Advertisement

ಬಾಲ ಕಲಾವಿದರ ಸುರಕ್ಷತೆ: 3 ಗಂಟೆಗೊಮ್ಮೆ ಬ್ರೇಕ್‌,ಶೇ.20 ಫಿಕ್ಸೆಡ್‌ ಡೆಪಾಸಿಟ್‌

09:26 AM Jun 26, 2022 | Team Udayavani |

ನವದೆಹಲಿ:ಮನರಂಜನಾ ಕ್ಷೇತ್ರದಲ್ಲಿ ಮಕ್ಕಳನ್ನು ಸತತ 27 ದಿನಗಳಿಗಿಂತ ಹೆಚ್ಚು ದಿನ ದುಡಿಸುವಂತಿಲ್ಲ, ಪ್ರತಿ 3 ಗಂಟೆಗಳಿಗೊಮ್ಮೆ ಬಾಲಕಲಾವಿದರಿಗೆ ವಿರಾಮ ನೀಡಬೇಕು, ಅವರ ಆದಾಯದ ಶೇ.20ರಷ್ಟನ್ನು ನಿಶ್ಚಿತ ಠೇವಣಿಯಲ್ಲಿ ಜಮೆ ಮಾಡಬೇಕು…

Advertisement

ಬಾಲಕಲಾವಿದರ ಸುರಕ್ಷತೆಯ ದೃಷ್ಟಿಯಿಂದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(ಎನ್‌ಸಿಪಿಸಿಆರ್‌) ಶನಿವಾರ ಹೊರಡಿಸಿರುವ ಹೊಸ ಕರಡು ಮಾರ್ಗಸೂಚಿಯಲ್ಲಿ ಈ ಎಲ್ಲ ಅಂಶಗಳನ್ನು ಕಡ್ಡಾಯಗೊಳಿಸಲಾಗಿದೆ.

ಶಿಕ್ಷಣಕ್ಕೆ ಅಡ್ಡಿಯಾಗಬಾರದು:
ಚಿತ್ರೀಕರಣದಲ್ಲಿ ಭಾಗಿಯಾಗಿರುವ ಮಕ್ಕಳ ಶಾಲಾ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತೆ ನಿರ್ಮಾಪಕರೇ ನೋಡಿಕೊಳ್ಳಬೇಕು. ಮನರಂಜನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಕಾರಣ ಶಾಲೆಗೆ ಮಕ್ಕಳು ಗೈರಾಗಿದ್ದರೆ, ಅಂಥ ಮಕ್ಕಳಿಗಾಗಿ ನಿರ್ಮಾಪಕರೇ ಒಬ್ಬ ಖಾಸಗಿ ಟ್ಯೂಟರ್‌ ಅನ್ನು ನೇಮಕ ಮಾಡಬೇಕು. ಮಕ್ಕಳಿಗೆ ನೀಡಲಾಗುವ ವೇತನದ ಶೇ.20ರಷ್ಟನ್ನು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಫಿಕ್ಸೆಡ್‌ ಡೆಪಾಸಿಟ್‌ ಆಗಿ ಜಮೆ ಮಾಡಬೇಕು.
ಬಾಲಕಲಾವಿದರು ಕೆಲಸ ಮಾಡುವ ಪರಿಸರವು ಸುರಕ್ಷಿತವಾಗಿದ್ದು, ಅವರ ಮೇಲೆ ಯಾವುದೇ ದೌರ್ಜನ್ಯಗಳು ಆಗದಂತೆ ನೋಡಿಕೊಳ್ಳಬೇಕು ಎಂದೂ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.

ಯಾವೆಲ್ಲ ಕ್ಷೇತ್ರಗಳಿಗೆ ಅನ್ವಯ?
ಟಿವಿ ಕಾರ್ಯಕ್ರಮಗಳು, ರಿಯಾಲಿಟಿ ಶೋಗಳು, ಧಾರಾವಾಹಿಗಳು, ಸುದ್ದಿ ಮತ್ತು ಮಾಹಿತಿ ಮಾಧ್ಯಮ, ಸಿನಿಮಾಗಳು, ಒಟಿಟಿ ಪ್ಲಾಟ್‌ಫಾರಂಗಳು, ಸಾಮಾಜಿಕ ಜಾಲತಾಣಗಳು, ಪ್ರದರ್ಶನ ಕಲೆ, ಜಾಹೀರಾತು ಹಾಗೂ ವಾಣಿಜ್ಯ ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿರುವ ಮಕ್ಕಳಿಗೆ ಈ ನಿಯಮಗಳು ಅನ್ವಯವಾಗುತ್ತದೆ.

ಮಾರ್ಗಸೂಚಿಯಲ್ಲಿರುವ ಕಡ್ಡಾಯ ನಿಯಮಗಳು
– ಆಯಾ ಜಿಲ್ಲಾಡಳಿತದಲ್ಲಿ ಬಾಲ ಕಲಾವಿದರ ನೋಂದಣಿ ಕಡ್ಡಾಯ
– ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗದಂತೆ ನಿರ್ಮಾಪಕರು ನೋಡಿಕೊಳ್ಳಬೇಕು
– ಸಮಯಕ್ಕೆ ಸರಿಯಾಗಿ ವೇತನ ಪಾವತಿಸಬೇಕು, ಶೇ.20ರಷ್ಟನ್ನು ಮಕ್ಕಳ ಹೆಸರಲ್ಲೇ ಠೇವಣಿ ಇಡಬೇಕು
– ಮಕ್ಕಳೊಂದಿಗೆ ಡ್ರೆಸ್ಸಿಂಗ್‌ ರೂಂ ಹಂಚಿಕೊಳ್ಳಲು ವಯಸ್ಕರಿಗೆ ಅವಕಾಶ ನೀಡಬಾರದು
– ಅಪಾಯಕಾರಿ ಬೆಳಕು, ಕಿರಿಕಿರಿ ಉಂಟುಮಾಡುವ ಅಥವಾ ಕಲುಷಿತ ಕಾಸೆ¾ಟಿಕ್‌ಗಳಿಂದ ಮಕ್ಕಳನ್ನು ದೂರವಿಡಬೇಕು
– ನಿರ್ಮಾಣ ಹಂತದಲ್ಲಿ ಮಕ್ಕಳ ಹಕ್ಕುಗಳ ನಿಯಮ ಪಾಲಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಬೇಕು
– ಮಕ್ಕಳ ವೈದ್ಯಕೀಯ ಫಿಟೆ°ಸ್‌ ಪ್ರಮಾಣಪತ್ರ, ಪೊಲೀಸ್‌ ದೃಢೀಕರಣ ಪತ್ರವನ್ನು ಪ್ರೊಡಕ್ಷನ್‌ ಟೀಂ ಒದಗಿಸಬೇಕು
– 6 ವರ್ಷದೊಳಗಿನ ಮಕ್ಕಳನ್ನು ಬಳಸುವುದಿದ್ದರೆ ನೋಂದಾಯಿತ ನರ್ಸ್‌ ಎಲ್ಲ ಸಮಯದಲ್ಲೂ ಅಲ್ಲಿರಬೇಕು
– ಹೆತ್ತವರು ಅಥವಾ ಪೋಷಕರು ಉಪಸ್ಥಿತಿಯಿರುವಂತೆ ನೋಡಿಕೊಳ್ಳಬೇಕು

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next