Advertisement
ನಾಲ್ಕು ಗೋಡೆ ನಡುವೆಯೇ ಆಡಿ ಕುಣಿಯುವ ನಗರದ ಚಿಣ್ಣರಿಗೆ ಪರಿಚಯಿಸಲೆಂದೇ ಆಯೋಜಿಸಿದ್ದ ಕಲೆ, ವಿಜ್ಞಾನ, ತಂತ್ರಜ್ಞಾನ, ಗ್ರಾಮೀಣ ಸಂಸ್ಕೃತಿ, ಕುಸ್ತಿ ಸೇರಿ, ಹಳ್ಳಿಗಾಡಿನ ವಿವಿಧ ಕ್ರೀಡೆಗಳು ಮೊದಲ ದಿನದ ಆಕರ್ಷಣೆಯಾಗಿದ್ದವು.
Related Articles
ನೀಡಲಾಗುತ್ತಿದೆ. ಮೀನು ಹಿಡಿಯಲು ಬಳಸುತ್ತಿದ್ದ ಹಳೆಯ ಬಲೆಗಳಿಂದ ಇತ್ತೀಚಿನ ದಿನಗಳಲ್ಲಿ ಬಳಕೆ ಮಾಡುತ್ತಿರುವ ಆಧುನಿಕ ಬಲೆಗಳವರೆಗಿನ ಸಚಿತ್ರ ಮಾಹಿತಿ ಇಲ್ಲಿದೆ.
Advertisement
ಫಲಪುಷ್ಪ ಪ್ರದರ್ಶನ: ತೋಟಗಾರಿಕೆ ಇಲಾಖೆಯಿಂದ ಸುಮಾರು 1.50 ಲಕ್ಷ ಗುಲಾಬಿ, ಅಂಥೇರಿಯಂ, ಲಿಲ್ಲಿ, ಬರ್ಡ್ ಆಫ್ ಪ್ಯಾರಡೈಸ್ ಇತ್ಯಾದಿ ಹೂವುಗಳನ್ನು ಬಳಸಿ ನಿರ್ಮಿಸಲಾಗಿರುವ ತಾಜ್‌ಮಹಲ್, ಮೆಕ್ಸಿಕೋದ ಮಾಯನ್ ನಾಗರಿಕತೆಯ ಚಿಂಚನ್ ಇಟ್ಜ್ ದೇವಸ್ಥಾನ (ಪಿರಮಿಡ್), ಲೋಟಸ್ ಟೆಂಪಲ್, ಕ್ಯಾಪ್ಸಿಕಂ ಬಳಸಿ ತಯಾರಿಸಲಾಗಿರುವ ಮಕ್ಕಳ ಸ್ನೇಹಿ ಪೊಲೀಸ್ ಠಾಣೆ, 24 ಅಡಿ ಎತ್ತರದ ಫ್ಲವರ್ ರೈನ್‌ಫಾಲ್, ಮರಗಳಿಗೆ ಪುಷ್ಪ ಅಲಂಕಾರ, ಸ್ಯಾಂಡ್ ಆರ್ಟ್, ಕಲ್ಲಂಗಡಿಗಳಲ್ಲಿ ಜ್ಞಾನಪೀಠ ಪುರಸ್ಕೃತರ ಕೆತ್ತನೆ, ಮಹಡಿ ಉದ್ಯಾನವನ, ಕಿಚನ್‌ಗಾರ್ಡನ್, ಅಣಬೆ ಬೇಸಾಯದ ಪ್ರಾತ್ಯಕ್ಷಿಕೆಗಳು ಮಕ್ಕಳನ್ನು ಸೆಳೆಯುತ್ತಿದೆ
ಹಬ್ಬದಲ್ಲಿ ಏನೆಲ್ಲಾ ಇದೆ ಗೊತ್ತಾ? ಮಡಿಕೆ ತಯಾರಿ, ರಾಗಿ ಬೀಸುವುದು, ಎತ್ತಿನ ಬಂಡಿ, ಕುದುರೆ ಟಾಂಗಾ ಸವಾರಿ, ಚಿತ್ರ ಬಿಡಿಸುವುದು, ಮೀನು ಹಿಡಿಯುವುದು, ಚೌಕಾಬಾರ, ಮಲ್ಲಕಂಬ, ಸೈಕಲ್ ಟೈರ್ ಸ್ಪರ್ಧೆ, ಕವಡೆ ಆಟ, ಮೊಸರು ಕಡೆಯುವುದು, ಜಾದು, ಜನಪದ ಕುಣಿತ, ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನ, ಮಿನಿತಾರಾಲಯ, ಸ್ಪೀಕರ್ ಮೂಲಕ ವಿವಿಧ ವನ್ಯ ಮೃಗ, ಪಕ್ಷಿಗಳ ಧ್ವನಿ ಕೇಳಿಸುವಿಕೆ, ಯೋಧರು ಬಳಸುವ ಬಂದೂಕು, ಉಡುಗೆ-ತೊಡುಗೆ, ಪೇಂಟಿಂಗ್ ಪ್ರದರ್ಶನ, ರಸಪ್ರಶ್ನೆ, ರಂಗೋಲಿ ಸ್ಪರ್ಧೆಗಳು ಈ ಹಬ್ಬದಲ್ಲಿವೆ. ಇಲ್ಲಿ ಮಕ್ಕಳು ಏನೇ ಆಟವಾಡಿದರೂ ಕಾಸಿಲ್ಲ! ನಾಲ್ಕು ದಿನಗಳ ಮಕ್ಕಳ ಹಬ್ಬ ಮಕ್ಕಳಲ್ಲಿ ಬೌದ್ಧಿಕ, ಶಾರೀರಿಕ, ಮಾನಸಿಕ ವಿಕಾಸಕ್ಕೆ ವೇದಿಕೆಯಾಗಲಿದೆ
ಎಂಬ ವಿಶ್ವಾಸವಿದೆ. ಆರೋಗ್ಯ, ಆಹಾರ ಪದ್ಧತಿ ಮತ್ತು ಗ್ರಾಮೀಣ ಕ್ರೀಡೆಗಳು, ದೇಸೀ ಸಂಸ್ಕೃತಿ, ಜಾನಪದ ಕಲೆಗಳ ಕುರಿತು ಮಕ್ಕಳಿಗೆ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ.
●ಉಮಾಶ್ರೀ, ಸಚಿವೆ