Advertisement

ಶಾಲೆಯನ್ನೇ ಮರೆತ ಹಾಡಿಯ ಮಕ್ಕಳು : ಹಾಡಿಗಳಲ್ಲಿ ತಿರುಗಾಡುತ್ತಾ ಕಾಲಹರಣ

08:32 PM Nov 11, 2021 | Team Udayavani |

ಎಚ್‌.ಡಿ.ಕೋಟೆ: ಶಾಲೆಗಳು ಶುರುವಾಗಿ ತಿಂಗಳು ಕಳೆದರೂ ಕೆಲ ಹಾಡಿಗಳ ಮಕ್ಕಳು ಶಾಲೆಯನ್ನೇ ಮರೆತು ಕಾಲಹರಣ ಮಾಡುತ್ತಿದ್ದಾರೆ. ತಾಲೂಕಿನ ಭೀಮನಹಳ್ಳಿ ಆಶ್ರಮ ಶಾಲೆಯ ರಾಜೇಗೌಡನಹುಂಡಿ ಹಾಡಿಯ ಆದಿವಾಸಿ ಮಕ್ಕಳು ಶಾಲೆಗೆ ಹೋಗದೇ ಹಾಡಿಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇವರನ್ನು ಮನವೊಲಿಸಿ ಶಾಲೆಗೆ ಕಳುಹಿಸಲು ಯಾರೊಬ್ಬರೂ ಯಾವುದೇ ಕ್ರಮ ವಹಿಸಿಲ್ಲ.

Advertisement

ರಾಜೇಗೌಡನಹುಂಡಿ ಹಾಡಿಯಿಂದ ಕೇವಲ 1 ಕಿ.ಮೀ. ದೂರದ ಭೀಮನಹಳ್ಳಿ ಆಶ್ರಮ ಶಾಲೆಯಲ್ಲಿ ಹಾಡಿಯ ಮಕ್ಕಳು ಪ್ರವೇಶ ಪಡದಿವೆಯಾದರೂ ಇಲ್ಲಿಯ ತನಕ ತರಗತಿಗೆ ಹಾಜರಾಗಿಲ್ಲ. ಆದಿವಾಸಿ ಮಕ್ಕಳು ಶಾಲೆಗೆ ಹೋಗದೇ ರಸ್ತೆಯಲ್ಲಿ ಅಡ್ಡಾತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. ಮಕ್ಕಳು ಗುಂಪು ಕಟ್ಟಿಕೊಂಡು ಆಟೋಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಈ ಕುರಿತು ಮಕ್ಕಳನ್ನು ಪ್ರಶ್ನಿಸಿದರೆ, “ನಾವು ಶಾಲೆಗೆ ಹೋಗಲ್ಲ, ನಮಗೆ ಓದಕ್ಕೆ ಇಷ್ಟನೂ ಇಲ್ಲ’ ಎಂದು ನಿರುತ್ಸಾಹದ ಮಾತುಗಳನ್ನಾಡಿದರು. ದಿನಪೂರ್ತಿ ಗಿರಿಜನ ಮಕ್ಕಳು ಹಾಡಿಯಲ್ಲಿ ಬೀದಿ ಬೀದಿಗಳನ್ನು ಸುತ್ತುತ್ತಾ ಶಾಲೆಯ ಪರಿವೇ ಇಲ್ಲದಂತೆ ವರ್ತಿಸುತ್ತಿ ದ್ದಾರೆ. ಇವರ ಪೋಷಕರು ಅನಕ್ಷರಸ್ಥರಾಗಿದ್ದು, ಶಾಲೆ ಮಹತ್ವ ಇವರಿಗೆ ಗೊತ್ತಿಲ್ಲ. ಹೀಗಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಉತ್ಸಾಹ ತೋರುತ್ತಿಲ್ಲ.

ಹಾಡಿಯಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ಮಕ್ಕಳು ದಾರಿ ತಪ್ಪಿ ದುಶ್ಚಟಗಳಿಗೆ ಬಲಿಯಾಗುವ ಸಾಧ್ಯತೆ ಇದೆ. ಹೀಗಾಗಿ ಶಿಕ್ಷಣ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆ ಯರು ಕಾಳಜಿ ವಹಿಸಿ ಹಾಡಿಗಳ ಮಕ್ಕಳು ಶಾಲೆಗೆ ಹೋಗುವಂತೆ ಮನವೊಲಿ ಸಬೇಕು. ಮೇಲಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಗಮನ ಹರಿಸಿ ಆಶ್ರಮ ಶಾಲೆಗೆ ಮಕ್ಕಳು ಬರುವಂತೆ ಕ್ರಮ ವಹಿಸ ಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next