Advertisement

ಮಕ್ಕಳ, ಮಹಿಳೆ ಹಕ್ಕು ರಕ್ಷಣೆಗೆ “ಉಡುಪಿ ಮಾಡೆಲ್‌’

04:14 PM Apr 01, 2017 | Team Udayavani |

ಉಡುಪಿ: ಮಕ್ಕಳ ಸಮಗ್ರ ಸಂರಕ್ಷಣೆಗೆ ಸಂಬಂಧಿಸಿ ಸರಕಾರ ಸಮರ್ಪಕ ನೀತಿ ರೂಪಿಸಿದೆ. ಇದಕ್ಕೆ ಪೂರಕವಾಗಿ ಹಾಗೂ ಅನುಷ್ಠಾನಕ್ಕೆ ಒತ್ತು ಕೊಟ್ಟು ಉಡುಪಿಯಲ್ಲಿ ಮಕ್ಕಳು ಮತ್ತು ಮಹಿಳೆಗೆ ಸಂಬಂಧಿಸಿ ನೀತಿಯೊಂದನ್ನು ರೂಪಿಸುವ ನಿರ್ಧಾರಕ್ಕೆ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ  ಕ್ರಮ ಕೈಗೊಳ್ಳಲಾಯಿತು.

Advertisement

ಮಕ್ಕಳ ಸಂರಕ್ಷಣೆಗೆ ಒತ್ತು ನೀಡಿ ಗ್ರಾಮ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಮೂರು ಹಂತದ ಸಮಿತಿಯನ್ನು ರಚಿಸಿ ಜಿಲ್ಲೆಯ ಮಕ್ಕಳ ರಕ್ಷಣಾಧಿಕಾರಿ ವಿದ್ಯಾಂಗ ಇಲಾಖೆಯ ರಾಮಚಂದ್ರ ರಾಜೇ ಅರಸ್‌ ಅವರನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಯಿತು. ಮೂರು ತಿಂಗಳಿಗೊಮ್ಮೆ ಸಭೆಯನ್ನು ಕರೆಯಲು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು. 

ಬೇಸಗೆ ರಜೆಯಲ್ಲಿ ವಿವಿಧ ಕಾರಣಗಳಿಂದ ದುಡಿಯುವ ಮಕ್ಕಳನ್ನು ಮಾನವೀಯವಾಗಿ ನೋಡಲು ಹಾಗೂ ಹೆತ್ತವರೊಂದಿಗೆ ಹೊಲಗದ್ದೆಗಳಲ್ಲಿ ದುಡಿಯುವ ಮಕ್ಕಳ ಜೊತೆ ನಿಷ್ಠುರವಾಗಿ ವರ್ತಿಸದಂತೆ ಮಕ್ಕಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದ ನಮ್ಮ ಭೂಮಿ ಸಂಸ್ಥೆಯ ಪ್ರತಿನಿಧಿ ಕೋರಿಕೊಂಡರು.

ಮಕ್ಕಳ ಜೊತೆ ಉತ್ತಮ ರೀತಿಯಲ್ಲೇ ವ್ಯವಹರಿಸುತ್ತಿರುವುದಾಗಿ   ಕಾರ್ಮಿಕ ಅಧಿಕಾರಿಗಳು ನುಡಿದರು. ಡಾ| ಸತೀಶ್‌ ನಾಯಕ್‌ ಮಾತನಾಡಿ, ಮಕ್ಕಳ ರಕ್ಷಣೆಯ ಬಗ್ಗೆ ನೀತಿ ನಿರೂಪಣೆಗಳು ಅತ್ಯುತ್ತಮವಾಗಿದ್ದು, ಸಂವಹನವೋ ಅಥವಾ ಇನ್ನಾವುದೋ ಕೊರತೆಯಿಂದಾಗಿ ಅನುಷ್ಠಾನದಲ್ಲಿ ತೊಂದರೆಯಾಗುತ್ತಿದೆ. ಇದಕ್ಕೆ ಸಮಾಜದ, ಸಾಮಾಜಿಕ ಸಂಘಟನೆಗಳ ಸಹಕಾರ ಅಗತ್ಯ ಎಂದರು. ಸಮಗ್ರ ಮೇಲ್ವಿಚಾರಣೆಯ ಹೊಣೆಯನ್ನು ವ್ಯವಸ್ಥೆ ಹೊರಬೇಕಾಗುತ್ತದೆ ಎಂದರು.

ಮಕ್ಕಳ ದುಡಿಮೆ ಮತ್ತು ದೌರ್ಜನ್ಯದ ಕುರಿತು  ಅಭಿಪ್ರಾಯವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ. ಕೆ. ನಾರಾಯಣ ಅವರು ಮುಂದಿಟ್ಟು, ಮಾಧ್ಯಮಗಳು ಮಕ್ಕಳ ಫೋಟೋಗಳನ್ನು, ಗುರುತುಗಳನ್ನು ಬಹಿರಂಗಪಡಿಸಬಾರದೆಂದೂ ಹೇಳಿದರು. ಅಪಾಯಕಾರಿ ತೆರೆದ ಹೊಂಡ, ಕೊಜೆ ಹೊಂಡಗಳು, ಕೃಷಿ ಹೊಂಡಗಳು, ಮದಗಗಳು, ಅನಾಥವಾಗಿರುವ ಕೋರೆ ಗುಂಡಿಗಳನ್ನು ಗುರುತಿಸಿ ಬೇಲಿ ಹಾಕಲು, ಎಚ್ಚರಿಕೆ ಬೋರ್ಡ್‌ಗಳನ್ನು ಹಾಕಲು ಕೆಆರ್‌ಐಡಿಎಲ್‌ನವರಿಗೆ  ಜಿಲ್ಲಾಧಿಕಾರಿಗಳು  ಸೂಚಿಸಿದರು. ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದವರಿಗೆ ಇದರ ಹೊಣೆ ವಹಿಸಲಾಯಿತು. 

Advertisement

ಕುಂದಾಪುರದ ಮಹಿಳೆಯರು ವ್ಯಾಪಕವಾಗಿ ಅಕ್ರಮ ಮದ್ಯ ಎಲ್ಲೆಡೆ ದೊರೆಯುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಸೆಳೆದರು. ಈ ಸಂಬಂಧ ಪ್ರತ್ಯೇಕ ಸಭೆಯನ್ನು ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರೊಂದಿಗೆ ನಡೆಸುವುದಾಗಿ ಜಿಲ್ಲಾಧಿಕಾರಿ ಹೇಳಿದರು.

ಸಹಾಯಕ ಆಯುಕ್ತೆ ಶಿಲ್ಪಾನಾಗ್‌, ಅಪರ ಜಿಲ್ಲಾಧಿಕಾರಿ ಅನುರಾಧಾ, ಜಿಲ್ಲಾ ಆರೋಗ್ಯ ಕಲ್ಯಾಣಾಧಿಕಾರಿ ರೋಹಿಣಿ, ಕೆಆರ್‌ಐಡಿಎಲ್‌ನ ಕೃಷ್ಣ ಹೆಬೂÕರ್‌, ಪಿಆರ್‌ಇಡಿಯ ರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್‌, ಗಣಿ ಮತ್ತು ಭೂವಿಜಾnನ ಇಲಾಖೆ ಅಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. 
 

Advertisement

Udayavani is now on Telegram. Click here to join our channel and stay updated with the latest news.

Next