Advertisement

ಚೀನ ಜಿಮ್‌ನಲ್ಲಿ ಕಂದಮ್ಮಗಳ ಯಾತನೆ

06:00 AM Dec 21, 2018 | |

ಗ್ವಾಂಗಝೂ: ಚೀನದಲ್ಲಿ ಮಕ್ಕಳ ಹಕ್ಕುಗಳಿಗೆ, ಕನಸುಗಳಿಗೆ ಬೆಲೆಯೇ ಇರುವುದಿಲ್ಲ ಎನ್ನುವುದು ಮತ್ತೂಮ್ಮೆ ಸಾಬೀತಾಗಿದೆ. ಭವಿಷ್ಯದ ಕ್ರೀಡಾಪಟುಗಳನ್ನು ರೂಪಿಸುವ ಜಿಯಾಂಗ್‌ನ ಜಿಮ್‌ ಒಂದರಲ್ಲಿ ಮಕ್ಕಳೆಂದು ಕೂಡ ನೋಡದೆ ಹೃದಯ ಜಲ್‌ ಎನ್ನುವಂತಹ ಅಪಾಯಕಾರಿ ತರಬೇತಿಯನ್ನು ಎಗ್ಗಿಲ್ಲದೆ ನೀಡಲಾಗುತ್ತಿದೆ. ನೋವಿನ ಯಾತನೆ ತಾಳಲಾಗದೆ ಕಂದಮ್ಮಗಳು ಅಳುತ್ತಿದ್ದರೂ ಬಿಡದೆ ಕೋಲು ಹಿಡಿದು ಬೆದರಿಸಿ ತರಬೇತಿ ಕೊಡಲಾಗುತ್ತಿದೆ.

Advertisement

ಈ ವಿದ್ಯಮಾನ ವಿಶ್ವದ ಕ್ರೀಡಾ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಹರಿದಾಡುತ್ತಿದ್ದಂತೆ ಭಾರೀ ಟೀಕೆ ವ್ಯಕ್ತವಾಗಿದೆ. ರಿಯೋ ಒಲಿಂಪಿಕ್ಸ್‌ ಆರಂಭದಲ್ಲೂ ಚೀನದಲ್ಲಿ ನೀಡಲಾಗುವ ಕ್ರೀಡಾ ತರಬೇತಿಯ ಬಗ್ಗೆ ವ್ಯಾಪಕ ಟೀಕೆ ಕೇಳಿಬಂದಿತ್ತು. ಹೀಗಿದ್ದರೂ ಮುಂಬರುವ ಜಾಗತಿಕ ಕ್ರೀಡಾಕೂಟಗಳನ್ನು ಗಮನದಲ್ಲಿಟ್ಟುಕೊಂಡು ಪುಟ್ಟ ಮಕ್ಕಳನ್ನು ಪ್ರಾಣಿಗಳಿಗಿಂತಲೂ ಕಡೆಯಾಗಿ ನಡೆಸಿಕೊಂಡು ತರಬೇತಿ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next