Advertisement

ಮಕ್ಕಳೇ ಮೊಬೈಲ್‌ ಬಿಡಿ, ಗಿಲ್ಲಿ ದಾಂಡು ಆಡಿ! ಶಾಲೆಗಳಲ್ಲೇ 75 ದೇಸಿ ಕ್ರೀಡೆಗಳ ಪರಿಚಯ

12:13 AM Aug 01, 2022 | Team Udayavani |

ಹೊಸದಿಲ್ಲಿ: ಇಂದಿನ ಮಕ್ಕಳಿಗೆ ಗ್ರಾಮೀಣ ಕ್ರೀಡೆಗಳು, ಆಟಗಳ ಪರಿಚಯವೇ ಇಲ್ಲ. ಸ್ವಲ್ಪ ಸಮಯ ಸಿಕ್ಕರೂ ಮೊಬೈಲ್‌, ಲ್ಯಾಪ್‌ಟಾಪ್‌ ಮುಂದೆ ಕುಳಿತುಕೊಂಡು ಬಿಡುತ್ತಾರೆ. ಇದು ಎಲ್ಲ ಹೆತ್ತವರ ಅಳಲು. ಇಂಥ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಶಾಲೆಯಲ್ಲೇ ಗ್ರಾಮೀಣ ಆಟಗಳನ್ನು ಕಲಿಸಿಕೊಟ್ಟರೆ ಹೇಗಿರುತ್ತದೆ?

Advertisement

ಹೌದು. ಕೇಂದ್ರ ಸರ‌ಕಾರ ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ. ಕರ್ನಾಟಕ ಹಾಗೂ ಒಡಿಶಾದ ಗ್ರಾಮೀಣ ಕ್ರೀಡೆಗಳಲ್ಲಿ ಒಂದಾದ ಗಿಲ್ಲಿ ದಾಂಡು (ಚಿನ್ನಿ ದಾಂಡು) ಸೇರಿದಂತೆ ಒಟ್ಟು 75 “ಭಾರತೀಯ ಆಟ’ಗಳನ್ನು ಶಾಲೆಗಳಲ್ಲೇ ಕಲಿಸಿಕೊಡುವ ಘೋಷಣೆ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಶುಕ್ರವಾರ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಎರಡನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಈ ಯೋಜನೆಗೆ ಚಾಲನೆ ನೀಡಿದ್ದಾರೆ.

ಶಿಕ್ಷಣ ಸಚಿವಾಲಯದ ಭಾರತೀಯ ಜ್ಞಾನ ವ್ಯವಸ್ಥೆ(ಐಕೆಎಸ್‌)ಯಡಿ ಇದನ್ನು ಜಾರಿಗೆ ತರಲಾಗಿದೆ.

ಏನಿದು ದೇಸಿ ಕ್ರೀಡೆಗಳು?: ಈ ಯೋಜನೆಯಂತೆ, ಭಾರತದಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಿಂದಿನಿಂದಲೂ ಚಾಲ್ತಿಯಲ್ಲಿದ್ದ ಆಟಗಳು ಹಾಗೂ ಕ್ರೀಡೆಗಳನ್ನು ಶಾಲೆಗಳಲ್ಲಿ ಪರಿಚಯಿಸಲಾಗುತ್ತದೆ.

ಗಿಲ್ಲಿ ದಾಂಡು, ಕಬಡ್ಡಿ, ಪಗಡಿ ಪಾಟ್‌(ಲೂಡೋ ಮಾದರಿ ಆಟ), ರಾಜಾ ಮಂತ್ರಿ ಚೋರ್‌ ಸಿಪಾಯಿ, ಪೋಷಂ ಪಾ, ಕಂಚೆ,  ಜಾವಲಿನ್‌ ಎಸೆತ, ಗಾಳಿಪಟ ಹಾರಿಸುವುದು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಚಾಲ್ತಿಯಲ್ಲಿದ್ದ ಒಟ್ಟು 75 ಆಟಗಳನ್ನು “ದೇಸಿ ಕ್ರೀಡೆಗಳು’ ಎಂಬ ಪಟ್ಟಿಗೆ ಸೇರಿಸಲಾಗಿದೆ ಎಂದು ಐಕೆಎಸ್‌ ರಾಷ್ಟ್ರೀಯ ಸಮನ್ವಯಕಾರ ಗಾಂಥಿ ಎಸ್‌. ಮೂರ್ತಿ ಹೇಳಿದ್ದಾರೆ.

Advertisement

ಉದ್ದೇಶವೇನು?
ಶಾಲೆಗಳಲ್ಲಿ ಭಾರತೀಯ ಕ್ರೀಡೆಗಳಿಗೆ ಉತ್ತೇಜನ ನೀಡುವುದು ಮಾತ್ರವಲ್ಲ ಶಾಲಾ ಮಟ್ಟದಲ್ಲೇ ಕ್ರೀಡೆಗಳು ಒಳಗೊಳ್ಳುವಂತೆ ಮಾಡುವುದು ಉದ್ದೇಶವಾಗಿದೆ ಎನ್ನುತ್ತಾರೆ ಮೂರ್ತಿ. ಗ್ರಾಮೀಣ ಶಾಲೆ ಗಳಲ್ಲಿ ಬಾಸ್ಕೆಟ್‌ಬಾಲ್‌, ಬ್ಯಾಡ್ಮಿಂಟನ್‌ನಂಥ ಆಟಗಳಿಗೆ ಬೇಕಾದ ಮೂಲ ಸೌಕರ್ಯ ಲಭ್ಯವಿಲ್ಲ. ಹೀಗಾಗಿ, ಅಂಥ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಮೂಲಕ ಸ್ಥಳೀಯ ಆಟ ಪರಿಚಯಿಸಲು ನಿರ್ಧರಿಸಿದ್ದೇವೆ. ಅವು ಗಳು ಹೆಚ್ಚು ಸೃಜನಾತ್ಮಕವಾಗಿದ್ದು, ದೇಶದ ಸಂಸ್ಕೃತಿಯೊಂದಿಗೆ ನಂಟು ಹೊಂದಿರುತ್ತವೆ ಎಂದೂ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next