ದೇವನಹಳ್ಳಿ: ತಾಲೂಕಿನ ಚೌಡಪ್ಪನಹಳ್ಳಿ ನಳಂದ ಇಂಟರ್‌ನ್ಯಾಷನಲ್ ಶಾಲೆ ಗ್ರಾಮಿಣ ಪ್ರದೇಶದಲ್ಲಿ ವಿದ್ಯಾದಾನದೊಂದಿಗೆ ಪಠ್ಯೇತರ ಚಟುವಟಿಕೆ ಗಳಿಗೂ ಪ್ರೋತ್ಸಾಹ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಲಕ್ಷ್ಮಣ್‌ಗೌಡ ತಿಳಿಸಿದರು. ತಾಲೂಕಿನ ಚೌಡಪ್ಪನಹಳ್ಳಿ ನಳಂದ ಇಂಟರ್‌ನ್ಯಾಷನಲ್ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ನೂತನವಾಗಿ ನಿರ್ಮಿಸಿರುವ ಈಜುಗೊಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈಜು ಜೀವನಕ್ಕೆ ಸ್ಫೂರ್ತಿ: ವಿದ್ಯಾರ್ಥಿಗಳು ಮರ ಹತ್ತುವುದು, ಈಜು ಕಲಿತರೆ ಆರೋಗ್ಯಕ್ಕೆ ಒಳ್ಳೆಯದು. ಈಜುವುದು ಒಂದು ಕಲೆ. ಮಕ್ಕಳಿಗೆ ಈಜುವ ಕಲೆಯಲ್ಲಿ ವಿಶೇಷ ಆಸಕ್ತಿ ಇರುತ್ತದೆ. ಜೀವನಕ್ಕೆ ಸ್ಫೂರ್ತಿ ನೀಡಿ, ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳಲು ಈಜು ಸಹಕಾರಿಯಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳ್ಳಲಿ: ಸಂಸ್ಥೆಗೆ ಉಜ್ವಲ ಭವಿಷ್ಯವಿದ್ದು, ಮಾದರಿ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳ್ಳುವಂತೆ ಮಾಡಲಿ ಎಂದು ಶುಭ ಹಾರೈಸಿದರು. ಅಲ್ಲದೇ, ಸಂಸ್ಥೆಯ ವಿದ್ಯಾರ್ಥಿಗಳು ಬುದ್ಧಿವಂತರಾದರೆ ದೇಶ ಕ್ಕೆ ಮಾದರಿಯಾಗುತ್ತಾರೆಂದು ಅಭಿಪ್ರಾಯಪಟ್ಟರು.
ಆರೋಗ್ಯ ವೃದ್ಧಿಗೆ ಈಜು ಸಹಕಾರಿ: ಸಂಸ್ಥೆಯ ಅಧ್ಯಕ್ಷ ಲೋಕೇಶ್ ಮಾತನಾಡಿ, ದೇಹದ ಸಂಪೂರ್ಣ ಆರೋಗ್ಯ ವೃದ್ಧಿಗೆ ಈಜು ಒಂದು ಪ್ರಮುಖ ಕ್ರೀಡೆಯಾಗಿದೆ. ದೇಶದಲ್ಲಿ ಕ್ರಿಕೆಟ್‌ಗೆ ನೀಡಿದಂತಹ ಪ್ರಾಶಸ್ತ್ಯ ಈಜಿಗೆ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಈಜು ಕ್ರೀಡೆಯನ್ನು ಹೆಚ್ಚು ಹೆಚ್ಚು ಪ್ರಚು ರಗೊಳಿಸಲು ಶಾಲೆಯ ಆಡಳಿತ ಮಂಡಳಿಯಿಂದ ಸ್ಪರ್ಧೆ ಹಾಗೂ ಅನೇಕ ಚಟುವಟಿಕೆಗಳ ಮೂಲಕ ಉತ್ತೇಜನ ನೀಡಲಾಗುತ್ತಿದೆ ಎಂದು ಹೇಳಿದರು.
ರಾಷ್ಟ್ರಕ್ಕೆ ಕೀರ್ತಿ ತನ್ನಿ: ಬೂದಿಗೆರೆ ಗ್ರಾಮ ಪಂಚಾ ಯಿತಿ ಅಧ್ಯಕ್ಷ ಶ್ರೀನಿವಾಸಗೌಡ ಮಾತನಾಡಿ, ಹಿಂದಿನ ಕಾಲದಲ್ಲಿ ಮಕ್ಕಳಿಗೆ ಈಜು ಕಲಿತರೆ ನೀರಿನಲ್ಲಿ ಮುಳುಗಿದವರನ್ನು ಆಪತ್ತಿನಿಂದ ರಕ್ಷಿಸ ಬಹುದು ಎಂದು ಹೇಳುತ್ತಿದ್ದರು. ಮರ ಹತ್ತು ವುದನ್ನು ಕಲಿತರೆ ಕೈ ಕಾಲು ಮುರಿಯುತ್ತದೆ. ಆದರೆ, ಈಜು ಕಲಿತರೆ ಎಲ್ಲಾ ದೈಹಿಕ ವ್ಯಾಯಾ ಮಗಳ ತಾಯಿ ಈಜಿನಿಂದ ದೈಹಿಕ ಸ್ವಾಸ್ಥ ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಈಜುಪಟುಗಳನ್ನು ಬೆಳೆಸಿ, ರಾಷ್ಟ್ರಕ್ಕೆ ಕೀರ್ತಿ ತರುವಂತಾಗಲಿ ಎಂದು ಹಾರೈಸಿದರು.
ಈ ವೇಳೆ ವಿಎಸ್‌ಎಸ್‌ಎನ್ ಅಧ್ಯಕ್ಷ ಶಂಕರಪ್ಪ, ಗಂಗವಾರ-ಚೌಡಪ್ಪನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಪ್ರೇಮಾ ರಾಮಸ್ವಾಮಿ, ಹೆಗಡೆಹಳ್ಳಿ ಗ್ರಾಪಂ ಅಧ್ಯಕ್ಷೆ ಎಸ್.ಗಾಯಿತ್ರಿ ತಿಮ್ಮರಾಯಪ್ಪ, ಗಂಗ ವಾರ-ಚೌಡಪ್ಪನಹಳ್ಳಿ ನಾರಾಯಣಮ್ಮ ಮಂಜು ನಾಥ್, ಎಂ.ರಾಜಣ್ಣ, ಸರಸ್ವತಿ ರಾಮಚಂದ್ರ, ವಕೀಲ ಮಹೇಶ್ ದಾಸ್, ಪ್ರಾಂಶುಪಾಲೆ ಮೇರಿ ಸೇಲ್ವಿ ಸೇರಿದಂತೆ ಮಕ್ಕಳ ಪೋಷಕರು, ವಿದ್ಯಾರ್ಥಿ ಗಳು ಮುಮತಾದವರು ಭಾಗವಹಿಸಿದ್ದರು.