Advertisement

ಜಾಂಬ್ರಿಗುಹೆ ವಠಾರದಲ್ಲಿ ಮಕ್ಕಳ ಕಲರವ

10:27 PM Oct 30, 2019 | mahesh |

ಪಾಣಾಜೆ: ಆರ್ಲಪದವು ಚೆಂಡೆತ್ತಡ್ಕದ ಜಾಂಬ್ರಿ ಗುಹೆಯನ್ನು ವೀಕ್ಷಿಸಿದ ಸಾಂದೀಪನಿ ವಿದ್ಯಾಸಂಸ್ಥೆಯ ವಸತಿ ನಿಲಯದ ವಿದ್ಯಾರ್ಥಿಗಳು, ಮಾಹಿತಿ ಪಡೆದುಕೊಂಡರು. ಮುಖ್ಯ ಶಿಕ್ಷಕಿ ಜಯಮಾಲಾ ವಿ.ಎನ್‌. ಅವರ ನೇತೃತ್ವದಲ್ಲಿ ನಿಲಯ “ಮಕ್ಕಳ ನಲಿವು’ ವಿನೂತನ ಕಾರ್ಯಕ್ರಮ ನಡೆಯಿತು. ವಸತಿ ನಿಲಯದ ಸುಮಾರು 250 ವಿದ್ಯಾರ್ಥಿಗಳು ಹಾಗೂ 10 ಶಿಕ್ಷಕರನ್ನು ಒಳಗೊಂಡ ತಂಡ ಬೆಳಗ್ಗೆ ಆರ್ಲಪದವಿನಿಂದ ಕಾಲ್ನಡಿಗೆಯಲ್ಲಿ ಹೊರಟು ಬೇರಿಕೆ, ಗೋಳಿತ್ತಡಿ, ದೇವಸ್ಯ, ಗಿಳಿಯಾಲು ಮಾರ್ಗ ವಾಗಿ ಜಾಂಬ್ರಿಗುಹೆಗೆ ತಲುಪಿತು.

Advertisement

ಪಾಣಾಜೆ ಸುಬೋಧ ವಿದ್ಯಾ ಸಂಸ್ಥೆಯ ಸಂಚಾಲಕ ಮಹಾಬಲೇಶ್ವರ ಭಟ್‌ ಗಿಳಿಯಾಲು ಅವರು ಜಾಂಬ್ರಿ ಗುಹೆ, ಕಳೆಂಜನ ಗುಂಡಿ ಹಾಗೂ ಪರಿಸರದ ಹಿನ್ನೆಲೆ, ಕಾರಣಿಕದ ಬಗ್ಗೆ ಮಾಹಿತಿ ನೀಡಿದರು. ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ರವೀಂದ್ರ ಭಂಡಾರಿ ಬೈಂಕ್ರೋಡ್‌, ಬಿ.ಬಿ. ಕ್ರಿಯೇಷನ್‌ನ ಹರೀಶ್‌ ಕಡಮಾಜೆ ಉಪಸ್ಥಿತರಿದ್ದರು.

ಮನೋರಂಜನ ಆಟಗಳು
ಮಕ್ಕಳಿಗೆ ನಿಧಿ ಶೋಧ, ಮಾಹಿತಿ ಕಲೆ ಹಾಕುವುದು, ಹಗ್ಗ ಜಗ್ಗಾಟ, ರಸಪ್ರಶ್ನೆ ಮುಂತಾದ ಅನೇಕ ಮನೋರಂಜನ ಆಟಗಳನ್ನು ಹಮ್ಮಿಗೊಂಡು ವಿಜೇತರಿಗೆ ಬಹುಮಾನ ನೀಡಲಾಯಿತು. ನಿಸರ್ಗದಲ್ಲಿನ ಮಕ್ಕಳ ಆಟವನ್ನು ಸ್ಥಳೀಯ ಕಲಾಕೃತಿ ರಚನೆಕಾರ ಯೋಗೀಶ್‌ ಕಡಂದೇಲು ಅವರು ಚಿತ್ರಿಸಿ ಪ್ರಶಂಸೆಗೆ ಪಾತ್ರರಾದರು.

ಸದಾಶಿವ ರೈ ಸೂರಂಬೈಲು, ಕಲ್ಲಡ್ಕ ಶ್ರೀರಾಮ ವಿದ್ಯಾಸಂಸ್ಥೆಯ ಶಿಕ್ಷಕ ಮನೋಜ್‌,ನಾರಾಯಣ ನಾಯಕ್‌ ಅಪಿನಿಮೂಲೆ, ಪ್ರೇಮ್‌ ರಾಜ್‌ ಆರ್ಲ ಪದವು, ಅರುಣ್‌ ರೈ, ಸಾಂದೀಪನಿ ಶಾಲೆಯ ಶಿಕ್ಷಕರಾದ ರಮೇಶ್‌, ಮುರಳೀಕೃಷ್ಣ, ಹರೀಶ್‌, ಕಿಶನ್‌, ಪ್ರಸಾದ್‌ ಈಶ್ವರಮಂಗಲ, ಪ್ರಸಾದ್‌, ಮನೀಶಾ, ಶಶ್ಮಿತಾ, ಯಶಸ್ವಿನಿ, ಶ್ವೇತಾ, ಹರ್ಷಿತಾ, ಹಿರಿಯ ವಿದ್ಯಾರ್ಥಿ ಅನಿರುದ್ಧ ಎಸ್‌.ಪಿ., ಸಿಬಂದಿ ಪ್ರವೀಣ್‌, ಸುರೇಶ್‌, ಶಶಿಧರ್‌ ಉಪಸ್ಥಿತರಿದ್ದರು.

ಪ್ರಕೃತಿ ಮಡಿಲಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾಶ್ರೀ ಫ್ರೆಂಡ್ಸ್‌ ಚಾರಿಟೆಬಲ್‌ ಟ್ರಸ್ಟ್‌ನ ಅಧ್ಯಕ್ಷ ಚಂದ್ರ ಎ.ಬಿ., ಸಂತೋಷ್‌ ರೈ ಕೋಟೆ, ದಿನೇಶ್‌ ಯಾದವ್‌ ಆರ್ಲಪದವು, ಕಾರ್ತಿಕ್‌ ಎಡನೀರು, ಶ್ರೀಹರಿ ಜಿ.ಕೆ., ಪ್ರಕಾಶ್‌ ಕುಲಾಲ್‌, ಧನಂಜಯ ಆರ್ಲಪದವು, ರಜನೀಶ್‌ ದೇವಸ್ಯ, ಮಹೇಶ್‌ ಸಾಮೆಕೊಚ್ಚಿ, ಚಿದಾನಂದ ಆರ್ಲಪದವು, ಕಾರ್ತಿಕ್‌ ಡಿ.ಜಿ., ಶಿವದುರ್ಗಾ ಆರ್ಲಪದವು, ವಿದ್ಯಾ, ಶ್ರೀಹರಿ ಎನ್‌. ನಡುಕಟ್ಟ ಅವರು ಸಹಕರಿಸಿದರು.

Advertisement

ದೇವಸ್ಥಾನಕ್ಕೆ ಭೇಟಿ
ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಲಾಯಿತು. ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ಕಡಮಾಜೆ ಮಾಹಿತಿ ನೀಡಿದರು. ಪ್ರಸಾದ್‌ ಆರ್ಲಪದವು, ಗೋಪಾಲ ಮಣಿಯಾಣಿ ದೇವಸ್ಯ, ಪಾಣಾಜೆ ಗ್ರಾ.ಪಂ. ಸದಸ್ಯೆ ರತ್ನಾವತಿ ಚನಿಯಪ್ಪ ನಾಯ್ಕ ಮಕ್ಕಳಿಗೆ ಪಾನೀಯದ ವ್ಯವಸ್ಥೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next