ಕೆ.ಆರ್.ಪೇಟೆ: ಯುವಜನರು ತಾಂತ್ರಿಕ ಕೌಶಲ್ಯ ಸದ್ಭಳಕೆ ಮಾಡಿಕೊಂಡು ಸುಭದ್ರ ರಾಷ್ಟ್ರದ ನಿರ್ಮಾಣಕ್ಕೆ ಮುಂದಾಗಬೇಕೆಂದು ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಆಶಾಕಾಮತ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಥಮ ವರ್ಷದ ನೂತನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೀಳರಿಮೆ ಬೇಡ:ಯುವಕರು ಎಂಜಿನಿಯರಿಂಗ್ ಕೌಶಲ್ಯ ಅಭಿವೃದ್ಧಿಪಡಿಸಿಕೊಂಡರೆ ಸುಭದ್ರ ಸಮಾಜ ನಿರ್ಮಿಸಲು ಸಹಕಾರಿಯಾಗಲಿದೆ. ಭವಿಷ್ಯದ ಎಂಜಿನಿ ಯರ್‌ಗಳಾಗಿ ತಮ್ಮ ಭವಿಷ್ಯವನ್ನು ಕಂಡುಕೊಳ್ಳಲು ತಾಂತ್ರಿಕ ಶಿಕ್ಷಣ ಅವಶ್ಯ. ಬಹಳ ಬೇಡಿಕೆ ಹೊಂದಿರುವ ಡಿಪ್ಲೋಮಾ ಎಂಜಿನಿಯರಿಂಗ್ ವ್ಯಾಸಂಗ ನಮ್ಮ ವ್ಯಕ್ತಿತ್ವದ ವಿಕಸನಕ್ಕೆ ಪೂರಕವಾಗಿದೆ ಎಂದು ಹೇಳಿದರು. ಹೊಸ ಹೊಸ ಸಂಶೋಧನೆಗಳನ್ನು ನಡೆಸಿ ನಮ್ಮ ಪ್ರತಿಭೆಯನ್ನು ಹೊರಚೆಲ್ಲಲು ವರದಾನವಾಗಿದೆ. ಯುವಜನರು ತಮ್ಮಲ್ಲಿನ ಕೀಳರಿಮೆ ತೊರೆದು ಸ್ವಾಭಿ ಮಾನಿಗಳಾಗಿ ಸಾಧಿಸುವ ಛಲ ಮೈಗೂಡಿಸಿ ಕೊಳ್ಳಬೇಕೆಂದರು.
ತಾಂತ್ರಿಕ ವಿಭಾಗದ ಪ್ರಾಧ್ಯಾಪಕರಾದ ಗುರುಸ್ವಾಮಿ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೆ ಆಂಗ್ಲಮಾಧ್ಯಮದ ಡಿಪ್ಲೋಮಾ ವ್ಯಾಸಂಗ ಸ್ವಲ್ಪ ದಿನಗಳ ಮಟ್ಟಿಗೆ ಕಷ್ಟವಾಗುತ್ತದೆ. ಆದರೆ, ಶ‌್ರದ್ಧೆಯಿಂದ ಕಲಿಯುವ, ಸಾಧಿಸುವ ಛಲ ನಿಮ್ಮಲ್ಲಿದ್ದರೆ ಸುಲಭವಾಗಿ ಸಾಧನೆ ಮಾಡಬಹುದು. ಹೀಗಾಗಿ ಯುವಜನರು ಏಕಾಗ್ರತೆಯ ವ್ಯಾಸಂಗದಲ್ಲಿ ತಮ್ಮನ್ನು ಸಮರ್ಪಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಾಗೆಯೇ ಉತ್ತಮವಾದ ವಿದ್ಯಾರ್ಥಿಗಳಾಗಿ ಗುರುಗಳ ಮಾರ್ಗದರ್ಶನ ಪಡೆದುಕೊಂಡು ಸಾಧನೆ ಹಾದಿಯಲ್ಲಿ ಮುನ್ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಸುಬ್ರಹ್ಮಣ್ಯ, ನಾಗೇಶ್, ಜಯ, ಆಶಾಲತಾ, ಕೃಷ್ಣ, ಸತೀಶ್, ಕೇಶವ, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಡಾ.ಕೆ.ಆರ್.ನೀಲಕಂಠ, ವನಿತಾ, ಮಮತಾ, ರಶ್ಮೀ, ದಿವ್ಯಾ ಮತ್ತಿತರರು ಉಪಸ್ಥಿತರಿದ್ದರು.