Advertisement

ವಿಚಿತ್ರ ರೋಗದಿಂದ ಬಳಲುತ್ತಿರುವ ಮಕ್ಕಳು, ಸರಕಾರದ ನೆರವಿನ ನಿರೀಕ್ಷೆ

12:46 PM May 10, 2022 | Team Udayavani |

ಮಲ್ಪೆ: ಶಿಥಿಲಾವಸ್ಥೆಯಲ್ಲಿರುವ ಮನೆ, ಕಿತ್ತು ತಿನ್ನುವ ಬಡತನ, ದಿನಗೂಲಿಯನ್ನು ಅವಲಂಬಿಸಿದ್ದ ಕುಟುಂಬದಲ್ಲಿ ಕಳೆದ 23 ವರ್ಷಗಳಿಂದ ಹಾಸಿಗೆ ಹಿಡಿದ ಮೂವರು ಮಕ್ಕಳು.

Advertisement

ಇದು ಆಪತ್ಭಾಂಧವ, ಜೀವ ರಕ್ಷಕ ಈಶ್ವರ್‌ ಮಲ್ಪೆ ಅವರ ಕುಟುಂಬದ ಕಥೆ, ವ್ಯಥೆ. ಮಕ್ಕಳು ವಿಚಿತ್ರ ರೋಗದಿಂದ ಬಳಲುತ್ತಿದ್ದಾರೆ. ಹಿರಿಯ ಪುತ್ರ 23 ವರ್ಷ ಪ್ರಾಯದ ನಿರಂಜನ್‌ಗೆ ಒಂದು ವರ್ಷ ಆಗು ವಾಗ ಮೂರ್ಛೆ ರೋಗ ಕಾಣಿಸಿಕೊಂಡಿದ್ದು ಅಂದಿನಿಂದ ದೇಹದ ಬೆಳವಣಿಗೆ ಇಲ್ಲದೆ ಹಾಸಿಗೆ ಬಿಟ್ಟು ಮೇಲೆದ್ದಿಲ್ಲ. ಆತ ಇದೇ ಜ.29ರಲ್ಲಿ ಇಹಲೋಕ ತ್ಯಜಿಸಿದ್ದಾನೆ.

ಎರಡನೇ ಮಗ ಕಾರ್ತಿಕನಿಗೂ ಮೂರ್ಛೆ ರೋಗದ ಕಾಯಿಲೆ. ಬುದ್ಧಿ ಬೆಳೆಯದೆ ತಾಯಿ ಆಸರೆಯಲ್ಲಿ ಹಾಸಿಗೆಯಲ್ಲಿ ದಿನ ಕಳೆಯುತ್ತಿದ್ದಾನೆ. ಈಗ ಆತನಿಗೆ 21ವರ್ಷ ವಯಸ್ಸು, ದೇಹದ ಅಂಗಾಂಗಗಳು ಸ್ವಾಧೀನದಲ್ಲಿಲ್ಲ. ಮಗಳ ಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ. ಪ್ರಸ್ತುತ 5 ವರ್ಷ ಪ್ರಾಯದ ಈಕೆಗೂ ಮೂರ್ಛೆ ರೋಗ. ಸ್ಪರ್ಶ ಜ್ಞಾನ ಇಲ್ಲ. ಈಗಿರುವ ಮಗ ಕಾರ್ತಿಕನಿಗೆ ಕಾಲುಗಳನ್ನು ಮಡಚಲಾಗದು, ಎಲ್ಲಿ ಕುಳಿತಿರುತ್ತಾನೆ ಅಲ್ಲಿ ಕಲ್ಲಿನಂತಿರುತ್ತಾನೆ. ಅವನಿಗೆ ಚಲನವಲನ ಶಕ್ತಿ ಇಲ್ಲ. ಅವರಿಗೆ ಅನೇಕ ವರ್ಷಗಳಿಂದ ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಿಲ್ಲ. ಮಕ್ಕಳನ್ನು ರಕ್ಷಿಸಿಕೊಳ್ಳಲು ದಂಪತಿ ಮಾಡಿದ ಸಾಲ ಬೆಟ್ಟದಷ್ಟಿದೆ. ಇದು ಕುಟುಂಬಕ್ಕೆ ನುಂಗಲಾರದ ತುತ್ತಾಗಿದೆ. ಮಕ್ಕಳಿಬ್ಬರನ್ನು ನೋಡಿ ಕೊಳ್ಳುತ್ತಿರುವುದರಿಂದ ಪತ್ನಿ ಕೂಲಿ ಕೆಲಸಕ್ಕೆ ಹೋಗುವಂತಿಲ್ಲ.

ಹಲವು ಬಾರಿ ಸರಕಾರಿ ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಇಬ್ಬರೂ ಮಕ್ಕಳಿಗೆ ಅಂಗವಿಕಲ ವೇತನ ಬಿಟ್ಟರೆ ಸರಕಾರದಿಂದ ಬೇರೇನೂ ಸಿಕ್ಕಿಲ್ಲ. ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಾರ್ವಜನಿಕರ ನೆರವು ಬೇಕಾಗಿದೆ. ಕರಾವಳಿ ಕಾವಲು ಪೊಲೀಸ್‌ ಪಡೆಗೆ ಅರ್ಜಿ ಸಲ್ಲಿಸಿದರೂ 9ನೇ ತರಗತಿಯವರೆಗೆ ಕಲಿತ ಈಶ್ವರ್‌ಗೆ ಶಿಕ್ಷಣ ಕಡಿಮೆ ಎಂದು ರದ್ದು ಪಡಿಸಿದ್ದಾರೆ ಎನ್ನಲಾಗಿದೆ.

ಜೀವರಕ್ಷಕನ ಉಚಿತ ಸೇವೆ

Advertisement

ಮಲ್ಪೆ ಮೀನುಗಾರಿಕೆ ಬಂದರು, ಬೀಚ್‌ ಮಾತ್ರವಲ್ಲ ದೂರದ ಕಳಸ, ಶೃಂಗೇರಿ, ಯುಗಟೆ ಡ್ಯಾಂ, ಶಿವಮೊಗ್ಗ, ತುಮಕೂರಿಗೂ ಕರೆಯ ಮೇರೆಗೆ ಹೋಗು ತ್ತಾರೆ. ಈಶ್ವರರಿಗೆ ಅಗ್ನಿಶಾಮಕ ದಳ, ಪೊಲೀಸ್‌ ಇಲಾಖೆ, ಕೋಸ್ಟ್‌ಗಾರ್ಡ್‌ ನಿಂದ ಮೊದಲ ಕರೆ ಬರುತ್ತದೆ. ಆಕ್ಸಿಜನ್‌ ನೆರವಿಲ್ಲದೆ 40ಅಡಿ ಆಳಕ್ಕೆ, ಸ್ಕೂಬಾ ಆಕ್ಸಿಜನ್‌ಆಳವಡಿಸಿ 85 ಅಡಿ ಆಳಕ್ಕಿಳಿದು ಮುಳುಗಿದವರನ್ನು ಮೇಲಕ್ಕೆತ್ತುತ್ತಾರೆ.

ನೀರಿನಾಳದಿಂದ ಈ ವರೆಗೆ 40 ಜನರ ರಕ್ಷಣೆ, 280 ಮೃತದೇಹಗಳನ್ನು ಮೇಲಕ್ಕ ಎತ್ತಿರುವ ಈಶ್ವರ ನಯಾ ಪೈಸೆ ಪಡೆಯದೆ ಉಚಿತವಾಗಿ ಮಾಡುತ್ತಿದ್ದಾರೆ. ಮಲ್ಪೆ ಬಂದರಿನಲ್ಲಿ ಈವರೆಗೆ 75 ಬೈಕ್‌, 8 ಟೆಂಪೋ ರಿಕ್ಷಾ, 200 ಮೊಬೈಲ್‌ಗ‌ಳನ್ನು ನೀರಿನಾಳಕ್ಕೆ ಮುಳುಗಿ ಮೇಲೆ ತಂದಿದ್ದಾರೆ. ಸಮುದ್ರದ ಎಲ್ಲ ವಿಷಯಗಳಲ್ಲಿ ಪರಿಣತಿಯನ್ನು ಪಡೆದು ಈಶ್ವರ್‌ ಅವರಿಗೆ ಸಮುದ್ರಕ್ಕೆ ಸಂಬಂಧಪಟ್ಟ ಸರಕಾರಿ ಕೆಲಸ ಸಿಗಬೇಕಾದುದು ನ್ಯಾಯ.

Advertisement

Udayavani is now on Telegram. Click here to join our channel and stay updated with the latest news.

Next