ನು ಗುಂಪಿನಲ್ಲಿ ದೊಡ್ಡವರನ್ನಾಗಿ ಮಾಡುತ್ತೆ.
ತನ್ನದೇ ವಾರಿಗೆಯ ಒಂದು ಹಿಂಡು ಮಕ್ಕಳೊಂದಿಗೆ ಸುತ್ತುವುದು, ಅವರನ್ನೆಲ್ಲ ಮನೆಗೆ ಕರೆತರುವುದು ಅಕ್ಟೋಬರ್ ತಿಂಗಳಲ್ಲಿ ಹುಟ್ಟಿದ ಮಕ್ಕಳ ಸ್ಪೆಷಾಲಿಟಿ. ಅಪ್ಪ ಅಥವಾ ಅಮ್ಮ-ಇಬ್ಬರಲ್ಲಿ ಒಬ್ಬರನ್ನು ವಿಪರೀತ ಹಚ್ಚಿಕೊಂಡಿರ್ತವೆ. ದೊಡ್ಡವರು ಗದರಿಸಿದ್ರೆ ಕೇರೇ ಮಾಡಲ್ಲ. ಒಂದೊಂದ್ಸಲ ಅವರನ್ನೇ ಗುರಾಯಿಸಿಕೊಂಡು ನೋಡ್ತವೆ. ಈ ಕಂದಮ್ಮಗಳಿಗೆ ಎರಡೇ ನಿಮಿಷಕ್ಕೆ ಸಿಟ್ಟು ಬರುತ್ತೆ. ಆಗ ಕೈಗೆ ಏನು ಸಿಕ್ಕುತ್ತೋ ಅದನ್ನ ಎಸೆದು ಕೋಪದ ಪರಿಚಯ ಮಾಡಿಕೊಡ್ತವೆ. ಓದಪ್ಪಾ ಅಂತ ಕೂರಿಸಿದ್ರೆ ಚಿತ್ರ ನೋಡೋಕೆ ಶುರು ಮಾಡ್ತವೆ. ಬರೆಯೋ ಅಂದ್ರೆ- ಕುಂಬಳಕಾಯಿ ಸುತ್ತುತ್ತವೆ. ಓದಿಗಿಂತ ಬೇರೆ ಚಟುವಟಿಕೇಲಿ ಆಸಕ್ತಿ ಜಾಸ್ತಿ. ಅದೇ ಕಾರಣಕ್ಕೆ ಮುಂದೆ ಅದೇನಾಗ್ತಾನೋ/ಳ್ಳೋ ಗೊತ್ತಿಲ್ಲ ಎಂದು ಅಪ್ಪ- ಅಮ್ಮ; ಬಂಧುಗಳೆಲ್ಲ ಚಿಂತೆಯಿಂದ ಹೇಳ್ತಾನೇ ಇರ್ತಾರೆ.ಬೀದಿ ತುಂಬಾ ಫ್ರೆಂಡ್ಸ್ ಮಾಡಿಕೊಂಡಿರ್ತವೆ. ಸಿಟ್ಟು ಬಂದಾಗ; ಖುಷಿಯಾದಾಗ ಎದುರಿಗೆ ಇರೋರನ್ನ ಕೇರ್ ಮಾಡದೆ ತಮಗೆ ಅನಿಸಿದ್ದು ಹೇಳಿಬಿಡ್ತವೆ. ನವೆಂಬರ್
ಈ ಮಕ್ಕಳದು ಎಲ್ಲವೂ ಅತೀ. ಅದೇ ಕಾರಣದಿಂದ ಸ್ವಲ್ಪ ಮಟ್ಟಿಗೆ ಇವು ಡೇಂಜರಸ…
ಕಂದಮ್ಮಗಳು. ಇಷ್ಟಾದರೂ, ಈ ಮಕ್ಕಳು ಗಲಾಟೆ, ಗಿಜಿಗಿಜಿ ಗದ್ದಲದಿಂದ ಮಾರು ದೂರ.
ಹತ್ತು ಜನರ ಜತೆ ಸೇರಿ ಕೆಲಸ ಮಾಡೋದ್ರಲ್ಲ ಇವಕ್ಕೆ ನಂಬಿಕೆಯಿಲ್ಲ. ಹಾಗಾಗಿ ಎಲ್ಲವನ್ನೂ ನಾನೇ ಮಾಡ್ತೀನಿ ಅಂತ ನಿಂತು ಬಿಡ್ತವೆ. ಜತೆಗಿದ್ದವರಿಗೆ ಹೇಗೆ ಪ್ಲೀಸ್ ಮಾಡಬೇಕು, ಅವರನ್ನು ಹೇಗೆ ಆಟ ಆಡಿಸಬೇಕು, ಹೇಗೆ ನಗಿಸಬೇಕು ಅನ್ನೋದೆಲ್ಲ ಈ ಮಕ್ಕಳಿಗೆ ತುಂಬಾ ಚೆನ್ನಾಗಿ ಗೊತ್ತಿರುತ್ತೆ. ಕೆಲವೊಂದು ವಿಷಯವನ್ನು ಚಿಕ್ಕವಯಸ್ಸಲ್ಲೇ ಗುಟ್ಟಾಗಿ ಇಟ್ಟುಕೊಳ್ಳುವುದು ಈ ಮಕ್ಕಳ ಸ್ವಭಾವ. ಏನೇ ಗದರಿಸಿ ಕೇಳಿದರೂ ತುಟಿ ಬಿಚ್ಚೋದಿಲ್ಲ. ಅಯ್ಯೋ, ಏನೂ ಇಲ್ಲ ಎಂದು ತೇಲಿಸಿ ಮಾತಾಡಿ ಎಲ್ಲರನ್ನೂ ಪಿಗ್ಗಿ ಬೀಳಿಸಿಬಿಡುತ್ತವೆ. ಯಾರನ್ನೂ ವಂಚಿಸದಿರುವುದು ನವೆಂಬರ ತಿಂಗಳಲ್ಲಿ ಹುಟ್ಟುವ ಮಕ್ಕಳ
ಹೆಚ್ಚುಗಾರಿಕೆ.
Related Articles
ಈ ತಿಂಗಳಲ್ಲಿ ಹುಟ್ಟಿದ ಮಕ್ಕಳಲ್ಲಿ ಹೆಚ್ಚಿನವು- ಮೊಂಡುವಾದ ಹೂಡುತ್ತವೆ.
ಮಾತು ಮಾತಿಗೂ ಪ್ರಾಮಿಸ… ಮಾಡುತ್ತವೆ. ನಾನು ಹೇಳಿದ್ದೇ ಸರಿ ಎಂದು ಹಟ ಹಿಡೀತವೆ.
ಪ್ರತಿಯೊಂದು ವಿಷಯದಲ್ಲೂ ನಾನು ಎಲ್ಲರಿಗಿಂತ ಮುಂದಿರಬೇಕು ಅಂತ ಆಸೆ ಪಡ್ತವೆ. ಸ್ವಲ್ಪ
ಜಾಸ್ತಿ ಅನ್ನುವಷ್ಟು ಹೊಟ್ಟೆಕಿಚ್ಚು ಹೊಂದಿರ್ತವೆ. ಪಾಠದಲ್ಲಿ ಹಿಂದಿರಬಹುದು; ಆದರೆ
ಆಟ ಅಂದಾಕ್ಷ$ಣ ಜಿಂಕೆಮರಿಯ ಥರಾ ಆಕ್ಟೀವ್ ಆಗಿರ್ತವೆ. ಈ ಮಕ್ಕಳ ಮಾತು, ಸಮಸ್ಯೆ,
ಬುದ್ಧಿವಾದವನ್ನು ಕೇಳ್ಳೋದು ಸುಲಭ. ಆದರೆ ಅರ್ಥಮಾಡಿಕೊಳ್ಳೋದು ಕಷ್ಟ. ಎಲ್ಲರ ಜತೆಗೆ
ವಾದ ಮಾಡ್ತವಲ್ಲ; ಹಾಗಾಗಿ ಫ್ರೆಂಡ್ಸ್ ಕೂಡ ಬದಲಾಗ್ತಾ ಹೋಗ್ತಾರೆ. ತುಂಬಾ ಭಾವುಕವಾಗಿ
ಯೋಚಿಸೋದು; ಜೋರಾಗಿ ಅಳ್ಳೋದು ಅಪರೂಪ. ಆದರೆ, ಯಾವಾಗಾದ್ರೂ ಡಿಪ್ರಷನೆY ಈಡಾದರೆ
ಅದರಿಂದ ಚೇತರಿಸಿಕೊಳ್ಳಲಿಕ್ಕೆ ತುಂಬಾ ಟೈಮ… ತಗೊಳ್ತವೆ. ಯಾವುದೇ ಕೆಲಸ ಮಾಡಿದ್ರೂ
ಅದೆಲ್ಲಾ ಒಂಥರಾ ಜೋರಾಗೇ ಇರಬೇಕು ಅಂತ ಆಸೆ ಪಡ್ತವೆ.
Advertisement